ಬೆಂಗಳೂರು: ರಾಜ್ಯದಲ್ಲಿ ಜಾತ್ರೆ, ಉತ್ಸವ, ರಥೋತ್ಸವ ಆಚರಣೆ ಧಾರ್ಮಿಕ ದತ್ತಿ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯದ ಹೆಚ್ಚಿನ ದೇವಾಲಯಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಜಾತ್ರಾ, ಉತ್ಸವಗಳು ನಡೆಯತ್ತಿದ್ದು, ಈ ಜಾತ್ರಾ ಉತ್ಸವಗಳನ್ನು ನಡೆಸಲು ಹಲವಾರು ಬೇಡಿಕೆಗಳು ಬರುತ್ತಿರುತ್ತವೆ. ಜಾತ್ರಾ/ ಉತ್ಸವಗಳನ್ನು ತಡೆಹಿಡಿಯವುದರಿಂದ, ಸಾರ್ವಜನಿಕರು/ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಉಂಟಾಗುವುದರಿಂದ ಸಾರ್ವಜನಿಕರು/ಭಕ್ತಾಧಿಗಳ ಹಿತದೃಷ್ಟಿಯಿಂದ ಹಾಗೂ ಕೋವಿಡ್-19 ಅನ್ನು ನಿಯಂತ್ರಿಸುವ ಬಗ್ಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಮತ್ತು ಆಯಾಯಾ ಜಿಲ್ಲಾಧಿಕಾರಿಗಳು ಹೊರಡಿಸಿರುವ ಅಥವಾ ಹೊರಡಿಸಲಿರುವ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಮುಂದೂಡಲಾಗಿರುವ ದೇವಾಲಯಗಳಲ್ಲಿನ ರಥೋತ್ಸವಗಳ ಸಂಬಂಧ ಆಯಾಯಾ ದೇವಾಲಯಗಳ ಶಾಸ್ತ್ರ ಸಂಪ್ರದಾಯದಂತೆ ಪ್ರಾಯಶ್ಚಿತ್ತಾಧಿ ಶಾಸ್ತ್ರೀಯ ಕಾರ್ಯಗಳನ್ನು ನಡೆಸಿ ಈ ಹಿಂದೆ ನಡೆಸುತ್ತಿದ್ದ ಎಲ್ಲಾ ಸೇವೆಗಳು, ಜಾತ್ರಾ ಉತ್ಸವಗಳು, ರಥೋತ್ಸವ, ಪವಿತ್ರೋತ್ಸವ, ವಿಶೇಷ ಉತ್ಸವಗಳು, ಅನ್ನ ದಾಸೋಹ, ಪ್ರಸಾದ ವಿತರಣೆ ಇತರೆ ಪೂಜಾ ಕೈಂಕರ್ಯಗಳನ್ನು ನಡೆಸಲು ಸೂಚಿಸಿದೆ.

ರಾಜ್ಯದಲ್ಲಿ ಕೋವಿಡ್-19 (ಕರೋನಾ ವೈರಸ್) ಹರಡುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಧಿಸೂಚಿತ ದೇವಾಲಯಗಳು, ಸಂಸ್ಥೆಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ದಿನನಿತ್ಯ ಶಾಸ್ತ್ರ ಸಂಪ್ರದಾಯದಂತೆ ನಡೆಯುವ ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಮತ್ತು ಪೂಜಾ ಕೈಂಕರ್ಯಗಳನ್ನು ದೇವಾಲಯದ ಒಳಗೆ ಮತ್ತು ಒಳಪ್ರಕಾರದಲ್ಲಿ ಆಗಮಿಕರು / ತಂತ್ರಿಗಳು / ಅರ್ಚಕರು ಹಾಗೂ ದೇವಾಲಯದ ಸಿಬ್ಬಂದಿ ವರ್ಗದವರು ನಡೆಸುವ ಷರತ್ತಿಗೊಳಪಟ್ಟು ಉಳಿದಂತೆ ದೇವಾಲಯಗಳಲ್ಲಿ ನಡೆಯುವ ಎಲ್ಲಾ ಸೇವೆಗಳು, ಜಾತ್ರೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವ, ಪ್ರಸಾದ, ದಾಸೋಹ, ತೀರ್ಥ ವಿತರಣೆ ಮತ್ತು ದೇವರ ದರ್ಶನ ಹಾಗೂ ಇತರೆ ಜನಸಂದಣಿ ಸೇರುವ ಕಾರ್ಯಕ್ರಮಗಳನ್ನು ಹಾಗೂ ದೇವಾಲಯಗಳಲ್ಲಿನ ವಸತಿ ಗೃಹ, ಅತಿಥಿ ಗೃಹಗಳನ್ನು ಭಕ್ತಾಧಿಗಳಿಗೆ ಸಾರ್ವಜನಿಕರಿಗೆ ಹಂಚಿಕೆ ಮಾಡುವುದನ್ನು ಉಲ್ಲೇಖ (2)ರ ವಿನಾಂಕ:20.03.2020ರ ಸುತ್ತೋಲೆಯಲ್ಲಿ ಮುಂದಿನ ಆದೇಶದವರೆಗೆ ರದ್ದುಪಡಿಸಿ ಆದೇಶಿಸಲಾಗಿತ್ತು.

ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ ಸೇವೆಗಳನ್ನು ಪುನರ್ ಪ್ರಾರಂಭಿಸುವ ಬಗ್ಗೆ ಭಕ್ತಾಧಿಗಳಿಂದ ಬೇಡಿಕೆ ಬರುತ್ತಿದ್ದ ಹಿನ್ನೆಲೆಯಲ್ಲಿ ಭಕ್ತಾಧಿಗಳ ಹಿತದೃಷ್ಟಿಯಿಂದ ದೇವಾಲಯಗಳಲ್ಲಿ ಕೆಲವು ಪರತ್ತಿಗೊಳಪಟ್ಟು ದೈನಂದಿನ ಸೇವೆಗಳನ್ನು ಕೆಲವು ಷರತ್ತುಗಳಿಗೊಳಪಟ್ಟು ದಿನಾಂಕ:01.09.2020ರಿಂದ ಪ್ರಾರಂಭಿಸಲು ಉಲ್ಲೇಖಿತ (2) ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು.

Leave a Reply

Your email address will not be published. Required fields are marked *

You May Also Like

ಮುಂಬೈನ 800 ಚದರ ಅಡಿ ಜಾಗಕ್ಕೆ ತಿಂಗಳಿಗೆ 1 ರೂಪಾಯಿ!: ಪತ್ನಿಗೆ ಲೀಸ್ ಕೊಟ್ಟ ಬ್ಯಾಂಕ್ ಚೇರ್ಮನ್

ಖಾಸಗಿ ಬ್ಯಾಂಕಿನ ಮುಖ್ಯಸ್ಥರೊಬ್ಬರು ತಮ್ಮ ಪತ್ನಿಯ ಎನ್.ಜಿ.ಒ.ಗೆ ತಮ್ಮ ಬ್ಯಾಂಕಿನ ಪಕ್ಕದ ಜಾಗವನ್ನು ಬಳಸಿಕೊಳ್ಳಲು ನೀಡಿದ್ದ ವಿಷಯ ಈಗ ಬೆಳಕಿಗೆ ಬಂದಿದೆ. ತಿಂಗಳಿಗೆ ನಾಮಕಾವಸ್ಥೆ ಒಂದೇ ಒಂದು ರೂಪಾಯಿ ಬಾಡಿಗೆಯಷ್ಟೇ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ. ಯೆಸ್ ಬ್ಯಾಂಕ್ ಸೇರಿದಂತೆ ಕೆಲವು ಬ್ಯಾಂಕ್ ಗಳು ದಿವಾಳಿ ಹೊಂದಿದ್ದರ ಹಿಂದೆ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರ ಸ್ವಾರ್ಥವಿತ್ತು ಎನ್ನುವುದನ್ನು ನೋಡಿದ್ದೇವೆ.

ನಾಗಾವಿ ಬಿಕೆ ಗ್ರಾಮದಲ್ಲಿ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ನೂತನ ರಥೋತ್ಸವ

ಉತ್ತರಪ್ರಭ ವರದಿ: ಇಸ್ಲಾಯಿಲ್ ಎಮ್ ಶೇಖ.    ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ನಾಗಾವಿ ಬಿಕೆ…

ಪ್ರತಾಪಗೌಡ ಪಾಟೀಲ ಉಪ ಚುನಾವಣೆಯಲ್ಲಿ ಗೆದ್ದರೆ ಸಚಿವ ಸ್ಥಾನ

ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ವಿರುದ್ಧ ಹೈಕೋರ್ಟಿನಲ್ಲಿ ದಾಖಲಾಗಿದ್ದ ಚುನಾವಣೆ ತಕರಾರು ಅರ್ಜಿ ವಜಾಗೊಂಡಿದೆ. ಇದೀಗ ಪ್ರತಾಪಗೌಡ ಅವರು ಉಪ ಚುನಾವಣೆಯಲ್ಲಿ ಜಯಶಾಲಿ ಆದರೆ ಸಚಿವ ಸ್ಥಾನ ಸಿಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಮೌನೇಶ ಮುರಾರಿ ಹೇಳಿದರು.