ಗದಗ: ವೀಕೆಂಡ್ ಕಫ್ಯೂ೯ ಹಿನ್ನೆಲೆಯಲ್ಲಿ ಗದುಗಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದ ವ್ಯಾಪಾರ, ವಹಿವಾಟು ಸಂಪೂರ್ಣ ಸ್ಥಬ್ದವಾಗಿದೆ.

ಎಪಿಎಂಸಿ ಮಾರ್ಕೆಟ್ ಗೇಟ್ ಬಂದ್ ಮಾಡಿ ಬೀಗ ಹಾಕಲಾಗಿದೆ. ಪ್ರತಿದಿನ ಬೆಳಗ್ಗೆ ಎಪಿಎಂಸಿ  ಹಾಗು ಹೂವಿನ ಮಾರುಕಟ್ಟೆಯಲ್ಲಿ ಹಾಗೂ ತರಕಾರಿ ಮಾರುಕಟ್ಟೆಯಲ್ಲಿ ಹರಾಜು, ಮಾರಾಟ ನಡೆಯುತ್ತಿತ್ತು. ಆದರೆ, ಇಂದು ಎಲ್ಲಾ ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧವಾಗಿದೆ.

ವೀಕೆಂಡ್ ಕಫ್ಯೂ೯ ಹಿನ್ನೆಲೆ ಗದಗ ನಗರದ ಹೃದಯ ಭಾಗದ ನಾಮಜೋಶಿ ರಸ್ತೆಯಲ್ಲಿರುವ ಕಿರಾಣಿ ಮಾರ್ಕೆಟ್ ಕೂಡ ಸಂಪೂರ್ಣ ಸ್ತಬ್ದವಾಗಿದೆ. ಬೆಳಗ್ಗೆ 10 ಘಂಟೆಯವರೆಗೆ ಕಿರಾಣಿಗೆ ಅವಕಾಶವಿದ್ದರೂ ಕೂಡಾ ಸ್ವಯಂ ಪ್ರೇರಣೆಯಿಂದ ಮಾರುಕಟ್ಟೆಯನ್ನು ವರ್ತಕರು ಸಂಪೂರ್ಣ ಬಂದ್ ಮಾಡಿದ್ದಾರೆ. ವ್ಯಾಪಾರ ವಹಿವಾಟು ಇಲ್ಲದೇ ನಾಮಜೋಶಿ ರಸ್ತೆ ಸಂಪೂರ್ಣ ಖಾಲಿ ಖಾಲಿಯಾಗಿದೆ. ನಗರದಲ್ಲಿ ಪೊಲೀಸ್ ಹಾಗು ನಗಸಭೆ ಅಧಿಕಾರಿಗಳು ಸಿಟಿ ಸಂಚಾರ ಕೈಗೊಂಡಿದ್ದಾರೆ‌. ಗದಗ ನಗರ ಸಂಪೂರ್ಣ ಸ್ತಬ್ದವಾಗಿದೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಮೂಲಕ ಟಫ್ ರೂಲ್ಸ್ ಜಾರಿ ಮಾಡಿದ್ದಾರೆ.

ನಗರದ ಬಡಾವಣೆ, ಓಣಿ ಕಟ್ಟೆಗಳಲ್ಲಿರುವ ಆಹಾರ, ದಿನಸಿ, ಹಣ್ಣುಗಳು ಮತ್ತು ತರಕಾರಿ ವ್ಯಾಪಾರವನ್ನು ಮಾಡುವ ಅಂಗಡಿಗಳು, ಡೈರಿ, ಹಾಲಿನ ಬೂತ್‍ಗಳು, ಮಾಂಸ ಮತ್ತು ಮೀನು ಮಾರಾಟವನ್ನು ಬೆಳಗ್ಗೆ 6 ರಿಂದ ಬೆಳಗ್ಗೆ 10 ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಲಾಗಿತ್ತು. ಕೋವಿಡ್-19ರ  ನಿರ್ವಹಣೆಗೆ ಅಗತ್ಯ ಸೇವಾ ಇಲಾಖೆಗಳ ನೌಕರರಿಗೆ  ಅನಿಯಂತ್ರಿತ ಚಲನೆಯನ್ನು ಅನುಮತಿಸಲಾಗಿದ್ದು, ತುರ್ತು ಮತ್ತು ಅಗತ್ಯ ಸೇವೆಗಳೊಂದಿಗೆ ವ್ಯವಹರಿಸುವ ಮತ್ತು ನಿರಂತರ ಕಾರ್ಯಾಚರಣೆ ನಡೆಸುವ ಕೈಗಾರಿಕೆಗಳು, ಕಂಪನಿಗಳು, ಸಂಸ್ಥೆಗಳು ಕಾರ್ಯನಿರ್ವಹಿಸಲು ಅನುಮತಿಸಿದೆ. ಟೆಲಿಕಾಂ ಮತ್ತು ಇಂಟರ್‍ನೆಟ್ ಸೇವೆ ಪೂರೈಕೆದಾರರಿಗೆ ವಾರಾಂತ್ಯದ ಕರ್ಪ್ಯೂ ಅನ್ವಯಿಸುವುದಿಲ್ಲ. ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳು ಹಾಗೂ ಅವರ ಪರಿಚಾರಕರು, ವ್ಯಕ್ತಿಗಳು ಈ ಅವಧಿಯಲ್ಲಿ ಸಂಚರಿಸಬಹುದಾಗಿದೆ. ವ್ಯಾಕ್ಸಿನೇಷನ್ ತೆಗೆದುಕೊಳ್ಳಲು ಉದ್ದೇಶಿಸಿರುವ ಅರ್ಹ ಜನರು ಕನಿಷ್ಠ ಪುರಾವೆಗಳನ್ನು ಹಾಜರುಪಡಿಸಿದಲ್ಲಿ ಸಂಚಾರವನ್ನು ಅನುಮತಿಸಲಾಗುವುದು.

ಹೊಟೇಲ್, ರೆಸ್ಟೋರೆಂಟ್ಸ್ ಮತ್ತು ಉಪಹಾರ ಗೃಹಗಳಲ್ಲಿ ಕೇವಲ ಪಾರ್ಸಲ್ ಸೇವೆ ಒದಗಿಸಲು ಅವಕಾಶ ಕಲ್ಪಿಸಿದೆ. ದೂರ ಪ್ರಯಾಣದ ರಾತ್ರಿ ಬಸ್ ಸೇವೆಗಳು, ರೈಲುಗಳು ಮತ್ತು ವಿಮಾನ ಪ್ರಯಾಣವನ್ನು ಅನುಮತಿಸಲಾಗಿದೆ. ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‍ಗಳು, ನಿಲ್ದಾಣಗಳು, ಸ್ಟಾಂಡ್‍ಗಳಲ್ಲಿ ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳು (ಕ್ಯಾಬ್‍ಗಳನ್ನು ಒಳಗೊಂಡಂತೆ) ರೈಲು, ರಸ್ತೆ ಹಾಗೂ ವಿಮಾನಗಳ ಮೂಲಕ ಸಂಚರಿಸಲು ಕೋವಿಡ್-19 ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತಿಗೊಳಪಟ್ಟು ಅವಕಾಶ ಕಲ್ಪಿಸಲಾಗಿದೆ. ಗದಗ ನಗರದಲ್ಲಿಯೂ ಟಫ್ ರೂಲ್ಸ್ ಜಾರಿಗೆ ತರಲಾಗಿದ್ದು, ಪೊಲೀಸ್ ಹಾಗು ಜಿಲ್ಲಾಡಳಿತ ಕಾಳಜಿಯಿಂದ ಕಾರ್ಯಪ್ರವೃತ್ತವಾಗಿದೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆಯಲ್ಲಿಂದು ಶತಕ ದಾಟಿದ ಸೋಂಕಿತರ ಸಂಖ್ಯೆ !

ಜಿಲ್ಲೆಯಲ್ಲಿಂದು 108 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಈವರೆಗೆ 882 ಸೋಂಕಿತರು ಪತ್ತೆಯಾದಂತಾಗಿದೆ. ಇಂದು 11 ಜನ ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ

ಗದಗ ಜಿಲ್ಲಾ ಕಾರಾಗೃಹದಲ್ಲಿ ರಾಜು ಲಮಾಣಿ(19) ಆತ್ಮಹತ್ಯೆಗೆ ಶರಣು

ಉತ್ತರಪ್ರಭ ಗದಗ: ಪೋಕ್ಸೊ ಕಾಯ್ದೆಯಡಿ ಗದಗ ಜಿಲ್ಲಾ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಯೊಬ್ಬ ಕಟ್ಟಡದ ಕಿಟಕಿಗೆ ನೇಣು…

ಬೀದಿಗೆ ಬಂದ ಕಾರ್ಮಿಕರು…!

ಲಾಕ್ ಡೌನ್ ನಿಂದ ಬಡವರ ಬದುಕು ಬೀದಿಗೆ ಬಂದು ನಿಂತಿದೆ. ಸಕ್ಕರೆ ಕಾರ್ಖಾನೆಯೊಂದರ 350ಕ್ಕೂ ಹೆಚ್ಚು ಕಾರ್ಮಿಕರು ಸದ್ಯ ಇದರಿಂದಾಗಿ ಬೀದಿಗೆ ಬಂದಿದ್ದಾರೆ.

ಮುಳಗುಂದ ಅರ್ಬನ್ ಬ್ಯಾಂಕ ಚುನಾವಣೆ 7 ನಾಮಪತ್ರ ಸಲ್ಲಿಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ 2 ಸ್ಥಾನಗಳಿಗೆ…