ಮಂಡ್ಯ : ಮನೆಯವರ ನಿರಂತರ ದೌರ್ಜನ್ಯಕ್ಕೆ ಬೇಸತ್ತ ಸೊಸೆಯೊಬ್ಬರು ಪತಿ, ಮಾವ ಹಾಗೂ ಅತ್ತೆಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆ ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ನಡೆದಿದೆ.  ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ಮೂವರನ್ನೂ ಕೊಲೆ ಮಾಡಿದ್ದಾರೆ. ಈ ಘಟನೆ ಒಂದು ವಾರದ ಹಿಂದೆಯೇ ನಡೆದಿದೆ. ಆದರೆ, ಗಾಯಾಳುಗಳು ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 

ಹೆಮ್ಮಡಹಳ್ಳಿಯ ನಿವಾಸಿ, ಮಹಿಳೆಯ ಪತಿ ನಾಗರಾಜು (50), ಮಾವ ವೆಂಕಟೇಗೌಡ(70) ಹಾಗೂ  ಅತ್ತೆ ಕುಳ್ಳಮ್ಮ (60) ಕೊಲೆಯಾದವರು. ಆರೋಪಿತ ಮಹಿಳೆ ನಾಗಮಣಿ ಎಂಬುವವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. 

Leave a Reply

Your email address will not be published. Required fields are marked *

You May Also Like

ಸೂರ್ಯಕಾಂತಿಗೆ ಕೋರಿ ಹುಳಗಳ ದಾಳಿ-ರೈತರು ಕಂಗಾಲು

ಉತ್ತರಪ್ರಭ ಸುದ್ದಿಆಲಮಟ್ಟಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡಿರುವ ಸೂರ್ಯಕಾಂತಿ ಬೆಳೆ ಹುಲುಸಾಗಿ ಬೆಳೆದು ನಿಂತಿದೆ. ಹಚ್ಚು ಹಸಿರಾಗಿ…

ನಗರದಲ್ಲಿ ಮತ್ತೆ ಹಲವು ಪ್ರದೇಶಗಳು ಸೀಲ್ ಡೌನ್ ಪಟ್ಟಿಗೆ!

ಬೆಂಗಳೂರು : ನಗರದಲ್ಲಿ ಮಹಾಮಾರಿಯ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೀಲ್ ಡೌನ್ ಹೆಚ್ಚಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ನಗರದ ಬಹುತೇಕ ಏರಿಯಾಗಳು ಸೀಲ್ಡೌಗನ್ ಆಗಲಿವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ

ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ

ಗದಗ: ಕನ್ನಡ ಜಾನಪದ ಪರಿಷತ ಬೆಂಗಳೂರು ಜಿಲ್ಲಾ ಘಟಕ ಗದಗ ಇವರ ಆಶ್ರಯದಲ್ಲಿ ನವೆಂಬರ 17 ರಂದು ಸಾಯಂಕಾಲ 5-30 ಗಂಟೆಗೆ ಗದಗ ನಗರದ ಬಣ್ಣದ ಮನೆ ಆರ್ಟ ಅಡ್ಡಾದ ಸಾಂಸ್ಕೃತಿಕ ಭವನದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ,