ಮುಳಗುಂದ: ಸಮೀಪದ ಸೊರಟೂರ ಗ್ರಾಮದಿಂದ ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಾಕಷ್ಟು ಪ್ರಮಾಣದಲ್ಲಿ ಹಾಳಾಗಿದ್ದು ದುರಸ್ಥಿ ಕಾಮಗಾರಿ ಕೈಗೊಳ್ಳಬೇಕಿದೆ.

 ಸೊರಟೂರ ನಿಂದ ಅಂದಾಜು 4 ಕಿ.ಮೀ ರಸ್ತೆ ಅಭಿವೃದ್ದಿಯಾಗಿ ದಶಕವೆ ಗತಿಸಿದೆ. ಅಲ್ಲಿಂದ ಇಲ್ಲಿಯ ವರೆಗೂ ಮತ್ತೆ ಅಭಿವೃದ್ದಿ ಕಾಮಗಾರಿ ನಡೆದೇ ಇಲ್ಲ. ಅಲ್ಲದೇ ರಸ್ತೆ ಗುಂಡಿ ಮುಚ್ಚಲು ಸಹ ಸಂಬAಧಿಸಿದ ಇಲಾಖೆ ಅವರು ಮುಂದಾಗಿಲ್ಲ. ರಸ್ತೆ ಅಕ್ಕಪಕ್ಕದಲ್ಲಿ ಜಾಲಿಗಿಡಗಳು ಬೆಳೆದು ರಸ್ತೆಗೆ ಚಾಚಿದ್ದು ಇಕ್ಕಟ್ಟಾಗಿದೆ. ಯಲಿಶಿರೂರ, ಶಿರಹಟ್ಟಿ ರಸ್ತೆ ಸಹ ಹಾಳಗಿದ್ದು ಎರಡು ರಸ್ತೆಗಳು ಸೇರುವ ಜಾಗದಲ್ಲಿ ದೊಡ್ಡ ಕಂದಕಗಳು ನಿರ್ಮಾಣವಾಗಿದ್ದು ವಾಹನ ಸವಾರರು ಬಿದ್ದು ಎದ್ದು ಹೋಗುವಂತಾಗಿದೆ.

 ರಾತ್ರಿ ವೇಳೆ ಹಲವು ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ರಸ್ತೆ ಸಂಫೂರ್ಣ ಹದಗೆಟ್ಟಿದ್ದರಿಂದ ಸಂಚಾರಕ್ಕೆ ಯೋಗ್ಯವಿಲ್ಲದಾಗಿದೆ. ಕೂಡಲೆ ರಸ್ತೆ ದುರಸ್ಥಿಗೆ ಸಂಬAಧ ಪಟ್ಟ ಇಲಾಖೆ ಮುಂದಾಗಬೇಕು ಎಂದು ಮಾರುತಿ ಮಲ್ಲಾಡದ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ದುಡಿಯೋಣ ಬಾ ಅಭಿಯಾನ

ಬೇಸಿಗೆ ಅವಧಿಯಲ್ಲಿ ತಾಲೂಕೀನ ಗ್ರಾಮೀಣ ಪ್ರದೇಶದ ಜನರಿಗೆ ಕೆಲಸ ಒದಗಿಸುವ ಉದ್ದೇಶದಿಂದ ಮಹಾತ್ಮಗಾಂಧಿ ರಾಷ್ಟಿಯ ಉದ್ದಯೋಗ ಖಾತರಿ ಯೋಜನೆಯಡಿ ಮಾರ್ಚ 15 ರಿಂದ ಮೂರು ತಿಂಗಳವರೆಗೆ ದುಡಿಯೋಣ ಬಾ ಅಭಿಯಾನ ಹಮ್ಮಿಕೋಳ್ಳಲಾಗಿದೆ.

ನಾಪತ್ತೆಯಾಗಿದ್ದ ಸೋಂಕಿತ ವ್ಯಕ್ತಿ ಪತ್ತೆಯಾಗಿದ್ದು ಎಲ್ಲಿ ಗೊತ್ತಾ?

ಕೋಲಾರ : ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6ಕ್ಕೇರಿದೆ. ಸೋಂಕಿತ ಕೋರ್ಟ್ ಉದ್ಯೋಗಿಯ ಟ್ರಾವಲ್ ಹಿಸ್ಟರಿ ಮೂರು…

ರಾಜ್ಯದಲ್ಲಿಂದು 5072 ಕೊರೊನಾ ಪಾಸಿಟಿವ್, ಯಾವ ಜಿಲ್ಲೆಯಲ್ಲಿ ಎಷ್ಟು?

ರಾಜ್ಯದಲ್ಲಿಂದು 5072 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90942 ಕ್ಕೆ ಏರಿಕೆಯಾದಂತಾಗಿದೆ.

ವಿದ್ಯುತ್ ಅವಗಡ, ಕಬ್ಬಿನ ಹೊಲಕ್ಕೆ ಬೆಂಕಿ

ಉತ್ತರಪ್ರಭ ಸುದ್ದಿಲಕ್ಷ್ಮೇಶ್ವರ: ನಾಲ್ಕು ತಿಂಗಳಾದ್ಯಂತ ಹಗಲು ರಾತ್ರಿ ಎನ್ನದೆ ಕಷ್ಟ ಪಟ್ಟ ಬೆಳೆದ ಕಬ್ಬು ಬೆಳೆಗೆ…