ರಾಯಚೂರು: ಮಗನನ್ನು ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಕರೆದೊಯ್ಯುವ ವೇಳೆ ಅಪಘಾತ ಸಂಭವಿಸಿ ತಂದೆ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಮಿಯ್ಯಾಪುರ ಗ್ರಾಮದ ಬಳಿ ನಡೆದಿದೆ. ನಾಗರೆಡ್ಡಿ ಮೀಯ್ಯಾಪು (52) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ. ಮಿಯ್ಯಾಪುರ ಗ್ರಾಮದಿಂದ ಗಬ್ಬೂರಿಗೆ ಎಸ್.ಎಸ್. ಎಲ್.ಸಿ ಪರೀಕ್ಷೆ ಬರೆಯಲು ಮಗನನ್ನು ದ್ವಿಚಕ್ರ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದರು, ಈ ವೇಳೆ ಹಸು ಅಡ್ಡ ಬಂದ ಕಾರಣ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ತಂದೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗನಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ. ಗಬ್ಬೂರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
You May Also Like
ಬುಧವಾರ ಭಾರತಕ್ಕೆ ಬರಲಿವೆ ರಫೇಲ್ ಯುದ್ಧ ವಿಮಾನ: ಸದ್ಯ ಫ್ರಾನ್ಸ್ ಬಿಟ್ಟಿವೆ ಫೈಟರ್ ಜೆಟ್ಸ್
ಸೋಮವಾರ ಫ್ರಾನ್ಸ್ ನಿಂದ ಹೊರಟಿರುವ ಮೊದಲ ಬ್ಯಾಚಿನ ರಫೇಲ್ ಯುದ್ಧ ಫ್ರಾನ್ಸ್ ಬಿಟ್ಟಿರುವ 5 ರಫೇಲ್ ಯುದ್ಧ ವಿಮಾನಗಳು 7 ಸಾವಿರ ಕಿಮೀ ದೂರ ಕ್ರಮಿಸಿ ಬುಧವಾರ ಭಾರತವನ್ನು ತಲುಪಲಿವೆ. ಯುಎಇನಲ್ಲಿರುವ ಫ್ರಾನ್ಸ್ ಏರ್ ಬೇಸ್ ನಲ್ಲಿ ಇಳಿದು ನಂತರ ಭಾರತ ತಲುಪಲಿವೆ. ಎವಿಯೇಷನ್ ಕಂಪನಿ ಡಸಾಲ್ಟ್ ನಿರ್ಮಿಸಿರುವ ಈ ಅತ್ಯಾಧುನಿಕ ಫೈಟರ್ ಜೆಟ್ಸ್ ದಕ್ಷಿಣ ಫ್ರಾನ್ಸಿನ ಬ್ರೊಡಾಕ್ಸ್ ನಗರದಿಂದ ಪ್ರಯಾಣ ಬೆಳೆಸಿವೆ. 2016ರಲ್ಲಿ ಭಾರತವು ಫ್ರಾನ್ಸ್ ಕಂಪನಿ ಡಸಾಲ್ಟ್ ಕಂಪನಿಯಿಂದ ಇಂತಹ 36 ವಿಮಾನಗಳನ್ನು ಖರೀದಿಸಲು 59 ಸಾವಿರ ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿತ್ತು. ಅದರ ಮೊದಲ ಭಾಗವಾಗಿ ಈಗ 5 ವಿಮಾನಗಳು ದೇಶದ ಸೇನೆಯ ಭಾಗವಾಗಲಿವೆ.
- ಉತ್ತರಪ್ರಭ
- July 27, 2020