ಕೋವಿಡ್ ಸೋಮಕಿನಿಂದ ಆನ್ಲೈನ್ ಕ್ಲಾಸ್ಗಳು ಹಾಗೂ ವರ್ಕ್ ಫ್ರಂ ಹೋಂಗೆ ಜನರು ಒಗ್ಗಿ ಹೋಗಿದ್ದಾರೆ. ಆದರೆ, ಇಲ್ಲೊಬ್ಬಳು ಬಾಲಕಿ ಶಿಕ್ಷಕರನ್ನು ಮತ್ತು ಪೋಷಕರನ್ನು ಮೂರ್ಖನ್ನಾಗಿ ಮಾಡಿದ್ದಾಳೆ.

ಆನ್ಲೈನ್ ಕ್ಲಾಸಿನಿಂದ ತಪ್ಪಿಸಿಕೊಳ್ಳಲು ಈಕೆ ಮಾಡಿದ ಪ್ಲಾನ್ ಬಗ್ಗೆ ಸ್ವತಃ ಈಕೆಯ ಅಂಕಲ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

ಈ ಬಾಲಕಿಗೆ ಜೂಮ್ ಸಮಸ್ಯೆಯಿಂದ ಹೀಗೆ ತರಗತಿಗೆ ಭಾಗಿಯಾಗಲು ಆಗ್ತಿಲ್ಲ ಎಂದು ಶಿಕ್ಷಕರು ಮತ್ತೊಮ್ಮೆ ಪಾಠ ಮಾಡೋಕೆ ಮುಂದಾಗಿದ್ದಾರೆ. ಆದರೆ ಆಗಲೂ ಕೂಡ ಬಾಲಕಿಗೆ ತರಗತಿ ಅಟೆಂಡ್ ಮಾಡಲು ಸಾಧ್ಯವಾಗಲಿಲ್ಲ.

ಒಂದು ದಿನ ಈ ಬಾಲಕಿ ತರಗತಿಗೆ ಹಾಜರಾಗಬೇಕಾದ ಸಂದರ್ಭದಲ್ಲೇ ಲಾಗೌಟ್ ಆಗಿದ್ದನ್ನ ಆಕೆಯ ತಾಯಿ ಗಮನಿಸಿದ್ದಾರೆ. ಆಕೆ ಲಾಗೌಟ್ ಆದ ಬಳಿಕ 20 ಬಾರಿ ತಪ್ಪಾದ ಪಾಸ್ವರ್ಡ್ನ್ನು ಟೈಪ್ ಮಾಡಿದ್ದಾಳೆ.

ಜೂಮ್ ಅಪ್ಲಿಕೇಶನ್ನಲ್ಲಿ ಹೆಚ್ಚು ಹೆಚ್ಚು ಬಾರಿ ತಪ್ಪಾದ ಪಾಸ್ವರ್ಡ್ ಹಾಕುತ್ತಿದ್ದಂತೆಯೇ ಜೂಮ್ ಕಾರ್ಯಕ್ಷಮತೆ ವಿಳಂಬವಾಗುತ್ತಾ ಹೋಗುತ್ತೆ. ಈ ಪ್ಲಾನ್ ಬಗ್ಗೆ ತಿಳಿದುಕೊಂಡಿದ್ದ ಈ ಪೋರಿ ಬರೋಬ್ಬರಿ 3 ವಾರಗಳ ಕಾಲ ಜೂಮ್ ಕ್ಲಾಸ್ಗೆ ಚಕ್ಕರ್ ಹೊಡೆದಿದ್ದಾಳೆ.

Leave a Reply

Your email address will not be published. Required fields are marked *

You May Also Like

ಅಮೇರಿಕಾದಲ್ಲಾದ ಹಾನಿಯನ್ನು ಚೀನಾ ದೇಶವೇ ತುಂಬಿಕೊಲಿ:ಟ್ರಂಪ್ ಆಗ್ರಹ..!

ಚೀನಾದ ನಿಷ್ಕಾಳಜಿಯೇ ಕೊರೋನಾ ಸೋಂಕು ವ್ಯಾಪಕವಾಗಲು ಕಾರಣ ಹೀಗಾಗಿ ನಮಗೆ ಆಗಿರುವ ಹಾನಿಯನ್ನು ತುಂಬಿಕೊಡುವಂತೆ ಚೀನಾ ದೇಶವನ್ನು ಆಗ್ರಹಿಸುತ್ತೇನೆ ಎಂದು ಅಮೇರಿಕಾ ಅಧ್ಯಕ್ಷ ಟ್ರಂಪ್ ಅಸಮಾಧಾನ ಹೊರಹಾಕಿದರು.

ರಾಜ್ಯಸಭೆ ಚುನಾವಣೆ ಫಲಿತಾಂಶ: ಯಾವ ರಾಜ್ಯದಲ್ಲಿ ಯಾರು ಆಯ್ಕೆ..?

ಆಂಧ್ರವೈ.ಎಸ್.ಆರ್.ಸಿ. – 4 (ಡಿಸಿಎಂ ಪಿಳ್ಳಿ ಸುಭಾಷ್ ಚಂದ್ರ ಬೋಸ್, ಸಚಿವ ಎಂ.ವಿ.ರಮಣ, ಪರಿಮಳಾ ನತವಾನಿ,…

ರಾಜ್ಯದಲ್ಲಿಂದು 204 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 204 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7734ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 348. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 4804 ಕೇಸ್ ಗಳು. ಈ ಮೂಲಕ ರಾಜ್ಯದಲ್ಲಿ ಈವರೆಗೆ 2824 ಸಕ್ರೀಯ ಪ್ರಕರಣಗಳಿವೆ.

ಸಿಎಂ ಯಡಿಯೂರಪ್ಪ ರಾಜಾಹುಲಿ ಅಂದ್ರು ಆರ್.ಅಶೋಕ

ಚಾಮರಾಜನಗರ:ಹುಲಿಗೆ ಹಿಂದಿನಿಂದ ಆಡಳಿತ ಮಾಡಿ ಗೊತ್ತಿಲ್ಲ. ನೇರ ಆಡಳಿತವೇ ಸಿಎಂ ಯಡಿಯೂರಪ್ಪ ಅವರ ಸ್ವಭಾವ ಹೀಗಾಗಿ ಯಡಿಯೂರಪ್ಪ ರಾಜಾಹುಲಿ ಇದ್ದಂತೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.