ಬೆಂಗಳೂರು : ನಗರದಲ್ಲಿ ಮಹಾಮಾರಿಯ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೀಲ್ ಡೌನ್ ಹೆಚ್ಚಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ನಗರದ ಬಹುತೇಕ ಏರಿಯಾಗಳು ಸೀಲ್ಡೌಗನ್ ಆಗಲಿವೆ ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ತಿಳಿಸಿದ್ದಾರೆ.
ಇಂದು ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಒಂದು ವೇಳೆ ಹೀಗೆ ನಗರದಲ್ಲಿ ಸಡಲಿಕೆ ಮುಂದುವರಿಸಿದರೆ ಕೊರೊನಾ ನಿಯಂತ್ರಣ ಅಸಾಧ್ಯ ಎಂದಿದ್ದಾರೆ. ನಗರದ ಸುಮಾರು 7 ಏರಿಯಾಗಳು ಕಂಪ್ಲೀಟ್ ಸೀಲ್ಡೌುನ್ ಮಾಡುವ ಸಾಧ್ಯತೆ ಇದೆ. ಚಾಮರಾಜಪೇಟೆ, ಚಿಕ್ಕಪೇಟೆ, ಕಲಾಸಿಪಾಳ್ಯ ಸೇರಿದಂತೆ ಹಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ಕೊರೊನಾ ಹೆಚ್ಚಾಗಲು ಸಡಲಿಕೆಯೇ ಕಾರಣ ಎನ್ನಲಾಗಿದೆ. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮಾಡದಿರುವುದು ಕೂಡ ಕೊರೊನಾ ಸೋಂಕು ಹೆಚ್ಚಾಗಲು ಕಾರಣವಾಗಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಜೊತೆ ಸಭೆ ಮುಗಿಸಿದ ಬಳಿಕ ಬಹುತೇಕ ಇಂದೇ ಆಯ್ದ ಏರಿಯಾಗಳು ಸೀಲ್ಡೌಲನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

You May Also Like

ಮುಂಡರಗಿ: ರಸ್ತೆಯ ತುಂಬ ನೀರೋ.. ನೀರು..!

ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮುಂಟರಗಿ ಪಟ್ಟಣದಲ್ಲಿ ರಸ್ತೆಯ ತುಂಬೆಲ್ಲ ನೀರು ತುಂಬಿಕೊಂಡ ದೃಶ್ಯಗಳು ಸಾಮಾನ್ಯವಾಗಿದೆ.

ಪ್ರಾಣಿಗಳ ಹಸಿವಿಗೆ ಮಿಡಿದ ಪೊಲೀಸರು

ಲಾಕ್ ಡೌನ್ ನಿಂದಾಗಿ ಮೂಕ ಪ್ರಾಣಿಗಳ ಮೂಕ ವೇದನೆ ಯಾರಿಗೆ ಅರ್ಥವಾಗಬೇಕು ಹೇಳಿ? ಆದರೆ ಪೊಲೀಸರು ಪ್ರಾಣಿಗಳ ಹಸಿವಿಗೆ ಮಿಡಿದಿದ್ದಾರೆ. ಈ ಮೂಲಕ ಖಾಕಿಯೊಳಗಿನ ಅಂತಃ ಕರಣದ ಮನಸ್ಸು ಜನರ ಮೆಚ್ಚುಗೆಗೆ ಕಾರಣವಾಗಿದೆ.

ಇಂಧಿರಾಗಾಂಧಿ ಭಾವಚಿತ್ರಕ್ಕೆ ಮಸಿ: ಆರೋಪಿ ಬಂಧನ

ದಾವಣಗೆರೆ: ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ…

ಅಂದಪ್ಪ ಸಂಕನೂರ ಹುಟ್ಟು ಹಬ್ಬ ಪ್ರಯುಕ್ತ ರಕ್ತದಾನ: ರಕ್ತದಾನದಿಂದ ಜೀವ ಉಳಿಸಿದ ಪುಣ್ಯಪ್ರಾಪ್ತಿ

ದಾನಗಳಲ್ಲಿಯೇ ಶ್ರೇಷ್ಠತೆಯನ್ನು ಪಡೆದ ರಕ್ತದಾನದಿಂದ ಮತ್ತೊಂದು ಜೀವ ಉಳಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ರಕ್ತದಾನ ಮಾಡುವ ಮೂಲಕ ಅಂದಪ್ಪ ಸಂಕನೂರ ಅವರ ಜನ್ಮದಿನ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ