ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಗುರುವಾರದಿಂದ ಲೇಟ್ ನೈಟ್ ಪಾರ್ಟಿಗಳನ್ನು ಸ್ಥಗಿತಗೊಳಿಸುವಂತೆ ರಾಜ್ಯದ ಎಲ್ಲಾ ಸ್ಟಾರ್ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಿಗೆ ಸೂಚಿಸಲಾಗಿದೆ ಎಂದು ಸುಧಾಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ಸೂಚನೆಯವರೆಗೆ ತಡರಾತ್ರಿ ಪಾರ್ಟಿಗಳನ್ನು ನಿಷೇಧಿಸಲಾಗಿದೆ, ಏಕೆಂದರೆ ಇಂತಹ ಘಟನೆಗಳಿಗೆ ಹೆಚ್ಚು ಜನರು ಒಂದೇ ಸ್ಥಳದಲ್ಲಿ ಮತ್ತು ಮುಚ್ಚಿದ ಪರಿಸರದಲ್ಲಿ ಸೇರುವುದು ವೈರಸ್ ಹರಡಲು ಕಾರಣವಾಗಬಹುದು ಎಂದು ಸಚಿವರು ಪ್ರತಿಪಾದಿಸಿದರು.

ನಗರ ಮತ್ತು ರಾಜ್ಯದ ಇತರ ಭಾಗಗಳಲ್ಲಿ ವೈರಾಣು ಹರಡುವಿಕೆಯನ್ನು ನಿಯಂತ್ರಿಸಲು ನಾವು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಆದರೆ ಈ ವೈರಸ್ ಪ್ರಮಾಣವು ಶೇ.1ರಷ್ಟು ಮತ್ತು ರಾಜ್ಯದಾದ್ಯಂತ ಸಾವಿನ ಪ್ರಮಾಣವು ಶೇಕಡಾ 1ಕ್ಕಿಂತ ಕಡಿಮೆ ಇದೆ ಎಂದು ಸುಧಾಕರ್ ಅವರು ಪುನರುಚ್ಚರಿಸಿದರು.

ಬುಧವಾರ 760 ಹೊಸ ಪ್ರಕರಣಗಳು ದಾಖಲಾಗಿದ್ದು, 7,456 ಸಕ್ರಿಯ ಪ್ರಕರಣಗಳು ಸೇರಿದಂತೆ ಒಟ್ಟು ಪ್ರಕರಣಗಳ ಸಂಖ್ಯೆ 9,56,801 ಕ್ಕೆ ಏರಿಕೆಯಾಗಿದ್ದರೆ, ಚೇತರಿಕೆಯ ಪ್ರಮಾಣ 9,36,947ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 331 ರೋಗಿಗಳು ಡಿಸ್ಚಾರ್ಜ್ ಆಗಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಲಮಟ್ಟಿ : ಕೋಟಿ ಕಂಠ ಗೀತ ಗಾಯನ ಸಂಭ್ರಮ

ಆಲಮಟ್ಟಿ:  ಇಲ್ಲಿನ ಶಾಲಾ,ಕಾಲೇಜುಗಳಲ್ಲಿ ಶುಕ್ರವಾರ ಕನ್ನಡ ಸಿರಿತನದ ಗೀತೆಗಳು ಮೊಳಗಿದವು. ಕನ್ನಡಮ್ಮನ ಜ್ಞಾನ ದೀಪದ ಗೀತಗಾನ…

ಹೀಗೆ ಮುಂದುವರೆದರೆ ಸೋಂಕಿತರ ಸಂಖ್ಯೆ ಆಗಷ್ಟ್ ನಲ್ಲಿ ಎಷ್ಟಾಗಲಿದೆ ಗೊತ್ತಾ?

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಹೀಗೆ ಮುಂದುವರೆದರೆ ಆಗಸ್ಟ್ 15ರ ವೇಳೆಗೆ ಸೋಂಕಿತರ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೋವಿಡ್-19 ವಾರ್ ರೂಂ ಮುಖ್ಯಸ್ಥ ಮುನೀಶ್ ಮೌದ್ಗಿಲ್ ಅಂದಾಜಿಸಿದ್ದಾರೆ.

ಕಳ್ಳರ ಕಣ್ಣು ಈಗ ಆಡಿನ ಮ್ಯಾಲೆ…!!! ಸ್ಕಾಪಿ೯ಯೋದಲ್ಲಿ ಬಂದು ಆಡು ಕದ್ದ ಖದೀಮರು?

ಉತ್ತರಪ್ರಭ ಸುದ್ದಿನಿಡಗುಂದಿ: ಕಳ್ಳತನದ ಹಾವಳಿ ಹಾಡುಹಗಲೇ ಶುರುವಾಗಿವೆ. ಜಿಲ್ಲೆಯಲ್ಲಿಗ ಮಕ್ಕಳ ಕಳ್ಳತನದ ಗುಲ್ಲು ಒಂದಡೆ ಆತಂಕ…