ಆಲಮಟ್ಟಿ; ಬೈಕ್ ಹಾಗು ಖಾಸಗಿ ಬಸ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
ಆಲಮಟ್ಟಿ- ನಿಡಗುಂದಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ -13 ರ ಗಂಗಾ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ (SRS TEAVELS) ಬಸ್ ಹಾಗೂ ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟದ್ದಾರೆ. ಈ ಘಟನೆ ಬುಧವಾರ ರಾತ್ರಿ ನಡೆದಿದೆ.
ಮೃತರಿಬ್ಬರು ನಿಡಗುಂದಿ ತಾಲ್ಲೂಕಿನ ಅಬ್ಬಿಹಾಳ ಗ್ರಾಮದ ಸುನಿಲ ಮಲ್ಲಪ್ಪ ಮಂಕಣಿ (24) ಹಾಗೂ ಯಲ್ಲನಗೌಡ ಬಸನಗೌಡ ಮಂಕಣಿ (23) ಎಂದು ಗುರುತಿಸಲಾಗಿದೆ.


ಆಲಮಟ್ಟಿ ಯಿಂದ ಮರಳಿ ತಮ್ಮೂರು ಅಬ್ಬಿಹಾಳ ಗ್ರಾಮಕ್ಕೆ ತೆರಳುತ್ತಿದ್ದ ಬೈಕ್, ವಿಜಯಪುರ ದಿಂದ ಬೆಂಗಳೂರಗೆ ಹೊರಟಿದ್ದ ಖಾಸಗಿ ಬಸ್ ಮಧ್ಯೆ ಈ ಅಪಘಾತ ಸಂಭವಿಸಿದೆ.


ಮೃತ ದೇಹಗಳು ಬಸ್ ಗಾಲಿಯಲ್ಲಿ ಸಿಕ್ಕಿಕೊಂಡಿದ್ದು ಅಪಘಾತದ ಭೀಕರತೆ ತೋರಿಸುತ್ತಿತ್ತು.
ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ ಪಿ ಅರುಣಕುಮಾರ ಕೋಳೂರ, ಸಿಪಿಐ ಸೋಮಶೇಖರ್ ಜುಟ್ಟಲ, ಪಿಎಸ್ ಐ ಚಂದ್ರಶೇಖರ ‌ಹೆರಕಲ್ಲ ಭೇಟಿ ನೀಡಿದ್ದರು.

Leave a Reply

Your email address will not be published. Required fields are marked *

You May Also Like

17 ಜನ ತಬ್ಲಿಘಿಗಳನ್ನು ಕ್ವಾರಂಟೈನ್ ಮಾಡಿದ ಅಧಿಕಾರಿಗಳು!

ಅಹಮದಾಬಾದ್ ನಿಂದ ಬಂದು ಚಿತ್ರದುರ್ಗದಲ್ಲಿ ಪತ್ತೆಯಾಗಿದ್ದ ತುಮಕೂರಿನ 17 ಜನ ತಬ್ಲಿಘಿಗಳನ್ನು ಪಾವಗಡದ ವೈ.ಎನ್.ಹೊಸಕೋಟೆಯ ಕುರುಬರಹಳ್ಳಿ ಬಳಿಯ ಬಾಲಕಿಯರ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಮಲೆನಾಡ ಜನರ ನಿದ್ದೆಗೆಡಿಸಿದ ಪಾದರಾಯನಪುರ!

ಪಾದರಾಯನಪುರದ ಗಲಾಟೆ ಮಲೆನಾಡಿನಲ್ಲಿ ಭಯ ಹುಟ್ಟಿಸುತ್ತಿದೆ. ಕೊರೊನಾ ದೇಶ ಹಾಗೂ ರಾಜ್ಯದಲ್ಲಿ ವಕ್ಕರಿಸಿದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಒಂದೇ ಒಂದು ಕೇಸ್ ಕೂಡ ಇರಲಿಲ್ಲ. ಆದರೆ, ಸದ್ಯ ಈ ಜಿಲ್ಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಸೂರ್ಯಕಾಂತಿ ಕ್ಷೇತ್ರಕ್ಕೆ ಕೃಷಿ ಅಧಿಕಾರಿಗಳ ಭೇಟಿ ಕೀಟ ರೋಗ ನಿಯಂತ್ರಣಕ್ಕೆ ಸಲಹೆ

ಉತ್ತರಪ್ರಭ ಸುದ್ದಿನಿಡಗುಂದಿ: ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಸೂರ್ಯಕಾಂತಿ ಮತ್ತು ಮೆಕ್ಕೆಜೋಳ ಬೆಳೆಗಳಿಗೆ ಕೀಟ ಹಾಗೂ ರೋಗಗಳ…