ಕನಕಗಿರಿ: ತಂದೆ ತಾಯಿಯೇ ದೇವರು ಎಂದು ಪೂಜಿಸುವ ಈ ಕಾಲದಲ್ಲಿ ಇಲ್ಲೋಬ್ಬ ಪಾಪಿ ಮಗನೊಬ್ಬ  ತನ್ನ ಹೆತ್ತವರನ್ನೇ ಕಬ್ಬಿಣದ ರಾಡ್​​ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದ 9ನೇ ವಾರ್ಡ್​ನಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

ರಮೇಶ್ ಮಡಿವಾಳರ (26) ಪೋಷಕರನ್ನು ಹತ್ಯೆ ಮಾಡಿದ ಆರೋಪಿ. ಅಕ್ಕಮ್ಮ (46) ಹಾಗೂ ಗಿರಿಯಪ್ಪ (56) ಮೃತರು. ರಮೇಶ್​​ನ ಪತ್ನಿಯನ್ನು ಮನೆಗೆ ಕರೆತರುವ ವಿಚಾರಕ್ಕೆ ಆರೋಪಿ ಹಾಗೂ ತಂದೆ- ತಾಯಿ ನಡುವೆ ಗಲಾಟೆಯಾಗಿದೆ. ಜಗಳ ತಾರಕಕ್ಕೇರಿದ್ದು, ರಾಡ್​​ನಿಂದ ಪೋಷಕರ ಮೇಲೆ ಹಲ್ಲೆ ಮಾಡಿದ್ದಾನೆ. ತಾಯಿ ಅಕ್ಕಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ, ತಂದೆ ಗಿರಿಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. 

ಸ್ಥಳಕ್ಕೆ ಕನಕಗಿರಿ ಪೊಲೀಸರು ಹಾಗೂ ಸಿಪಿಐ ಸುರೇಶ್ ತಳವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

You May Also Like

ಮುಂದಿನ ವಿಧಾನಸಭೆಗೆ ಗ್ರಾಪಂ, ತಾಪಂ, ಜಿಪಂ ಚುನಾವಣೆಗಳೇ ಮೆಟ್ಟಿಲು ಎಂದು ಕರೆ ನೀಡಿರುವ ಬಿಜೆಪಿ!

ಮಂಗಳೂರು : ಬಿಜೆಪಿಯು ಮುಂಬರುವ ಚುನಾವಣೆಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದೆ. ಪಕ್ಷ ಸಂಘಟನೆಗೆ ಈಗಿನಿಂದಲೇ ಮುಂದಾಗಿದೆ.

ಮುಖಕ್ಕೆ ಮಾಸ್ಕ ಧರಿಸದಿದ್ದರೆ 250 ರೂ ದಂಡ

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸದೆ ಇರುವದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕಂಡುಬಂದಲ್ಲಿ 250 ರೂ, ದಂಡ.

ಮೂರನೇ ಲಾಕ್ ಡೌನ್ ಅಂತ್ಯ – ನಾಲ್ಕರಲ್ಲಿ ಏನಿರತ್ತೆ? ಏನಿರಲ್ಲ?

ನವದೆಹಲಿ: ನಾಳೆ ಮೂರನೇ ಹಂತದ ಲಾಕ್ ಡೌನ್ ಗೆ ಕೊನೆಯ ದಿನ. ಹೀಗಾಗಿ ನಾಲ್ಕನೇ ಹಂತದ…