ಉತ್ತರಪ್ರಭ
ಆಲಮಟ್ಟಿ : ದೇಶ, ನಾಡು ಕಟ್ಟುವಗೊಸ್ಕರ ತಮ್ಮ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮಹನೀಯರ ಸ್ಮರಣೆಗಾಗಿ ಬರುವ ಅಗಸ್ಟ್ 5 ರಂದು ಸಂಕಲ್ಪ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಿಳಿಸಿದರು.


ಇಲ್ಲಿನ ರಾವಬಹದ್ದೂರ ಫ.ಗು.ಹಳಕಟ್ಟಿ ಪ್ರೌಢಶಾಲೆಯ ಆವರಣದಲ್ಲಿ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉಚಿತ ನೋಟ ಬುಕ್ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಅದೆಷ್ಟೋ ಜೀವಗಳು ತಮ್ಮ ಪ್ರಾಣದ ಹಂಗ ಲೆಕ್ಕೆಸದೇ ಜೀವ ತೆತ್ತಿದ್ದಾರೆ. ನಮಗೆ ನಮ್ಮ ಬದುಕಿಗಾಗಿ ಲಕ್ಷಾಂತರ ಯೋಧರು ಅಂದು ದೇಶದಗೊಸ್ಕರ ಉಸಿರು ಚೆಲ್ಲಿದ್ದಾರೆ. ಅಂಥ ವೀರಯೋಧರ ಸ್ಮರಣೆಯೊಂದಿಗೆ ಅವರ ಭಾವಚಿತ್ರದ ಅರ್ಥಪೂರ್ಣ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತಿದೆ. 75 ನೇ ವಷಾ೯ಚರಣೆಯ ಸ್ವಾತಂತ್ರ್ಯ ಸಡಗರದ ಮೆಲುಕುಗಾಗಿ 75 ಕೀ.ಮೀ ವರೆಗೆ ಕ್ರಮಿಸುವ ಸಂಕಲ್ಪ ಪಾದಯಾತ್ರೆ ಆಲಮಟ್ಟಿಯಿಂದಲೇ ಆರಂಭಿಸಲಾಗುತ್ತಿದೆ ಎಂದರು.
ಇಲ್ಲಿನ ಪಾವನ ಸ್ಥಳದಲ್ಲಿ ಕರುನಾಡಿನ ಅನರ್ಘ್ಯ ರತ್ನ ನೆಲೆಗೊಂಡಿರುವ ಪವಿತ್ರ ಶರಣ ಕನಾ೯ಟಕ ಗಾಂಧಿ ಮಂಜಪ್ಪ ಹಡೇ೯ಕರ ಸ್ಮಾರಕ ಭವನದಲ್ಲಿ ಈ ಸಂಕಲ್ಪ ಯಾತ್ರೆಗೆ ಅಗಸ್ಟ್ 5 ಕ್ಕೆ ಚಾಲನೆ ನೀಡಲಾಗುವುದು. ಇಲ್ಲಿಂದ ಪಾದಯಾತ್ರೆ ಪ್ರಾರಂಭವಾಗಿ ನಿಡಗುಂದಿ, ಮುದ್ದೇಬಿಹಾಳ, ನಾಲತವಾಡ ರಸ್ತೆ ಮೂಲಕ ಅಂತಿಮವಾಗಿ ತಾಳಿಕೋಟೆ ತಲುಪುವುದು. ಪ್ರತಿ ದಿನ 10 ಕೀ.ಮೀ.ಪಾದಯಾತ್ರೆ ಸಾಗಲಿದೆ. ಕಾಲೇಜು ಯುವಕರು ಸ್ವಯಂ ಪ್ರೇರಿತರಾಗಿ ಒಂದು ದಿನ ಭಾಗವಹಿಸಬಹುದು. ಸಂಕಲ್ಪ ಯಾತ್ರೆ ಚಾಲನೆ ಹಾಗು ಸಮಾರೋಪಕ್ಕೆ ವಿವಿಧ ಮಠಾಧೀಶರು,ಧಾಮಿ೯ಕ, ಆಧ್ಯಾತ್ಮಿಕ ಗುರು ಹಿರಿಯ ಜೀವಗಳನ್ನು ಅತ್ಯಂತ ಗೌರವಪೂರ್ವಕವಾಗಿ ಆಹ್ವಾನಿಸಲಾಗುತ್ತಿದೆ ಎಂದರು.
ದೇಶಕ್ಕಾಗಿ ಹಗಲಿರುಳು ದುಡಿದರೆ ಸಂಪತ್ತಭರಿತವಾಗಿ ಶ್ರೀಮಂತಿಕೆಯಿಂದ ಭಾರತ ಕಂಗೊಳಿಸುತ್ತದೆ. ಆ ದಿಸೆಯಲ್ಲಿ ಯುವಜನಾಂಗ ಸಂಕಲ್ಪ ಮಾಡಬೇಕು. ಹಿಂದು,ಮುಸ್ಲಿಮ್, ಸಿಕ್ಕ್,ಕ್ರೈಸ್ತ, ಎನ್ನದೇ ಭಾರತ ಮಾತೆ ಎಲ್ಲರಿಗೂ ಇಲ್ಲಿ ಬದುಕು,ನೆಮ್ಮದಿ ಕೊಟ್ಡಿದ್ದಾಳೆ. ಆ ಮಹಾ ಭಾರತ ಮಾತೆ ತಾಯಿಗಾಗಿ ಪ್ರತಿ ಕಾಯಕವೂ ಬದ್ದತೆಯಿಂದ ನಿರ್ವಹಿಸಿ ಋಣಭಾರ ತೀರಸಬೇಕು. ಭವಿಷ್ಯತ್ತಿನಲ್ಲಿ ದೇಶ ಹೆಮ್ಮರವಾಗಿ,ಬಲಿಷ್ಠವಾಗಿ ಮುನ್ನಡೆಸಬೇಕಾಗಿರುವುದು ಅಗತ್ಯ ಎಂದರು.
138 ಕೋಟಿ ಜನ ನಮ್ಮ ದೇಶದಲ್ಲಿದ್ದಾರೆ. ಕರೋನಾ ಕಾಟ ತೀವ್ರತೆ ಸ್ವರೂಪದಲ್ಲಿದ್ದಾಗ್ಯೂ ಧೃತಿಗೆಡದೆ ಪ್ರಧಾನಿ ಮೋದಿಜಿಯವರು ಮುನ್ನಡೆಸಿದ್ದು ಮರೆಯಲಾಗದು.ಈ ಬಲಾಢ್ಯ ದೇಶದಲ್ಲಿ ಒಂದು ನೂರು ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಿದ್ದು ಐತಿಹಾಸಿಕ ಗರಿಮೆ ಎಂದು ಹೆಮ್ಮೆಯಿಂದ ಹೇಳಬಹುದೆಂದರು. ಪುಟ್ಟ ಪಕ್ಕದ ಶ್ರೀಲಂಕಾ ಪರಿಸ್ಥಿತಿ, ವ್ಯವಸ್ಥೆ ಇಂದು ಹೇಗಾಗಿದೆ ? ಏನಾಗುತ್ತಿದೆ ನೋಡಿ. ಸಂಪೂರ್ಣ ಹಿಡಿತ ತಪ್ಪಿ ಹದಗೆಡುತ್ತಿರುವುದು ಅಲ್ಲಿನ ಆಡಳಿತ ವೈಖರಿ ಎಂಥದ್ದು ಎಂಬುದು ತೋರಿಸಿಕೊಡುತ್ತದೆ ಎಂದರು.
ಸನ್ಮಾನ : ಉಚಿತ ನೋಟ ಬುಕ್ ವಿತರಣಾ ಸಮಾರಂಭದಲ್ಲಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹಾಗು ಪುತ್ರ ಭರತಗೌಡ ಪಾಟೀಲ ಅವರನ್ನು ಶಿಕ್ಷಣ ಸಂಸ್ಥೆ ಪರವಾಗಿ ಮುಖ್ಯಸ್ಥರು ಶಾಲು ಹೊದಿಸಿ ಪೇಟಾ ಹಾಕಿ ಬಸವೇಶ್ವರ ಮೂತಿ೯ ನೀಡಿ ಹೃದಯಸ್ಪರ್ಶಿಯಾಗಿ ಸತ್ಕರಿಸಿದರು.

Leave a Reply

Your email address will not be published. Required fields are marked *

You May Also Like

ಗ್ರಾ.ಪಂ ಸದಸ್ಯರ ಸರ್ವಾಧಿಕಾರ ಖಂಡಿಸಿ ರೈತರ ಆಕ್ರೋಶ

ಉತ್ತರಪ್ರಭ ಮುಳಗುಂದ: ಗ್ರಾಮ ಪಂಚಾಯ್ತಿ ಯಿಂದ ಕೇಂದ್ರ ಸರ್ಕಾರದ ವರೆಗೂ ಕಾರ್ಯವೈಕರಿಯನ್ನ ಪ್ರಶ್ನಿಸುವ ಮತ್ತು ಸೌಲಭ್ಯಗಳನ್ನ…

ಕಾಫಿಗೂ ಕೊರೊನಾ ಕಾಟ, ಬೆಳೆಗಾರರ ಸಂಕಷ್ಟ..!

ಲಾಕ್ ಡೌನ್ ಹಿನ್ನೆಲೆ ಕಾರ್ಮಿಕ ಕುಟುಂಬಗಳ ಪರಿಸ್ಥಿತಿ ಹೇಳತೀರದಾಗಿದೆ. ಕಾಫಿ ಉದ್ಯಮವನ್ನೆ ನಂಬಿಕೊಂಡಿದ್ದ ಸಾವಿರಾರು ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿವೆ. ಇನ್ನು ಕಾಫಿ ಉತ್ಪಾದನಾ ಉದ್ಯಮದ ಮೇಲೂ ಲಾಕ್ ಡೌನ್ ಪರಿಣಾಮ ಬೀರಿದೆ. ಇದರಿಂದ ಕಾಫಿ ಕೈಗಾರಿಕೆಗಳು ಸಂಕಷ್ಟ ೆದುರಿಸುವಂತಾಗಿದೆ.

ಎಸ್‌ಡಿಎಂಸಿ ಸೇತುವೆಯಾಗಿ ಕಾರ್ಯ ನಿರ್ವಹಿಸಬೇಕು : ಪಿ.ಸಿ.ಜೋಗರೆಡ್ಡಿ

ಶಾಲಾ ಮೇಲುಸ್ತುವಾರಿ ಸಮಿತಿ ಆಡಳಿತದಲ್ಲಿ ಶಾಲೆಯ ಅಭಿವೃದ್ಧಿ ಅಡಗಿದೆ ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪೋಷಕರ ಮದ್ಯೆ ಎಸ್‌ಡಿಎಂಸಿ ಸೇತುವೆಯಾಗಿಕಾರ್ಯ ನಿರ್ವಹಿಸಬೇಕಿದೆ ಎಂದು ಸಿಆರ್‌ಪಿ ಪಿ.ಸಿ.ಜೋಗರೆಡ್ಡಿ ಹೇಳಿದರು.