ವೈದ್ಯ ನಾರಾಯಣಭವೋ ಗಾದೆಗೆ ತಕ್ಕಂತೆ ಕಾರ್ಯ ನಿರ್ವಹಿಸಿ

ಗದಗ: ವೈದ್ಯ ವೃತ್ತಿ ಪವಿತ್ರ ವೃತ್ತಿಯಾಗಿದ್ದು ವೈದ್ಯ ನಾರಾಯಣ ಭವೋ ಎಂಬ ಗಾದೆಗೆ ತಕ್ಕಂತೆ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವಂತೆ ವೈದ್ಯ ಪದವಿ ಪಡೆದ ವಿಧ್ಯಾರ್ಥಿಗಳಿಗೆ ರಾಜ್ಯ ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ಸಪ್ತ ವಸಂತ ಮಹೋತ್ಸವ ಪ್ರಥಮ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿಂದು 150 ವಿಧ್ಯಾರ್ಥಿಗಳು ತಮ್ಮ ಹೆಸರಿನ ಹಿಂದೆ ಡಾಕ್ಟರ ಎಂಬ ಪದವಿ ಪಡೆದಿದ್ದು ಸಂತಸದ ವಿಷಯವಾಗಿದೆ. ಈ ಪದವಿಯಿಂದ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಿದ್ದು ಯಾವುದೇ ಸಂದರ್ಭದಲ್ಲೂ ಸೇವೆ ಒದಗಿಸಲು ಸನ್ನದ್ಧರಾಗಿರುವಂತೆ ತಿಳಿಸಿದರು.

ಕೋವಿಡ್-19ರ ಸಂದಿಗ್ಧ ಸಂದರ್ಭದಲ್ಲಿ ತಾವು ಕಾರ್ಯ ನಿರ್ವಹಿಸಿದ್ದು ಮುಂದೆ ಎಂತಹ ಕಷ್ಟಕರ ಪರಿಸ್ಥಿತಿಯನ್ನು ತಾವು ನಿಭಾಯಿಸಬಹುದಾಗಿದೆ ಎಂದು ತಿಳಿಸಿದರು. ವೈದ್ಯಕೀಯ ಪದವಿ ಪಡೆದ ಯುವ ವೈದ್ಯರು ರೋಗಿಗಳೊಡನೆ ಸೌಜ್ಯನ್ಯದಿಂದ ವರ್ತಿಸುವ ಮೂಲಕ ಮಾನವೀಯತೆ ದೃಷ್ಟಿಯಿಂದ ರೋಗಿಗಳ ಸೇವೆ ಮಾಡುವಂತೆ ತಿಳಿಸಿದರು. ಇಂದು ಯುವ ವೈದ್ಯರಾಗಿ ಹೊರಹೊಮ್ಮಿದ ಈ ದಿನಕ್ಕಾಗಿ ನಿಮಗಾಗಿ ತಮಗಾಗಿ ಕಷ್ಟಪಟ್ಟ ತಂದೆ ತಾಯಿಗಳಿಗೆ ಅಪಚಾರ ಬರದಂತೆ ಕಾರ್ಯನಿರ್ವಹಿಸಲು ಸೂಚಿಸಿದರು. ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಾಜ್ಯದಲ್ಲಿಯೇ ಉತ್ತಮ ಸಂಸ್ಥೆಯಾಗಿ ಹೊರಹೊಮ್ಮಲಿ ಇದಕ್ಕೆ ಅಗತ್ಯವಿರುವ ಸಹಕಾರವನ್ನು ಸರಕಾರ ನೀಡಲಿದೆ ಎಂದು ಸಚಿವರು ಭರವಸೆ ನೀಡಿದರು.

ವೈದ್ಯರಿಗೆ ಸಾಮಾಜಿಕ ಜವಾಬ್ದಾರಿ ಇದೆ

ಘಟಿಕೋತ್ಸವದ ಭಾಷಣ ಮಾಡಿದ ಗ್ರಾಮೀಣಾಭಿವೃದ್ಧಿ, ಪಂಚಾಯತರಾಜ್ ವಿಶ್ವ ವಿದ್ಯಾಲಯದ ಕುಲಪತಿ ವಿಷ್ಣುಕಾಂತ ಚಟಪಲ್ಲಿ ಮಾತನಾಡಿ, ವೈದ್ಯ ವೃತ್ತಿ ಪಡೆದ ಈ ದಿನ ಕಪ್ಪು ಕೋಟ ಧರಿಸಿದ ತಾವುಗಳು ನಾಳೆಯಿಂದ ಬಿಳಿ ಕೋಟ್ ಧರಿಸಿ ಜನ ಸೇವೆಗೆ ಮುಂದಾಗುತ್ತಿರುವದರ ಬದಲಾವಣೆಯ ಸಂಕೇತವಾಗಿದೆ. ವೈದ್ಯರಾದ ತಮಗೆ ಸಾಮಾಜಿಕವಾಗಿ ಹೆಚ್ಚಿನ ಜವಾಬ್ದಾರಿ ಇದ್ದು ಇದನ್ನು ಯಶಸ್ವಿಯಾಗಿ ನಿಭಾಯಿಸಬೇಕು. ರೋಗಿಗಳು ಹಾಗೂ ವೈದ್ಯರ ನಡುವೆ ಸಂವಹನಕ್ಕಾಗಿ ಕನ್ನಡದ ಅಗತ್ಯವಿದ್ದು ಇಂದಿನ ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ವೈದ್ಯರು ಸೇವಾ ಮನೋಭಾವನೆ ಮರೆಯಬಾರದು

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಕೆ.ಪಾಟೀಲ, ಪ್ರತಿ ವರ್ಷ ಸಂಸ್ಥೆಯಿದ ಏರ್ಪಡಿಸುವ ಗುಂಜ ಕಾರ್ಯಕ್ರಮವು ದೇಶ ವ್ಯಾಪಿ ಹೆಸರುವಾಸಿಯಾಗಿದೆ. ಆಗಿನಿಂದಲೇ ಇಲ್ಲಿಯ ವಿಧ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಂಡಿರುತ್ತದೆ. ನಿಮ್ಮ ಈ ಪ್ರತಿಭೆಯೇ ನಿಮ್ಮನ್ನು ಇವತ್ತು ವೈದ್ಯಕೀಯ ಪದವಿ ಪಡೆಯಲು ಸಹಕಾರಿಯಾಗಿದೆ. ನಿಮ್ಮ ಈ ಪದವಿಗಿಂತ ಇನ್ನೂ ಹೆಚ್ಚಿನ ಹುದ್ದೆಯ ಮುಂದೆ ಪಡೆಯಬಹುದಾಗಿದ್ದು ನಿಮ್ಮ ಸೇವೆಯಲ್ಲ ನಿರಂತರವಾಗಿ ಮಾನವೀಯತೆ, ಸೇವಾ ಮನೋಭಾವನೆಯನ್ನು ಮರೆಯದಿರಿ.

ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ನೀಡಿದ ತಮ್ಮ ಸೇವೆಗೆ ಅಭಿನಂದನೆಗಳನ್ನು ಸಲ್ಲಿಸಿದರು. ಜಿಮ್ಸನಲ್ಲಿ ಯಾವುದೇ ರೀತಿಯ ಮಾದಕ ದ್ರವ್ಯಗಳ ಸಂಪರ್ಕವಿಲ್ಲದೇ ಉತ್ತಮ ವಾತಾವರಣದಲ್ಲಿ ಅಧ್ಯಯನ ನಡೆಸಿರುತ್ತಿರಿ. ದೇಶದಲ್ಲ 1456 ಜನರಿಗೆ ಒಬ್ಬ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯರ ಸೇವೆ ತುಂಬಾ ಅಗತ್ಯವಾಗಿದೆ ಎಂದರು. ಇಂದಿನಿಂದ ನಿಮ್ಮ ಸೇವೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡುವದರೊಂದಿಗೆ ಜನಸೇವೆಯೆ ಜನಾರ್ದನ ಸೇವೆಯೆಂದು ಮುನ್ನಡೆಯಿರಿ ನೂತನ ತಾಂತ್ರಿಕತೆ ಬಳಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಮುಂದಾಗುವಂತೆ ತಿಳಿಸಿದರು. ಜಿಮ್ಸ ಸಂಸ್ಥೆಗೆ ಸರಕಾರದಿಂದ ಈ ವರೆಗೆ 264 ಕೋಟಿ ರೂ. ಅನುದಾನ ಒದಗಿಸಲಾಗಿದೆ ಇದಲ್ಲದೇ ವೈದ್ಯಕೀಯ ಉಪಕರಣಗಳ ಖರೀದಿಗಾಗಿ 125 ಕೋಟಿ ರೂ.ಗಳನ್ನು ನೀಡಲಾಗಿದ್ದು ಅನುದಾನದ ಸದ್ಬಳಕೆ ಮಾಡಿಕೊಳ್ಳುವದರ ಜೊತೆಗೆ ಉತ್ತಮ ಫಲಿತಾಂಶ ನೀಡಲು ತಿಳಿಸಿದರು.

ಶಾಸಕ ಕಳಕಪ್ಪ ಬಂಡಿ ಮಾತನಾಡಿ ಜಿಮ್ಸ, ಗ್ರಾಮೀಣಾಭಿವೃದ್ಧಿ ವಿವಿ ಹಾಗೂ ಪಶು ವೈದ್ಯಕೀಯ ಕಾಲೇಜುಗಳು ಗದಗ ಜಿಲ್ಲೆಗೆ ಕಳಶಪ್ರಾಯವಾಗಿವೆ. ವೈದ್ಯಕೀಯ ಅದ್ಯಯನ ಎಲ್ಲರಿಗೂ ಅಸಾಧ್ಯ ನಿವದನ್ನು ಪಡೆದಿದ್ದು ನಿಮ್ಮ ಮುಂದಿನ ಸೇವೆಯನ್ನು ತಮ್ಮ ಊರಿನಲ್ಲಿಯೇ ಮಾಡುವಂತೆ ತಿಳಿಸಿದರು.

ವಿಧಾನ ಪರಿಷತ ಸದಸ್ಯ ಎಸ.ವಿ.ಸಂಕನೂರ ಮಾತನಾಡಿ ಸಮಾಜದಲ್ಲ ಶಿಕ್ಷಕರು ಹಾಗೂ ವೈದ್ಯ ವೃತ್ತಿಗಳ ಪವಿತ್ರ ವೃತ್ತಿಗಳಾಗಿವೆ. ಈ ಎರಡರಲ್ಲೂ ಸಹ ಸೇವಾ ಮನೋಭಾವ ಪವಿತ್ರವಾಗಿದೆ ಇಂದಿನ ನಮ್ಮ ದೈನಂದಿನ ಜೀವನ ಶೈಲಿ ಹಾಗೂ ಆಹಾರ ಪದ್ದತಿಯ ಬದಲಾವಣೆಯಿಂದಾಗಿ ಆರೋಗ್ಯ ತೊಂದರೆಗಳು ಹೆಚ್ಚಾಗುತ್ತಿವೆ ರೋಗ ಬರದಂತೆ ತಡೆಯಲು ತಾವು ಸೂಕ್ತ ಸಲಹೆಗಳನ್ನು ಸಾರ್ವಜನಿಕರಿಗೆ ನೀಡಬೇಕು. ಜೀವನದಲ್ಲಿ ಯಾವುದೇ ಒಂದು ಸಾಧನೆ ಮಾಡಲು ಪ್ರಾಮಾಣಿಕತೆ, ಕಠಿಣ ಪರಿಶ್ರಮ, ನಮ್ರತೆ ವಿನಯತೆಯನ್ನು ಮೈಗೂಡಿಸಿಕೊಳ್ಳಬೇಕೆಂದು ನುಡಿದರು.

ವೈದ್ಯ ಪದವಿ ಪಡೆದ ವಿಧ್ಯಾರ್ಥಿಗಳ ಪೈಕಿ ಡಾ. ಧನುಶ್ರೀ ಹಾಗೂ ಡಾ. ತೆಹಲಿಲ್ ಮಾತನಾಡಿ ಗದಗ ಜಿಲ್ಲೆಯ ಹೆಸರನ್ನು ನಾವುಗಳು ಕಳೆದ 7 ವರ್ಷಗಳಿಂದ ಗದಗ ನಮ್ಮ ಊರಾಗಿದೆ. ಈ 7 ವರ್ಷಗಳಲ್ಲಿ ನಮಗೆ ಬೆಂಬಲವಾಗಿ ನಿಂತ ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು. ನಮ್ಮ ಪದವಿ ಪೂರ್ಣಗೊಳ್ಳುವ ಕೊನೆಯ ಹಂತದಲ್ಲಿ ಕೊವಿಡ್ ಮಹಾಮಾರಿ ಒಕ್ಕರಿಸಿದ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದ್ದು ಅತ್ಯಂತ ಸಂತಸದ ವಿಷಯಾಗಿದೆ ಎಂದು ಹೇಳಿದರು.

 ಇದೇ ಸಂದರ್ಭದಲ್ಲಿ ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಕುಲಸಚಿವ ಡಾ. ರಾಮಕೃಷ್ಣರೆಡ್ಡಿ ಯುವ ವೈದ್ಯರುಗಳಿಗೆ ಪ್ರಮಾಣ ವಚನ ಭೊದಿಸಿದರು.

ಜಿಲ್ಲಾ ಪಂಚಾಯತ ಅಧ್ಯಕ್ಷ ಈರಪ್ಪ ನಾಡಗೌಡ್ರ, ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ತಾ.ಪಂ. ಅಧ್ಯಕ್ಷ ವಿದ್ಯಾದರ ದೊಡಮನಿ, ಗ್ರಾ.ಪಂ ಅಧ್ಯಕ್ಷೆ ಜಯಶ್ರೀ ಚ.ಅಣ್ಣಿಗೇರಿ, ಜಿ.ಪಂ ಸದಸ್ಯರು, ಜಿಲ್ಲಾ ಸತ್ರ ನ್ಯಾಯಾದೀಶ ರಾಜಶೇಖರ ಪಾಟೀಲ, ಅಪರ ಜಿಲ್ಲಾಧಿಕಾರಿ ಎಂ.ಸತೀಶ ಕುಮಾರ, ಜಿಮ್ಸ್ ನಿರ್ದೇಶಕ ಡಾ.ಪಿ.ಎಸ್.ಭೂಸರೆಡ್ಡಿ ಸೇರಿದಂತೆ ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿಧ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ಜೆಡಿಎಸ್ ನೆಲದಲ್ಲಿ ಸೋತರೂ ಅಧಿಕಾರಕ್ಕೆ ಏರುವ ಪ್ರಯತ್ನದಲ್ಲಿ ಬಿಜೆಪಿ!?

ಹಾಸನ : ಜೆಡಿಎಸ್ ಕೋಟೆಯಲ್ಲಿ ತಂತ್ರದಿಂದ ವಶಪಡಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆಯೇ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿವೆ. ಮೀಸಲಾತಿ ಹೆಸರಿನಲ್ಲಿ ಇಂತಹದೊಂದು ಕೃತ್ಯ ನಡೆಯುತ್ತಿದೆ ಎಂಬ ಆರೋಪ ಸದ್ಯ ಬಿಜೆಪಿಯ ವಿರುದ್ಧ ಕೇಳಿ ಬರುತ್ತಿದೆ.

ರಾಷ್ಟಪತಿ ಭಾಷಣಕ್ಕೆ ಬಹಿಷ್ಕರಿಸಲು 16 ವಿಪಕ್ಷಗಳಿಂದ ನಿರ್ಧಾರ

ನಾಳೆಯಿಂದ ಅಧಿವೇಶನ ಸಂಸತ್‌ ಬಜೆಟ್‌ ಆರಂಭವಾಗಲಿದ್ದು, ಕೇಂದ್ರದ ನೂತನ ಕೃಷಿ ಮಸೂದೆಗಳನ್ನ ವಿರೋಧಿಸಿ ರಾಷ್ಟ್ರಪತಿಗಳ ಭಾಷಣ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಗುಲಾಂ ನಬಿ ಹೇಳಿದ್ದಾರೆ.

ಪೊಲೀಸರಿಗೆ ವಾಚಮನ್ ಎಂದು ಆವಾಜ್ ಹಾಕಿದ ಯುವಕ

ಲಾಕ್ ಡೌನ್ ಇದ್ದಾಗಲೂ ಅನವಶ್ಯಕವಾಗಿ ಬೈಕ್ ನಲ್ಲಿ ಓಡಾಡುತ್ತಿದ್ದ ಯುವಕನಿಗೆ ಓಡಾಡದಂತೆ ಸೂಚನೆ ನೀಡಿದ ಪೊಲೀಸರಿಗೆ ಯುವಕ ನೀವು ವಾಚಮನ್ ಇದ್ದ ಹಾಗೆ ಎಂದು ಆವಾಜ್ ಹಾಕಿದ್ದಾನೆ.

ನಾಳೆ ನಡೆಯುವ ಜನಸಂಪರ್ಕ ಯಾತ್ರೆಗೆ ಬಿಎಸ್‌ವೈ, ಸಿಎಂ ಬೊಮ್ಮಾಯಿ

ಉತ್ತರಪ್ರಭ ಸುದ್ದಿ ಗದಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸೇರಿದಂತೆ ಅನೇಕ…