ಗದಗ: ಸವಿತಾ ಸಮಾಜ ಶ್ರೀ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನ ಟ್ರಸ್ಟ್ ಕಮೀಟಿಯ ವತಿಯಿಂದ ಗದಗ-ಬೆಟಗೇರಿಯಲ್ಲಿ ಮಾ.9 ರಂದು ಮಂಗಳವಾರ ಜರುಗಲಿರುವ ಗದ್ವಾಲ್ ಜಮಲಮ್ಮ ದೇವಿ ದೇವಸ್ಥಾನದ 14ನೇ ವಾರ್ಷಿಕೋತ್ಸವ ಕಾರ್ಯಕ್ರಮದ ನಿಮಿತ್ಯ ಪೂರ್ವಭಾವಿ ಸಭೆಯು ಟ್ರಸ್ಟ್ ಕಮೀಟಿ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಅಧ್ಯಕ್ಷತೆಯಲ್ಲಿ ಗದಗ-ಬೆಟಗೇರಿ ಸವಿತಾ ಸಮಾಜದ ಮೂರು ದೈವದ ಅಧ್ಯಕ್ಷರು ಹಾಗೂ ಪ್ರಮುಖ ಮುಖಂಡರು ಮತ್ತು ಸಮಾಜದ ಹಿರಿಯರ ಉಪಸ್ಥಿತಿಯಲ್ಲಿ ಜರುಗಿತು.
ಸಭೆಯಲ್ಲಿ ಮಾ.09ರ ಮಂಗಳವಾರದAದು ಜರುಗಲಿರುವ ವಾರ್ಷಿಕೋತ್ಸವದ ಪೂರ್ವ ಸಿದ್ಧತೆ ಕುರಿತು ಸಾಧಕ ಬಾಧಕ ಚರ್ಚೆ ಮಾಡಲಾಯಿತು. ಅಂದು ಬೆಳಿಗ್ಗೆ 5 ಘಂಟೆಯಿAದ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಪ್ರಾರಂಭಗೊAಡು ಬೆಳಿಗ್ಗೆ 11:30 ಗಂಟೆಗೆ ಗದ್ವಾಲ್ ಜಮಲಮ್ಮದೇವಿ ದೇವಸ್ಥಾನ ಸಮುದಾಯ ಭವನದ ಭೂಮಿ ಪೂಜೆ ಸೇರಿದಂತೆ ಇನ್ನೂ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಾ.09 ರಂದು ಗದಗ-ಬೆಟಗೇರಿ ಸವಿತಾ ಸಮಾಜದ ಮೂರು ದೈವದ ಕ್ಷೌರದ ಅಂಗಡಿಗಳು ಸಂಪೂರ್ಣವಾಗಿ ಬಂದ್ ಮಾಡಲು ಮೂರು ಸಮಾಜದ ಅಧ್ಯಕ್ಷರು ಹಾಗೂ ಸಮಾಜದ ಹಿರಿಯರು ಒಪ್ಪಿಗೆ ಸೂಚಿಸಿ ನಿರ್ಧರಿಸಲಾಯಿತು.
ಅಂದು ಗದ್ವಾಲ್ ಜಮಲಮ್ಮದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ 5 ಗಂಟೆಯಿAದ ಸಂಜೆಯವರೆಗೂ ಜರುಗಲಿರುವ ಎಲ್ಲಾ ಧಾರ್ಮಿಕ ಪೂಜಾ ಕಾರ್ಯಕ್ರಮದಲ್ಲಿ ಗದಗ-ಬೆಟಗೇರಿ ಹಾಗೂ ಜಿಲ್ಲೆಯ ಸಮಸ್ತ ಸವಿತಾ ಸಮಾಜದ ಬಾಂಧವರು ಮತ್ತು ಶ್ರೀ ಗದ್ವಾಲ ಜಮಲಮ್ಮ ದೇವಿಯ ಸರ್ವ ಭಕ್ತಾಧಿಗಳು ತಮ್ಮ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಮತ್ತು ಮೂರು ದೈವದ ಕ್ಷೌರದ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಕಾರ್ಯಕ್ರಮದಲ್ಲಿ ತಮ್ಮ ಕುಟುಂಬದ ಸರ್ವ ಸದಸ್ಯರೆಲ್ಲರೂ ಭಾಗವಹಿಸಿ ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ಟ್ರಸ್ಟ್ ಕಮೀಟಿಯ ಅಧ್ಯಕ್ಷ ಕೃಷ್ಣಾ ಎಚ್. ಹಡಪದ ಸಭೆಯಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಸವಿತಾ ಸಮಾಜದ ಹಿರಿಯರಾದ ಸೋಮಣ್ಣ ರಾಂಪೂರ, ಪರಶುರಾಮ ಕೋಟೆಕಲ್ಲ, ಯಲ್ಲಪ್ಪ ರಾಯಚೂರ, ಗಿರಿರಾಜ ಕಡಬೂರ, ಮಲ್ಲೇಶಪ್ಪ ರಾಂಪೂರ, ಹನಮಂತಪ್ಪ ರಾಂಪೂರ, ರಮೇಶ ರಾಂಪೂರ, ವಕೀಲರಾದ ಹರೀಶ ರಾಂಪೂರ, ಜಿಲ್ಲಾ ಸವಿತಾ ಸಮಾಜದ ಖಜಾಂಚಿಗಳಾದ ಅರುಣ ರಾಂಪೂರ, ಗದಗ ತಾಲೂಕ ಸವಿತಾ ಸಮಾಜದ ಉಪಾಧ್ಯಕ್ಷರಾದ ಜಂಬಣ್ಣ ಕಡಮೂರ, ಟ್ರಸ್ಟ್ ಕಮೀಟಿಯ ಹಿರಿಯ ಸದಸ್ಯರಾದ ದೇವೇಂದ್ರಪ್ಪ ರಾಂಪೂರ, ಪರಶುರಾಮ ಆದೋನಿ, ಉತ್ಸವ ಕಮೀಟಿ ಕಾರ್ಯದರ್ಶಿಗಳಾದ ಬಸವರಾಜ ಗೌಡರ, ಕಮೀಟಿಯ ಉಪಾಧ್ಯಕ್ಷರಾದ ರಾಘವೇಂದ್ರ ರಾಂಪೂರ ಸೇರಿದಂತೆ ಗದಗ-ಬೆಟಗೇರಿ ಸವಿತಾ ಸಮಾಜದ ಸಮಸ್ತ ಬಾಂಧವರು ಟ್ರಸ್ಟ್ ಕಮೀಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಅಗಸ್ಟ್ 5 ರಂದು ಸಂಕಲ್ಪ ಯಾತ್ರೆಗೆ ಆಲಮಟ್ಟಿಯಲ್ಲಿ ಚಾಲನೆ

ಉತ್ತರಪ್ರಭಆಲಮಟ್ಟಿ : ದೇಶ, ನಾಡು ಕಟ್ಟುವಗೊಸ್ಕರ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮಹನೀಯರ ಸ್ಮರಣೆಗಾಗಿ…

ಬಿಜೆಪಿ ಸರ್ಕಾರದ ವಿರುದ್ಧ ಶಾಸಕ ಎಚ್.ಕೆ.ಪಾಟೀಲ್ ಕಿಡಿ

ಬಿಜೆಪಿ ಸರ್ಕಾರದಲ್ಲಿ ರಾಜಕೀಯ ಗಲಾಟೆ, ಹೊಡೆದಾಟ, ಗೊಂದಲಗಳೇ ತುಂಬಿವೆ. ಬಿಜೆಪಿ ಸರ್ಕಾರಕ್ಕೆ ಅಥವಾ ಪಕ್ಷದವರಿಗೆ ಜನರ ಹಿತದ ಕಡೆ ಗಮನವೇ ಇಲ್ಲ ಎಂಬುವುದಕ್ಕೆ ಅವರ ರಾಜಕೀಯ ಕಿತ್ತಾಟಗಳೇ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ಎಚ್.ಕೆ.ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಶೀಘ್ರವಾಗಿ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾರಂಭಿಸಿಲು: ಮನವಿ

ಶಿರಹಟ್ಟಿ ಪಟ್ಟಣವು ತಾಲ್ಲೂಕು ಕೇಂದ್ರವಾಗಿದ್ದು, ಸ್ಥಳೀಯವಾಗಿ ಎಪಿಎಂಸಿ ಸ್ಥಾಪನೆ ಮಾಡಬೇಕೆಂದು ಮಂಗಳವಾರ ತಹಶಿಲ್ದಾರ ಮೂಲಕ ಕರ್ನಾಟಕ ಪ್ರಜಾಪರ ವೇದಿಕೆ ತಾಲೂಕ ಘಟಕದ ವತಿಯಿಂದ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಾತ್ರೆ,ಉತ್ಸವ ಬಗ್ಗೆ ಸರ್ಕಾರದ ಮಹತ್ವದ ಆದೇಶ

ರಾಜ್ಯದಲ್ಲಿ ಜಾತ್ರೆ, ಉತ್ಸವ, ರಥೋತ್ಸವ ಆಚರಣೆ ಧಾರ್ಮಿಕ ದತ್ತಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.