ಔರಂಗಾಬಾದ್: ಕೊರೊನಾ ಸೋಂಕಿನಿಂದ ಮೃತಪಟ್ಟ 22 ಶವಗಳನ್ನು ಒಂದೇ ಆಂಬುಲೆನ್ಸ್‍ನಲ್ಲಿ ಚಿತಾಗಾರಕ್ಕೆ ಸಾಗಿಸುವಂತಹ ಸನ್ನಿವೇಶ ಮಹಾರಾಷ್ಟ್ರದಲ್ಲಿ ಘಟನೆ ನಡೆದಿದೆ.
ಔರಂಗಾಬಾದ್ ಜಿಲ್ಲೆಯಲ್ಲಿ ಮೆಡಿಕಲ್ ಟ್ರಾನ್ಸ್ ಪೋರ್ಟ್ ವಾಹನಗಳ ಕೊರತೆ ಎದುರಾಗಿರುವುದರಿಂದ ಸೋಂಕಿನಿಂದ ಮೃತಪಟ್ಟ 22 ಶವಗಳನ್ನು ಒಂದೇ ಆಂಬುಲೆನ್ಸ್‍ನಲ್ಲಿ ಸಾಗಿಸಿರುವಂಥಹ ಸ್ಥಿತಿ ಎದುರಾಗಿದೆ.
ನಮ್ಮ ಆಸ್ಪತ್ರೆಯಲ್ಲಿ ಅವಶ್ಯಕತೆ ಇರುವಷ್ಟು ಆಂಬುಲೆನ್ಸ್ ಲಭ್ಯವಿಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಒಂದೇ ವಾಹನದಲ್ಲಿ 22 ಶವಗಳನ್ನು ಸಾಗಿಸಬೇಕಾಯಿತು ಎಂದು ಆಸ್ಪತ್ರೆ ಡೀನ್ ಡಾ.ಶಿವಾಜಿ ಸುಕ್ರೆ ತಿಳಿಸಿದ್ದಾರೆ.