ಗದಗ: ಜಿಲ್ಲಾ ಪೈಲ್ವಾನರ ಮಾಶಾಸನ ಬಿಡುಗಡೆ ಮಾಡುವಂತೆ ಸಚಿವರಿಗೆ ಮನವಿ ನೀಡುವ ವೇಳೆ ಜಟಾಪಟಿ ನಡೆದ ಘಟನೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ. 

ಜಿಲ್ಲೆಯ ಅನೇಕ ಪೈಲ್ವಾನರು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ್ ಅವರಿಗೆ‌ ಮನವಿ ಸಲ್ಲಿಸಲು ಬಂದಿದ್ದರು. ಈ ವೇಳೆ ನಮ್ಮ ಸರ್ಕಾರದ ಅವಧಿಯಲ್ಲಿಯೇ ಕಲಾವಿದರ ಮಾಶಾಸನ ಹೆಚ್ಚಿಸಿದೆ ಎಂದ ಸಚಿವ ಸಿ.ಸಿ ಪಾಟೀಲ್ ಹೇಳಿದರು. ಆಗ ನಿಮ್ಮ ಸರ್ಕಾರ ಮಾಡಿಲ್ಲ ಅಂತ ಸಚಿವರ ಮಾತಿಗೆ ಪೈಲ್ವಾನರು ತಿರುಗೇಟು ನೀಡಿದರು. ಈ ವೇಳೆ ಯಾರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳದೇ ಅಂತರ ಕಾಯ್ದುಕೊಂಡು, ಮನವಿ ಸ್ವೀಕರಿಸಿ ಬೇಡಿಕೆ ಇಡೇರಿಕೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ನಮ್ಮ ಬೇಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ ಎಂದು ಆರೋಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪೈಲ್ವಾನರು ಹಾಗು ಪೊಲೀಸರ ಮದ್ಯೆ ಮಾತಿನ ಚಕಮಕಿ ನಡೆಯಿತು. ಇದರಿಂದ ಪೈಲ್ವಾನರ ವಿರುದ್ಧ ಸಚಿವ ಸಿ.ಸಿ ಪಾಟೀಲ್ ಗರಂ ಆದರು. ಹತ್ತಿರ ಬರಬೇಡಿ, ನಮ್ಮನ್ನು ಕೇಳಬೇಡಿ ಎಂದರೆ ನಾವು ಯಾರಿಗೆ ಕೇಳಬೇಕು? ಎಂದು ಪೈಲ್ವಾನರು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೈಲ್ವಾನರನ್ನು ಸಮಾಧಾನ ಪಡಿಸಲು ಸಂಸದ ಶಿವಕುಮಾರ್ ಉದಾಸಿ ಮುಂದಾದರು. ಕೋವಿಡ್ ನಿಂದ ಮಾಶಾಸನ ವಿತರಣೆಯಲ್ಲಿ ವಿಳಂಭವಾಗಿದೆ. ಈ ಸಮಸ್ಯೆ ಕೇವಲ ಗದಗ ಜಿಲ್ಲೆಯ ಮಾತ್ರದ್ದಲ್ಲ. ಇಡೀ ರಾಜ್ಯದ ಸಮಸ್ಯೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರ ಜೊತೆಗೆ ಮಾತನಾಡಿ ಮಾಶಾಸನ ಕೊಡಿಸುವುದಾಗಿ ಸಂಸದ ಶಿವಕುಮಾರ್ ಉದಾಸಿ ಭರವಸೆ ನೀಡಿದರು.

Leave a Reply

Your email address will not be published. Required fields are marked *

You May Also Like

ಹಣ ಪಡೆಯುವ ವೇಳೆ ಜೆಸ್ಕಾಂ ಅಧಿಕಾರಿ ಎಸಿಬಿ ಬಲೆಗೆ

ಜೆಸ್ಕಾಂ ಇಲಾಖೆಯ ಎಇಇ ಅಧಿಕಾರಿ ಭಾಸ್ಕರ್ ರೈತನಿಂದ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಕಾನೂನು ಲೆಕ್ಕಕ್ಕಿಲ್ಲ ಲಕ್ಕುಂಡಿ ಗ್ರಾಮ ಪಂಚಾಯತಿಗೆ..?: ಜನರ ಆರೋಗ್ಯ ಒತ್ತೆ ಇಡಲು ಹೊರಟಿತ್ತಾ ಗ್ರಾಪಂ..!

ಗದಗ: ಗ್ರಾಮದ ಅಭಿವೃದ್ಧಿಗೆ ಪೂರಕವಾಗಿರಬೇಕಿದ್ದ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಗ್ರಾಮವನ್ನೆ ಮಾರಾಟ ಮಾಡಲು ಹಿಂಜರಿಯುವುದಿಲ್ಲ…

ಗದಗನಲ್ಲಿ ರೆಮಿಡಿಸಿವಿರ್ ಇಂಜಕ್ಷನ್ ಅಕ್ರಮ ಮಾರಾಟ: ನಾಲ್ವರ ಬಂಧನ

ಗದಗ: ಈಗಾಗಲೇ ರಾಜ್ಯದಲ್ಲಿ ರೆಮಿಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವ ಬಗ್ಗೆ ಆರೋಪಗಳು ಕೇಳಿ ಬರುತ್ತಲೇ ಇವೆ. ಈ ಮದ್ಯೆ ಗದಗನಲ್ಲಿ ಕಾಳಸಂತೆಯಲ್ಲಿ ಅಕ್ರಮವಾಗಿ ರೆಮಿಡಿಸಿವಿರ್ ಇಂಜಕ್ಷನ್ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ತಂಡವನ್ನು ಗದಗ ಸೈಬರ್ ವಿಭಾಗದ ಪೊಲೀಸರು ಬಂಧಿಸಿದ್ದಾರೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಹೇಳಿದ್ದಾರೆ.