ನಿಂಗಪ್ಪ ಬಿ ಮಡಿವಾಳರ

ನರೇಗಲ್: ವಸಂತ ಋತುವಿನ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣುಮೆ ದಿನ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ಹಿಂದೂ ಧರ್ಮದ ಪ್ರಕಾರ ಹೋಳಿ ಒಂದು ಮಹತ್ವಪೂರ್ಣ ಮಹಾಪರ್ವ ಎಂದು ಭಾವಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ಹಬ್ಬವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಮಾ.29 ಸೋಮವಾರ ಹೋಳಿ ಹಬ್ಬವನ್ನು ಹಾಗೂ ಕಾಮ ದಹನವನ್ನು ಮಾ.28 ಆಚರಿಸಲಾಗುತ್ತದೆ.

ರೋಣ ತಾಲೂಕಿನ ನರೇಗಲ್ ಹೋಬಳಿಯ ಸಮೀಪವಿರುವ ಜಕ್ಕಲಿ ಗ್ರಾಮದಲ್ಲಿ ಕಳೆದ ಮೂವತ್ತು ವರ್ಷಗಳಿಂದ ವಿಶೇಷವಾಗಿ ಹೋಳಿ ಆಚರಣೆ ಮಾಡುತ್ತಾ ಬಂದಿದ್ದಾರೆ. ಗಂಡು ಮಕ್ಕಳ ಹಬ್ಬವಾದ್ದರಿಂದ ಹಿಂದಿನಿAದಲೂ ಹೋಳಿ ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ಈ ಹಿನ್ನೆಲೆಯಲ್ಲಿ ಚಿತ್ರ ವಿಚಿತ್ರ ನಂಬಿಕೆ ಇಟ್ಟುಕೊಂಡು ಒಂದೊAದು ಕಡೆ ಒಂದೊAದು ರೀತಿಯಲ್ಲಿ ಆಚರಿಸುವ ಹೋಳಿ ಹಬ್ಬವನ್ನು ಜಕ್ಕಲಿಯ ವಿವಿಧ ಓಣೆಗಳಲ್ಲಿ ಯುವಕರು ಬಿದಿರು ಕಟ್ಟಿಗೆಯಿಂದ ಚಟ್ಟ ತಯಾರಿಸಿ ಅದಕ್ಕೆ ವಿದ್ಯುತ್ ಅಲಂಕಾರ ಮಾಡಿ ಸಜ್ಜುಗೊಳಿಸಿದ ಚಟ್ಟದಲ್ಲಿ (ಪುಷ್ಪಕ ವಿಮಾನದಲ್ಲಿ) ಒಬ್ಬ ಯುವಕನನ್ನು ಕಾಮಣ್ಣನಂತೆ ಶವವಾಗಿ ಕುಳ್ಳಿರಿಸಿಕೊಂಡು ಗ್ರಾಮದ ಎಲ್ಲಾ ಓಣಿಗಳಲ್ಲಿ ಮೆರವಣಿಗೆ ನಡೆಯುತ್ತದೆ.

ಮೂರು ದಶಕದಿಂದ ಆಚರಣೆ

ಹಿಂದಿನಿAದಲೂ ಹೋಳಿ ಹಬ್ಬಕ್ಕೆ ವಿಶೇಷ ಸ್ಥಾನವಿದೆ ಈ ಹಿನ್ನೆಲೆಯಲ್ಲಿ ಚಿತ್ರ ವಿಚಿತ್ರ ನಂಬಿಕೆ ಇಟ್ಟುಕೊಂಡು ಒಂದೊAದು ಕಡೆ ಒಂದೊAದು ರೀತಿಯಲ್ಲಿ ಆಚರಿಸುವ ಪದ್ದತಿಯನ್ನು ಜಕ್ಕಲಿ ಗ್ರಾಮದಲ್ಲಿ ಅಣಕು ಶವದ ಮೂಲಕ ಕಳೆದ ಮೂವತ್ತು ವರ್ಷಗಳಿಂದ ಆಚರಿಸಲಾಗುತ್ತದೆ.

-ಪ್ರಕಾಶಪ್ಪ ಹೊಸಮನಿ, ಗ್ರಾಮಸ್ಥ

ಪ್ರತಿಯೊಂದು ಓಣೆಗಳಲ್ಲಿ ಅಣಕು ಶವವನ್ನು ಕೆಳಗಡೆ ಇಳಿಸಿ ಹಾಡಾಡಿಕೂಂಡು ಅಳುವ ದೃಶ್ಯ ಜನರ ಮನದಲ್ಲಿ ಸಂತಸ ತರುತ್ತದೆ. ಹೀಗೆ ಶವದ ಮುಂದೆ ಕುಳಿತು ಹೆಣ್ಣು ವೇಷ ಧರಿಸಿದ ಗಂಡು ಮಕ್ಕಳು ಹಾಸ್ಯ ರೂಪದಲ್ಲಿ ಸತ್ತವನ ಗುಣಗಾನ ಮಾಡಿ ಆಳುತ್ತಾರೆ. ಈ ಒಂದು ಅಳುವ ಧ್ವನಿ ಕೇಳಿ ರಾತ್ರೋರಾತ್ರಿ ಎದ್ದು ಕುಳಿತು ಜನರು ಎದುರಿಗೆ ಜನಜಂಗುಳಿ ಕೂಡಿದ ಗಲ್ಲಿ-ಗಲ್ಲಿಗಳಲ್ಲಿ ಅಣಕು ಶವದ ಮುಂದೆ ಸ್ವಲ್ಪ ದೂರದಿಂದ ಓಡೋಡಿ ಬಂದು ಶವವನ್ನು ಅಪ್ಪಿಕೂಂಡು ಹಾಡಾಡಿಕೂಂಡು ಅಳುವದು ಸಂಬAಧಿಕರು ಬಂದಾಗ ಯಾವ್ಯಾವ ರೀತಿಯಲ್ಲಿ ಅಳುತ್ತಾರೆ ಎಂಬುದನ್ನು ರಾಗ ಮಾಡಿ ದೃಶ್ಯ ನೆನಪಿ ಅಳುತ್ತಿದ್ದರು.

ಅಯ್ಯಯ್ಯೂ ನನ್ನ ದೇವರೇ ನನ್ನ ಹಿರಿಯಾ ಏನಚಂದ ಕುಂತಾನ ನೋಡ್ರೇ..! ನನ್ನ ಹಿರಿಯಾ ನನ್ನ ಬಿಟ್ಟು ಶಿವನ್ ಪಾದ ಸೇರಿದೆನೋ ನನ್ನ ಗುಡ್ಡಾ, ನಿನ್ನೆರ ಎಷ್ಟು ಚುಲೂ ಇದ್ದೆಲ್ಲೂ ನನ್ನ ರಾಜ.. ಎಂದು ಹಲವಾರು ರೀತಿಯ ಗ್ರಾಮೀಣ ಸೂಗಡುವಿನಲ್ಲಿ ಅಣಕು ಶವದ ಮುಂದೆ ಅಳುವ ದೃಶ್ಯ ನಡೆಯುತ್ತದೆ.

ಕರೋನಾದಿಂದ ಕರಗಿತು ಹೋಳಿ ಉತ್ಸಾಹ

ಎಲ್ಲಾ ಹಬ್ಬಗಳನ್ನು ಮಹಿಳೆಯರು ಜೋರು ಜೋರು ಆಚರಣೆ ಮಾಡುತ್ತಾರೆ. ಆದರೆ ಗಂಡು ಮಕ್ಕಳಿಗಾಗಿ ಇದ್ದ ಒಂದೇ ಒಂದು ಹಬ್ಬವೆಂದರೆ ಅದು ಹೋಳಿ ಹಬ್ಬ. ಈಗ ಆ ಹಬ್ಬವನ್ನು ಸಹ ಕರೋನಾ ಎರಡನೇ ಅಲೆಯ ಎಂಬ ನೆಪದಲ್ಲಿ ನುಂಗಿ ಹಾಕಿದೆ. ಆದ್ದರಿಂದ ಓಣೆ ತುಂಬಾ ಹಲಗೆ ಬಾರಿಸಿಕೂಂಡು, ಬಾಯಿ ಬಡೆದುಕೊಂಡು ಅಲೆದಾಡುತ್ತಿದ್ದ, ಗಂಡು ಮಕ್ಕಳ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು. ಅದೇನೆ ಇರಲಿ ಆರೋಗ್ಯದ ಹಿತದೃಷ್ಟಿಯಿಂದ ಯುವಕರು ಹಾಗೂ ಸಾರ್ವಜನಿಕರು ಕೋವಿಡ್-19 ನಿಯಮಾವಳಿ ಪಾಲನೆ ಮಾಡಿ, ಇಲಾಖೆ ಅಧಿಕಾರಿಗಳು ಹೊರಡಿಸಿದ ಆದೇಶದಂತೆ ನಡೆದುಕೊಳ್ಳಬೇಕು.

-ಸಂಗಮೇಶ ಮೆಣಸಿಗಿ, ಗ್ರಾಮಸ್ಥ

ಇದೇ ಸಮಯವೆಂದು ತಿಳಿದ ಯುವಕರು ಗುಂಪು ಗುಂಪಾಗಿ ಕಳ್ಳಗತ್ತಿನಿಂದ ಕಾಮ ದಹನಕ್ಕೆ ಬೇಕಾದ ಕಟ್ಟಿಗೆ ಕುಳ್ಳು ಗಳನ್ನು ಕದ್ದು ತಂದು ಗ್ರಾಮದ ಸಂತೆ ಬಜಾರದಲ್ಲಿ ಸಂಗ್ರಹಿಸಿ ಬೆಳಗಿನ ಜಾವ ಕಾಮ ದಹನ ಮಾಡುತ್ತಾರೆ,ಕಾಮ ದಹನ ಮಾಡಿದ ಬೆಂಕಿಯಿAದ ಪ್ರತಿಯೊಂದು ಮನೆಯ ಒಲೆಗಳು ಹತ್ತುತ್ತದೆ ಎಂದು ಹಿಂದಿನಿAದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ ಎಂದು ಆದಾಮಸಾಬ್ ಬಾಲೇಸಾಬನವರ ಹೇಳಿದರು.

ಗ್ರಾಮದ ಹಾಸ್ಯ ಕಲಾವಿದ ಪ್ರವೀಣ ಪ್ರಕಾಶ್ ಹೊಸಮನಿ, ಅಂದಪ್ಪ ಜಂಗಣ್ಣವರ, ಉಮೇಶ್ ನರೇಗಲ್ಲ ಹೆಣ್ಣಿನ ಧ್ವನಿ ಆಕರಣಿ ಮಾಡಿದವರು. ಆದಾಮಸಾಬ ಬಾಲೇಸಾಬನವರ ಕಾಮಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವರು.

ಇನ್ನೊಂದು ತಂಡದಲ್ಲಿ ಮೆಣಸಿಗಿಯವರ ಓಣಿಯ ನಾಗರಾಜ ಕಡಗದ, ವಿನಾಯಕ ಅಥಣಿ, ಮಲ್ಲಪ್ಪ ಹೂಗಾರ ಸ್ತಿçà ಪಾತ್ರದಲ್ಲಿ. ಕಳಕಪ್ಪ ಹೊಗರಿ ಕಾಮಣ್ಣನ ಪಾತ್ರದಾರಿಯಾಗಿದ್ದರು. ಮಲ್ಲಪ್ಪ ಪಲ್ಲೇದ, ಉಮೇಶ್ ಮಾರನಬಸರಿ ಇನ್ನೂ ಅನೇಕ ಜನ ಹಾಸ್ಯದ ಮೂಲಕ ಜನಮನ ಸೆಳೆಯುತ್ತಾರೆ.

Leave a Reply

Your email address will not be published. Required fields are marked *

You May Also Like

ಎಸ್ಸೆಸ್ಸೆಲ್ಸಿ ಪರೀಕ್ಷೆ ಅವಕಾಶ, ಆರ್‌ಟಿಇ ಶುಲ್ಕ ಮರುಪಾವತಿ ನಿಯಮಗಳ ಸಡಿಲಿಕೆ

ಕೋವಿಡ್-19 ಸೋಂಕು ಪ್ರಸರಣ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಹಾಜರಾತಿ ಮತ್ತು ದಾಖಲಾತಿ ಕಡಿಮೆಯಾಗಿರುವುದರಿಂದ ಪ್ರಸ್ತುತ ವರ್ಷಕ್ಕೆ ಸೀಮಿತಗೊಳಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ಮತ್ತು ಆರ್ ಟಿ ಇ ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತ ನಿಯಮಗಳಲ್ಲಿ ವಿನಾಯ್ತಿ ನೀಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

ಕೊರೊನಾ ಚಿಕಿತ್ಸಾ ವೆಚ್ಚಕ್ಕೆ ಸಿದ್ದರಾಮಯ್ಯ ವಿರೋಧ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗಾಗಿ @CMofKarnataka ನಿಗದಿಪಡಿಸಿರುವ ವೆಚ್ಚದ ವಿವರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ. ಒಂದು…