ಲಕ್ಷ್ಮೇಶ್ವರ: ಪಟ್ಟಣದ ಕರೇಗೋರಿ ಆಶ್ರಯ ಕಾಲೊನಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಇಲ್ಲಿನ ಸ್ಥಳೀಯ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿ ಬೇಡಿಕೆ ಇಡೇರಿಸುವಂತೆ ಒತ್ತಾಯಿಸಿದರು. ಕಾಲೊನಿಯಲ್ಲಿ ಸುಸಜ್ಜಿತ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದೇ ಜನ ಪರದಾಡುವಂತಾಗಿದೆ.

ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದಂತಾಗಿದೆ. ಅಂಗನವಾಡಿ ಇಲ್ಲದೆ ಇಲ್ಲಿನ ಮಕ್ಕಳ ಶಿಕ್ಷಣದಿಂದ ವಂಚಿತರಾಗುವಂತಾಗಿದೆ. ಅಲ್ಲದೆ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದರು.

ಈ ವೇಳೆ ನಾಗಪ್ಪ ಮುಳಗುಂದ, ಬಿ.ಬಿ. ರಾಜು, ಐ.ಎಫ್. ಕೋವಣ್ಣವರ, ಈಶ್ವರಪ್ಪ ನುಚ್ಚಂಬಲಿ, ಎಂ.ಎನ್. ಸಂಶಿ, ಸೋಮಣ್ಣ ಅಳ್ಳಳ್ಳಿ, ಮಂಜು ಶಿರಬಡಗಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ ಪದವಿ ಕಾಲೇಜಿಗೆ ಎಲ್.ಐ.ಸಿ.ತಂಡ ಭೇಟಿ

ಗುಲಾಬಚಂದ ಜಾಧವಆಲಮಟ್ಟಿ : ಸ್ಥಳೀಯ ಎಸ್.ವ್ಹಿ.ವ್ಹಿ.ಸಂಸ್ಥೆಯ ಮಂಜಪ್ಪ ಹಡೇ೯ಕರ (ಎಂ.ಎಚ್.ಎಂ.)ಪದವಿ ಮಹಾವಿದ್ಯಾಲಯಕ್ಕೆ ಬೆಳಗಾವಿ ರಾಣಿ ಚೆನ್ನಮ್ಮ…

ಕ್ರಿಕೆಟ್ ಬೆಟ್ಟಿಂಗ್ ನಲ್ಲಿಯೇ ಭಾಗಿಯಾದ ಪೊಲೀಸ್!

ಚಿಂತಾಮಣಿ : ಅಪರಾಧ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳಬೇಕಾದ ಪೊಲೀಸಪ್ಪನೇ ಇಲ್ಲಿ ಐಪಿಎಲ್ ಬೆಟ್ಟಿಂಗ್ ಆಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸ್ಥಳದಲ್ಲೇ ಪರೀಕ್ಷಿಸಿ ಸೋಂಕಿತರ ಸಂಖ್ಯೆ ಕಡಿಮೆಗೊಳಿಸಲು ಪ್ರಯತ್ನ ನಡೆದಿದೆ

ನರೇಗಲ್‌: ಕೊರೊನಾ ವೈರಸ್ ಪಟ್ಟಣದಿಂದ ಹಳ್ಳಿಯ ಕಡೆಗೆ ಗಣನೀಯವಾಗಿ ಹಬ್ಬಿದ್ದು, ಇದನ್ನು ತಡೆಗಟ್ಟಲು ಸರ್ಕಾರ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರ ಉಪಯೋಗವನ್ನು ಕೊರೊನಾ ಸೋಂಕಿತರು ಪಡೆದುಕೊಳ್ಳಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ:ಎ,ಡಿ,ಸಾಮುದ್ರಿ ಹೇಳಿದ

ಅತಿಥಿ ಉಪನ್ಯಾಸಕರಿಗೆ 3 ತಿಂಗಳ ವೇತನ ನೀಡಿ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಅತಂತ್ರರಾಗಿರುವ ಅತಿಥಿ ಉಪನ್ಯಾಸಕರು ಹತಾಶೆಗೊಂಡು ಸುಮಾರು ಎಂಟು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ.…