ಧಾರವಾಡ ಸ್ಥಳೀಯ ಸಂಸ್ಥೆಗಳ ದ್ವೈವಾರ್ಷಿಕ ಚುನಾವಣೆ ಶಾಂತಿಯುತ : ಜಿಲ್ಲೆಯಲ್ಲಿ ಶೇ.99.80 ರಷ್ಟು ಮತದಾನ

ಉತ್ತರಪ್ರಭ ಸುದ್ದಿ

ಗದಗ: ಧಾರವಾಡ ಸ್ಥಳೀಯ ಸಂಸ್ಥೆಗಳ ದ್ವೈವಾರ್ಷಿಕ ಚುನಾವಣೆಗೆ ಮತದಾನವು ಶಾಂತಿಯುತವಾಗಿ ಜರುಗಿದ್ದು  ಜಿಲ್ಲೆಯಲ್ಲಿ ಶೇ. 99.80 ರಷ್ಟು ಮತದಾನವಾಗಿರುತ್ತದೆ.

ಗದಗ ತಾಲೂಕಿನಲ್ಲಿ ಶೇ.99.79 ಲಕ್ಷ್ಮೇಶ್ವರ ಶೇ.99.07, ಶಿರಹಟ್ಟಿ ಶೇ.100, ಮುಂಡರಗಿ ಶೇ.100 ರೋಣ ಶೇ.99.72,  ಗಜೇಂದ್ರಗಡ ಶೇ.100, ನರಗುಂದ ತಾಲೂಕಿನಲ್ಲಿ ಶೇ.100 ರಷ್ಟು ಮತದಾನವಾಗಿರುತ್ತದೆ.

ಜಿಲ್ಲೆಯಲ್ಲಿ ಸುಗಮ ಮತದಾನ ಪ್ರಕ್ರಿಯೆಗಾಗಿ 130 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮುಂಜಾನೆ 8 ಗಂಟೆಯಿಂದ ಸಾಯಂಕಾಲ 4 ಗಂಟೆಯ ವರೆಗೆ ಶಾಂತಿಯುತವಾಗಿ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಜಿಲ್ಲೆಯ 1955 ಮತದಾರ  ಪೈಕಿ ಪುರುಷ 956 ಹಾಗೂ 995 ಮಹಿಳಾ  ಮತದಾರರು ಸೇರಿದಂತೆ ಒಟ್ಟು  1951 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ .

ತಾಲೂಕುವಾರು ಮತದಾನದ ವಿವರ: ಗದಗ ತಾಲೂಕಿನ 468 ಮತದಾರರ ಪೈಕಿ 229ಪುರುಷ, 238 ಮಹಿಳಾ ಮತದಾರರು ಸೇರಿದಂತೆ ಒಟ್ಟು 467 ಮತದಾರರು, ಲಕ್ಷ್ಮೇಶ್ವರ ತಾಲೂಕಿನ 216 ಮತದಾರರ ಪೈಕಿ 104 ಪುರುಷ, 110 ಮಹಿಳೆಯರು ಸೇರಿದಂತೆ ಒಟ್ಟು 214 ಮತದಾರರು,ಶಿರಹಟ್ಟಿ ತಾಲೂಕಿನ 207 ಮತದಾರರ ಪೈಕಿ 102 ಪುರುಷ, 105 ಮಹಿಳೆಯರು ಸೇರಿದಂತೆ ಒಟ್ಟು 207 ಮತದಾರರು ಮುಂಡರಗಿ ತಾಲೂಕಿನ 304 ಮತದಾರರ ಪೈಕಿ 148ಪುರುಷ, 156 ಮಹಿಳೆಯರು ಸೇರಿದಂತೆ ಒಟ್ಟು 304 ಮತದಾರರು,ರೋಣ ತಾಲೂಕಿನ 354 ಮತದಾರರ ಪೈಕಿ 172ಪುರುಷ, 181 ಮುಹಿಳೆಯರು ಸೇರಿದಂತೆ ಒಟ್ಟು 353 ಮತದಾರರು,ಗಜೇಂದ್ರಗಡ ತಾಲೂಕಿನ 216 ಮತದಾರರ ಪೈಕಿ 108 ಪುರುಷ, 108 ಮಹಿಳೆಯರು ಸೇರಿದಂತೆ 216 ಮತದಾರರು,ನರಗುಂದ ತಾಲೂಕಿನ 190 ಮತದಾರರ ಪೈಕಿ 93ಪುರುಷ, 97ಮಹಿಳಾ ಮತದಾರರು ಸೇರಿದಂತೆ ಒಟ್ಟು 190 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿರುತ್ತಾರೆ.

ಚುನಾವಣೆ ಮತ ಪೆಟ್ಟಿಗೆಗಳನ್ನು ಪೋಲಿಸ್ ಬಂದೋಬಸ್ತನಲ್ಲಿ ಮತ ಎಣಿಕೆ ಕೇಂದ್ರವಾದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸ್ಟ್ರಾಂಗ ರೂಂಗೆ ಕಳುಹಿಸಲಾಯಿತು. ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ, ಮುಂಡರಗಿ, ತಾಲೂಕಿನ ಮತಪೆಟ್ಟಿಗೆಗಳನ್ನು ಅಪರ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ  ನರಗುಂದ, ರೋಣ, ಗಜೇಂದ್ರಗಡ ತಾಲೂಕಿನ ಮತಪೆಟ್ಟಿಗೆಗಳನ್ನು ಉಪ ವಿಭಾಗಾಧಿಕಾರಿಗಳ ಮಾರ್ಗದರ್ಶನದಲ್ಲಿ ಎರಡು ಪ್ರತ್ಯೇಕ ಮಾರ್ಗದಲ್ಲಿ ಸುರಕ್ಷಿತವಾಗಿ ಮತ ಎಣಿಕೆ ಕೇಂದ್ರಕ್ಕೆ ತಲುಪಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

You May Also Like

ನೂರರ ಗಡಿದಾಟಿದ ಕೊರೊನಾ ಪ್ರಕರಣಗಳು

ಗದಗ : ಜಿಲ್ಲೆಯಲ್ಲಿ ದಿನದ ಲೆಕ್ಕದಲ್ಲಿ ಪತ್ತೆಯಾಗುತ್ತಿರುವ ಕೋವಿಡ್-19 ಸೋಂಕಿನ ಪ್ರಕರಣಗಳು ನೂರರ ಗಡಿಯ ಆಸುಪಾಸಿನಲ್ಲೇ…

ಯುವಕರೇ ವಾಟ್ಸಾಪ್, ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡುವ ಮುನ್ನ ಎಚ್ಚರ..! ಪೊಲೀಸರ ನಿಗಾ ನಿಮ್ಮ ಮೇಲಿದೆ..!!

ಉತ್ತರಪ್ರಭಗದಗ: ಶಹರ ಪೊಲೀಸರು ಶ್ರೀರಾಮ ಸೇನೆ ಕಾರ್ಯ ಕರ್ತನನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು ಸ್ಥಳದಲ್ಲಿ…

ಲಕ್ಷ್ಮೇಶ್ವರ: ಹೆಚ್ಚಿನ ಬಸ್ ವ್ಯವಸ್ಥೆಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

ಪಟ್ಟಣದಿಂದ ಗದಗ ನಗರಕ್ಕೆ ಹೆಚ್ಚಿನ ಬಸ್‍ಗಳ ವ್ಯವಸ್ಥೆ ಕಲ್ಪಿಸಬೇಕೆಂದು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಸಿದರು.

ಧಾರವಾಡ ಬಳಿ ಕಾರು ಪಲ್ಟಿ : ಐಎಎಸ್ ಅಧಿಕಾರಿ ಸೇರಿ ಐವರಿಗೆ ಗಾಯ

ಉತ್ತರಪ್ರಭಧಾರವಾಡ: ಹಿರಿಯ ಐಎಎಸ್ ಅಧಿಕಾರಿ ಪ್ರಯಾಣಿಸುತ್ತಿದ್ದ ಕಾರು ಪಲ್ಟಿಯಾದ ಘಟನೆ ತಾಲೂಕಿನ ಯರಿಕೊಪ್ಪ ಬಳಿ ಹುಬ್ಬಳ್ಳಿ-ಧಾರವಾಡ…