ಮುಂಬೈ: ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಹೇಳಿದ ಎನ್‌ಐಎ ನೋಟಿಸ್ ಗೆ ಪ್ರತಿಕ್ರಿಯಿಸದ ಪಿಎಸ್‌ಐ ಸುನೀಲ್ ಅವರನ್ನು ರಾಷಟ್ರೀಯ ತನಿಕಾ ದಳ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ಮುಖೇಶ್ ಅಂಬಾನಿ ಅವರ ನಿವಾಸದ ಎದುರು ಸೋಟಕ ತುಂಬಿದ್ದ ವಾಹನ ನಿಲ್ಲಿಸಿದ ಪ್ರಕರಣ ಹಾಗೂ ಮನ್ಸೂಕ್ ಹಿರನ್ ಕೊಲೆಗೆ ಸಂಬAಧಿಸಿದAತೆ ಮುಂಬೈ ಪಿಎಸ್‌ಐ ಸುನೀಲ್ ಮಾನೆ ಅವರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದ್ದಾರೆ.
ಈ ಎರಡು ಪ್ರಕರಣಗಳಿಗೆ ಸಂಬAಧಿಸಿದAತೆ ವಿಚಾರಣೆ ಹಾಜಾರಾಗುವಂತೆ ಎನ್‌ಐಎ ನೋಟಿಸ್ ಜಾರಿ ನೀಡಿತ್ತು. ಅದರೆ, ಹಾಜರಾದ ಮಾನೆ ಅವರು ಎನ್‌ಐಎ ಅಧಿಕಾರಿಗಳ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರ ನೀಡಲು ತಡಕಾಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಂಧಿಸಲ್ಪಟ್ಟಿರುವ ಮಾನೆ ಅವರನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.