ಕುಂದಾಪುರ: ಶ್ರೀದೇವೀ ಮಹಾತ್ಮೆ ಯಕ್ಷಗಾನದಲ್ಲಿ ಮಹಿಷಾಸುರ ಪಾತ್ರಧಾರಿ ರಂಗಸ್ಥಳದ ಕಂಬಕ್ಕೆ ತಲೆ ಬಡಿದುಕೊಂಡಿದ್ದು, ಕಂಬ ಅದುರಿದ ಕಾರಣ ಸ್ವಲ್ಪ ಕಾಲ ಆತಂಕದ ಸ್ಥಿತಿ ಎದುರಾಯಿತು.

ಮಾರಣಕಟ್ಟೆ ಮೇಳದ ಯುವ ಕಲಾವಿದ ನಂದೀಶ್ ಮೊಗವೀರ ಜನ್ನಾಡಿ ಅತಿಥಿ ಕಲಾವಿದರಾಗಿ ಭಾಗವಹಿಸಿದ್ದು, ಮಹಿಷಾಸುರ ವೇಷ ಅಬ್ಬರದ ಪ್ರವೇಶಕ್ಕೆ ಮಾತ್ರವಲ್ಲದೆ, ರಂಗಸ್ಥಳದ ಕಂಬಕ್ಕೆ ತಲೆ ಹೊಡೆದುಕೊಳ್ಳುವ ದೃಶ್ಯಕ್ಕಾಗಿಯೂ ಪ್ರಸಿದ್ಧ.

ಈ ಮಹಿಷಾಸುರನ ಅಬ್ಬರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಚ್ಚುಗೆಯ ಜತೆಗೇ ಕಲಾವಿದನ ಕುರಿತು ಕಾಳಜಿಯ ಮಾತುಗಳೂ ಕೇಳಿ ಬಂದಿವೆ. ಜೀವಕ್ಕೆ ಅಪಾಯ ಆಗುವಂತಹ ಪ್ರದರ್ಶನ ನೀಡಬಾರದು. ದೈಹಿಕ ಆಘಾತವಾಗದಂತೆ ಅಭಿನಯ ನೀಡಬೇಕು ಎಂದಿದ್ದಾರೆ.

ನಿರಂತರವಾಗಿ ಕಂಬಕ್ಕೆ ತಲೆ ಹೊಡೆದುಕೊಳ್ಳುವುದರಿಂದ ಮೆದುಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದು ಕೆಎಂಸಿಯ ಹೃದ್ರೋಗ ವಿಭಾಗ ಮುಖ್ಯಸ್ಥ ಡಾ.ಪದ್ಮನಾಭ ಕಾಮತ್ ಪ್ರತಿಕ್ರಿಯಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಗದಗ ಜಿಲ್ಲೆ ರೈತರಿಗೆ ಉಪಯುಕ್ತ ಮಾಹಿತಿ: ಮೊಬೈಲ್ ನಲ್ಲೆ ಸಿಗಲಿದೆ ಮಳೆ, ಬೆಳೆ ವಿವರ

ಗದಗ: ಕೃಷಿ ಹಾಗೂ ಹವಾಮಾನ ಸಂಬಂಧಿತ ಆ್ಯಪ್‌ಗಳುಇತ್ತೀಚಿಗೆ ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿದೆ. ಬರ,…

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗಾಗಿ ಜಾತಕಪಕ್ಷಿಯಂತೆ ನಿರೀಕ್ಷೆ- ಬಸವರಾಜೇಶ್ವರಿ ಶೀಲವಂತ ನೇಮಕಾತಿ ಪ್ರಕ್ರಿಯೆ ಕೂಡಲೇ ಆರಂಭಿಸಲು ಸಕಾ೯ರಕ್ಕೆ ಆಗ್ರಹ

ಉತ್ತರಪ್ರಭ ಸುದ್ದಿನಿಡಗುಂದಿ: ರಾಜ್ಯದ ಪ್ರತಿಯೊಂದು ಶಾಲಾ, ಪ,ಪೂ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಪಠ್ಯದ ಸವಿರುಚಿ ಮಕ್ಕಳು…

ನಗರದಲ್ಲಿ ಮತ್ತೆ ಹಲವು ಪ್ರದೇಶಗಳು ಸೀಲ್ ಡೌನ್ ಪಟ್ಟಿಗೆ!

ಬೆಂಗಳೂರು : ನಗರದಲ್ಲಿ ಮಹಾಮಾರಿಯ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೀಲ್ ಡೌನ್ ಹೆಚ್ಚಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ನಗರದ ಬಹುತೇಕ ಏರಿಯಾಗಳು ಸೀಲ್ಡೌಗನ್ ಆಗಲಿವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ