ಗದಗ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷವಾದರೂ ಹುಲಕೋಟಿ, ಕುರ್ತಕೋಟಿ ಗ್ರಾಮ ಪಂಚಾಯತಿಗಳಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ಈ ಬಾರಿಯಾದರೂ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಮುಖಂಡ ಅನೀಲ್ ಮೆಣಸಿನಕಾಯಿ ಆಗ್ರಹಿಸಿದರು.

ಈ ಕುರಿತು ನಗರದ ಖಾಸಗಿ ಹೊಟೇಲ್ ನಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ನನಗೆ ಮಾಜಿ ಶಾಸಕ ಡಿ.ಆರ್.ಪಾಟೀಲ್ ಅವರ ಕಾರ್ಯಗಳನ್ನು ನೋಡಿ ಅವರ ಬಗ್ಗೆ ಸ್ವಲ್ಪ ಅಭಿಮಾನ ಮೂಡುತ್ತಿದೆ. ಇತ್ತಿಚೆಗೆ ಗಾಂಧೀಜಿ ಗದಗ ಭೇಟಿಗೆ 100 ವರ್ಷದ ಹಿನ್ನೆಲೆ ಆಯೋಜಿಸಿದ ಕಾರ್ಯಕ್ರಮ ಹಾಗೂ ಸ್ವಾಮಿ ವಿವೇಕಾನಂದರ ಚಿಂತನೆಯ ಬಗೆಗಿನ ಅವರ ಆಸಕ್ತಿಯನ್ನು ಗಮನಿಸಿದಾಗಲೂ ಕಾಂಗ್ರೆಸ್ ಪಕ್ಷದಲ್ಲಿದ್ದಾಗ್ಯೂ ಇಂತಹ ಯೋಚನೆಯುಳ್ಳವರಾಗಿದ್ದರಿಂದ ಅವರ ಬಗೆಗೆ ಸ್ವಲ್ಪ ಅಭಿಮಾನ ಮೂಡಿದೆ. ಹೀಗಾಗಿ ಗಾಂಧಿಜೀ ಬಗ್ಗೆ ಅಪಾರ ಒಲವು ಇಟ್ಟುಕೊಂಡಿರುವ ಡಿ.ಆರ್.ಪಾಟೀಲ ಅವರು ಈ ಬಾರಿ ಗದಗ ವಿಧಾನ ಸಭಾ ಕ್ಷೇತ್ರದಾದ್ಯಂತ ಮುಕ್ತ ಹಾಗೂ ಪಾರದರ್ಶಕ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸೋಲು-ಗೆಲುವು ಸಮಾನಾಗಿ ಸ್ವೀಕರಿಸಲು ಮನವಿ

ಚುನಾವಣೆ ಎಂದ ಮೇಲೆ ಸೋಲು ಗೆಲವು ಸಾಮಾನ್ಯ. ಆದರೆ ಚುನಾವಣೆಯನ್ನು ಪಾರದರ್ಶಕವಾಗಿ ಎದುರಿಸುವ ಮೂಲಕ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವುದನ್ನು ಕಲಿಯಬೇಕು. ಒಂದು ವೇಳೆ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಗ್ರಾಮ ಪಂಚಾಯತಿ ಚುನಾವಣೆಗಳು ನಡೆದರೆ ಒಟ್ಟು 12 ಗ್ರಾಮ ಪಂಚಾಯತಿಗಳಲ್ಲಿ 10 ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಅಬ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಸೋತ ಮೇಲೆಯೇ ಗೊತ್ತಾಗಿದ್ದು

ನಾನು ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿದ ಮೇಲೆಯೇ ಈ ಎಲ್ಲ ಅಂಶಗಳು ಬೆಳಕಿಗೆ ಬರುತ್ತಿವೆ. ಇನ್ನು ಕಳೆದ ವಿಧಾನಸಭಾ ಚುನಾವನೆಯಲ್ಲಿ ಸ್ವತಃ ಶಾಸಕ ಎಚ್.ಕೆ.ಪಾಟೀಲ್ ಅವರ ಪುತ್ರನೇ ಎರಡು ಕಡೆ ಮತದಾನ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ.  ಗ್ರಾಮ ಪಂಚಾಯತಿ ಚುನಾವಣೆಗೆ ಸ್ಫರ್ಧಿಸುವ ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಬರದಂತೆ ಕುತಂತ್ರ ಮಾಡಲಾಗುತ್ತಿದೆ.

ಊರಲ್ಲಿಲ್ಲದಿದ್ದರೂ 300 ಜನರ ಹೆಸರು ಮತದಾರರ ಪಟ್ಟಿಯಲ್ಲಿ! ಹುಲಕೋಟಿ ಮಿಲ್ ನಲ್ಲಿ ಕೆಲಸ ಮಾಡುವ 200-300 ಕಾರ್ಮಿಕರ ಹೆಸರುಗಳು ಹುಲಕೋಟಿ ಗ್ರಾಮ ಪಂಚಾಯತಿ ಮತದಾರರ ಪಟ್ಟಿಯಲ್ಲಿದೆ. ಆದರೆ ಅವರು ಯಾರೂ ಕೂಡ ಹುಲಕೋಟಿಯಲ್ಲಿ ವಾಸ್ತವ್ಯ ಇಲ್ಲ. ಇನ್ನು ಅಸುಂಡಿ, ಶಾಗೋಟಿ, ದುಂದೂರು ಗ್ರಾಮದವರ ಹೆಸರುಗಳು ಕೂಡ ಮತದಾರರ ಪಟ್ಟಿಯಲ್ಲಿವೆ. ಇನ್ನು ಸೊರಟೂರು ಗ್ರಾಮದಲ್ಲಿ ಈಗಾಗಲೇ ಬೇರೆ ವಾರ್ಡಿಗೆ ಸ್ಥಳಾಂತರಗೊಂಡ ಕುಟುಂಬಗಳ ಹೆಸರು ಮತದಾರರ ಪಟ್ಟಿಯಲ್ಲಿ ಬದಲಾಗಿಲ್ಲ. ಕೇವಲ ಬಿಜೆಪಿಯ ಮತದಾರರ ಕುಟುಂಬಗಳ ಹೆಸರನ್ನು ಮಾತ್ರ ಮತದಾರರ ಪಟ್ಟಿಯಲ್ಲಿ ಬದಲಾಯಿಸಲಾಗಿದೆ. ನೀಲ್ ಮೆಣಸಿನಕಾಯಿ, ಬಿಜೆಪಿ ಮುಖಂಡ

ಹೆಸರಿಟ್ಟುಕೊಳ್ಳಲು ಶೂರರು..!

ಈ ಹಿಂದೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್.ಕೆ.ಪಾಟೀಲ್ ಅವರು ಬಯಲು ಬಹಿರ್ದೆಸೆ ಮುಕ್ತವಾಗಿಸುವ ನಿಟ್ಟಿನಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಆದರೆ ಈಗಲೂ ಸ್ವತಃ ಅವರ ಸ್ವಗ್ರಾಮದಲ್ಲಿಯೇ ಬಯಲು ಬಹಿರ್ದೆಸೆ ಜೀವಂತವಾಗಿರುವುದು ಕಾಣಬಹುದು. ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮೂಲಕ ಶುದ್ಧ ನೀರಿನ ಹರಿಕಾರ ನ್ನುವ ಬಿರುದು ಪಡೆದುಕೊಂಡರು. ಆದರೆ ಇದೀಗ ಅದೆಷ್ಟೋ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ನಿಂತಿವೆ. 4 ಲಕ್ಷದ ಘಟಕಗಳನ್ನು ಹೆಚ್ಚಿನ ಹಣಕ್ಕೆ ಹೈದರಾಬಾದ್ ಮೂಲದ ಕಂಪನಿಗೆ ನೀಡಲಾಗಿತ್ತು. ಇನ್ನು ನದಿ ನೀರಿನ ಮೂಲಕ ಈ ಭಾಗದ ಬಹುತೇಕ ಗ್ರಾಮಗಳ ಕೆರೆ ತುಂಬಿಸಬಹುದಿತ್ತು. ಆದರೆ ಕೇವಲ ಹುಲಕೋಟಿಗೆ ನೀರು ಒಯ್ಯುವ ಉದ್ದೇಶದಿಂದ ಬಹಳಷ್ಟು ಗ್ರಾಮದ ಕೆರೆಗಳು ನೀರು ಕಾಣದಾದವು. ಆದರೆ ಅಭಿವೃದ್ಧಿ ಹರಿಕಾರರು, ಶುದ್ಧ ಕುಡಿಯುವ ನೀರಿನ ಹರಿಕಾರರು ಹೀಗೆ ಸ್ವಯಂ ಘೋಷಿತವಾಗಿ ಹೆಸರನ್ನಿಟ್ಟುಕೊಳ್ಳಲು ಅವರು ಶುರರು ಎಂದು ವ್ಯಂಗ್ಯವಾಡಿದರು.

ಪಕ್ಷವೇ ಕಾರ್ಯಕರ್ತರನ್ನು ಗೆಲ್ಲಿಸಲು ಮುಂದಾಗಿದೆ

ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಮಾತನಾಡಿ, ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ನಾಮಪತ್ರಿಕೆ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ತಿಹಾಸದಲ್ಲಿಯೇ ಮೊದಲ ಬಾರಿಗೆ ಪಕ್ಷವೇ ಕಾರ್ಯಕರ್ತರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ತೆಗೆದುಕೊಂಡು ಸಮಾವೇಶಗಳ ಮೂಲಕ ಜನರಲ್ಲಿ ಜಾಗೃತಿ ಹಾಗೂ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಲಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಗಾಗಿ ಶ್ರಮಿಸಿದ ಕಾರ್ಯಕರ್ತರನ್ನು ಗ್ರಾಮ ಪಂಚಾಯತಿಯಲ್ಇ ಗೆಲ್ಲಿಸುವ ಉದ್ದೇಶದಿಂದ ಗ್ರಾಮ ಪಂಚಾಯತಿಗೆ ಒಬ್ಬ ಪ್ರಮುಖ, ಶಕ್ತಿ ಕೇಂದ್ರಗಳಿಗೆ ಇಬ್ಬರು ಪ್ರಮುಖರು, ಮಹಾಶಕ್ತಿ ಕೇಂದ್ರಗಳಿಗೆ 5 ಜನ ಪ್ರಮುಖರನ್ನು ಆಯ್ಕೆ ಮಾಡಲಾಗಿದೆ. ಹಳ್ಳಿಯಿಂದ ದಿಲ್ಲಿಯಲ್ಲಿ ವೆರೆಗೆ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾತ್ರ ಕೆಂದ್ರ ಮತ್ತು ರಾಜ್ಯದ ಸರ್ಕಾರದ ಯೋಜನೆಗಳು ಗ್ರಾಮ ಪಂಚಾಯತಿ ಕೆಂದ್ರಗಳ ಮೂಲಕ ಸರಳವಾಗಿ ಜನರಿಗೆ ತಲುಪಲು ಅನುಕೂಲವಾಗುತ್ತವೆ ಎಂದು ಹೇಳಿದರು.

               ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧವ್ ಗಣಾಚಾರಿ, ಮುಖಂಡರಾದ ಕಾಂತಿಲಾಲ್ ಬನ್ಸಾಲಿ, ಭದ್ರೇಶ ಕುಸಲಾಪೂರು, ರಾಘವೇಂದ್ರ ಯಳವತ್ತಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

You May Also Like

ವಿಷಕಾರಿ ಹಾವು ಕಚ್ಚಿ ವ್ಯಕ್ತಿ ಸಾವು

ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷಕಾರಿ ಹಾವು ಕಚ್ಚಿ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಗದಗ-ಬೆಟಗೆರಿ ನಗರ ಸಭೆ ಕಾಂಗ್ರೆಸ್ ರಿಟ್ ಅರ್ಜಿ ವಜಾ ಉಷಾ ದಾಸರ ಅಧ್ಯಕ್ಷರಾಗಿ ಮುಂದುವರಿಕೆ

ಉತ್ತರಪ್ರಭ ಗದಗ: ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷವು ನ್ಯಾಯಾಲಯದಲ್ಲಿ…

ಗದಗ ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್!

ಗದಗ: ಜಿಲ್ಲೆಯಲ್ಲಿಂದು 7 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 210…

ಸಿಬಿಎಸ್ ಇ ಪರೀಕ್ಷೆ ಇಲ್ಲ – ಕೇಂದ್ರ ಸ್ಪಷ್ಟನೆ!

ನವದೆಹಲಿ : ಕೊರೊನಾ ಹಿನ್ನೆಲೆಯಲ್ಲಿ ಸಿಬಿಎಸ್ಇ 10ನೇ ತರಗತಿಯ ಪರೀಕ್ಷೆಯನ್ನು ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ…