ಬೆಂಗಳೂರು : ಲಾಕ್ ಡೌನ್ ತೆರವುಗೊಂಡ ನಂತರ ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ಸ್ಪೋಟಗೊಂಡಿದೆ. ಹೀಗಾಗಿ ಲಾಕ್ ಡೌನ್ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿದ ನಂತರವೇ ಲಾಕ್ ಡೌನ್ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಹಲವು ಸಚಿವರಿಗೆ ಸಿಎಂ ಸ್ಪಷ್ಟವಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೂ ರಾಜ್ಯದ ಎಲ್ಲಿಯೂ ಲಾಕ್ ಡೌನ್ ಇಲ್ಲ. ಇಂದು ಕ್ಯಾಬಿನೆಟ್ ನಲ್ಲಿ ಬರೀ ಚರ್ಚೆ ಅಷ್ಟೇ, ನಿರ್ಧಾರ ಇಲ್ಲ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಸಭೆಗೂ ಮುನ್ನ ಕೂಡ ಸಿಎಂ ಮಾಧ್ಯಮಗಳಿಗೆ ಈ ಕುರಿತು ತಿಳಿಸಿದ್ದಾರೆ. ಜು. 4ಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿಯುತ್ತವೆ. ಅಲ್ಲಿಯವರೆಗೂ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಅಲ್ಲಿಯವರೆಗೂ ಯಾವುದೇ ಲಾಕ್ ಡೌನ್ ವಿಚಾರಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಿಎಂ ತಿಳಿಸಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You May Also Like

ಹಲವು ಜಿಲ್ಲೆಗಳಲ್ಲಿ ಸಾರಿಗೆ ಇಲಾಖೆ ಕಚೇರಿ ಆರಂಭ!

ಗೃಹ ಸಚಿವಾಲಯದಿಂದ ಲಾಕ್‌ಡೌನ್ ಕ್ರಮಗಳ ಕುರಿತು ಹೊಸ ಮಾರ್ಗಸೂಚಿಗಳು ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಹಸಿರು ವಲಯಕ್ಕೊಳಪಡುವ 14 ಜಿಲ್ಲೆಗಳಲ್ಲಿ ಸಾರಿಗೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ.

ಸಹಕಾರ ಬ್ಯಾಂಕ್ ಗಳ ಮೂಲಕ ರೈತರಿಗೆ 20,810 ಕೋಟಿ ಬೆಳೆ ಸಾಲ-ಸಚಿವ ಸೋಮಶೇಖರ್

ಬೆಂಗಳೂರು: ಸಹಕಾರ ಬ್ಯಾಂಕ್ ಗಳ ಮೂಲಕ ಈ ವರ್ಷ20,810 ಕೋಟಿ ರೂ. ಬೆಳೆ ಸಾಲ ನೀಡುವ ಗುರಿ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಗುರಿ ತಲುಪಲು ರಾಜ್ಯದ 212 ಡಿಸಿಸಿ ಬ್ಯಾಂಕ್ ಗಳಿಗೆ ತಿಳಿಸಲಾಗಿದೆ. 303 ಲಕ್ಷ ರೈತರನ್ನು ತಲುಪಲು ಹೇಳಿದ್ದೇವೆ ಎಂದರು.

ಚಿಕ್ಕಪ್ಪ, ಮಗ ಸೇರಿ ಗಾಂಜಾ ಸೇವಿಸಿದರು…ಮತ್ತಿನಲ್ಲಿ ಜಗಳವಾಡಿದರು…ಮುಂದೇನಾಯ್ತು?

ಕೋಲಾರ : ಗಾಂಜಾ ಅಮಲಿನಲ್ಲಿ ತಮ್ಮ ಚಿಕ್ಕಪ್ಪನನ್ನೇ ಬಾಲಕ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಮಾಲೂರು ತಾಲೂಕಿನ ಬೆನ್ನಘಟ್ಟ ಗ್ರಾಮದಲ್ಲಿ ಘಟನೆ ನಡೆದಿದೆ.