ಉತ್ತರಪ್ರಭ ಸುದ್ದಿ
ನಿಡಗುಂದಿ:
ರಾಜ್ಯದ ಪ್ರತಿಯೊಂದು ಶಾಲಾ, ಪ,ಪೂ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಪಠ್ಯದ ಸವಿರುಚಿ ಮಕ್ಕಳು ಕಾಣಬೇಕು.ಆ ನಿಟ್ಟಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಕೂಡಲೇ ಸಕಾ೯ರ ಚಾಲನೆ ನೀಡಬೇಕು ಎಂದು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಾಂಸ್ಕೃತಿಕ ವಿಭಾಗದ ರಾಜ್ಯ ಕಾರ್ಯದರ್ಶಿ ಶ್ರೀಮತಿ ಬಸವರಾಜೇಶ್ವರಿ ಶೀಲವಂತ ಆಗ್ರಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ತಕ್ಷಣ ನೀಡಬೇಕು ಹಾಗು ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಆರಂಭಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದಿಂದ ಸಕಾ೯ರಕ್ಕೆ ಇಲ್ಲಿನ ತಹಶೀಲ್ದಾರರ ಮೂಲಕ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.

ದೈಹಿಕ ಶಿಕ್ಷಣ ಶಿಕ್ಷಕ ಆಕಾಂಕ್ಷೆ ಹೊಂದಿರುವ ಅಪಾರ ಸಂಖ್ಯೆಯ ನಿರುದ್ಯೋಗಿ ಸಿಪಿಇಡಿ, ಬಿಪಿಎಡ್,ಎಂಪಿಎಡ್ ಪದವೀಧರ ಅರ್ಹತೆವುಳ್ಳ ಅಭ್ಯಥಿ೯ಗಳು ನೇಮಕಾತಿಗಾಗಿ ಹಲವಾರು ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯ್ದು ವಯೋಮಿತಿ ಮೀರುತ್ತಿದ್ದಾರೆ. ಇನ್ನೊಂದೆಡೆ ಯೋಗ, ದೈಹಿಕ ಶಿಕ್ಷಣ ಪಠ್ಯದ ಚಟುವಟಿಕೆ ಅಭ್ಯಾಸದಿಂದ ಅನೇಕ ಶಾಲೆಗಳಲ್ಲಿನ ಮಕ್ಕಳು ವಂಚಿತರಾಗುತ್ತಲ್ಲಿದ್ದಾರೆ ಎಂದರು.

ಕಳೆದ ಅನೇಕ ವರ್ಷಗಳಿಂದ ದೈ.ಶಿ.ಶಿ ನೇಮಕಾತಿ ನಿಂತು ಹೋಗಿದೆ. ಒಂದು ಕಡೆ ಕೇಂದ್ರ ಸಕಾ೯ರ ಫಿಟ್ ಇಂಡಿಯಾ, ಖೇಲೋ ಇಂಡಿಯಾ ಮಹತ್ವಪೂರ್ಣ ಕ್ರೀಡಾ ಋತುವಿನ ಯೋಜನೆಗಳನ್ನು ಅನುಷ್ಠಾನಗೊಳಿಸಿ ಯೋಗ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಇಂಥ ಸನ್ನಿವೇಶದಲ್ಲಿ ಬಹುಪಾಲು ಪ್ರಾಥಮಿಕ, ಪ್ರೌಢಶಾಲೆ, ಪ,ಪೂ ಕಾಲೇಜುಗಳಲ್ಲಿ ಬೋಧನೆ ಮಾಡಲು ಆರ್ಹ ದೈಹಿಕ ಶಿಕ್ಷಣ ಶಿಕ್ಷಕರುಗಳಿಲ್ಲ. ಈ ಹುದ್ದೆಗಳು ಸೃಜನೆವಾಗದಿರುವುದು ಖೇದಕರವೆಂದರು.

ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ಮಾತನಾಡಿ, 2007 ರ ನಂತರ ಹಿರಿಯ ಪ್ರಾಥಮಿಕ, 2016 ರ ನಂತರ ಪ್ರೌಢಶಾಲೆಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಾಗದ ಕಾರಣ ಬಹಳಷ್ಟು ಶಾಲೆಗಳು ಕ್ರೀಡಾ ಚಟುವಟಿಕೆ ನಿಭಾಯಿಸುವ ದೈ.ಶಿ.ಶಿಕ್ಷಕರಿಲ್ಲದೇ ಸೊರಗುತ್ತಿವೆ. ಫಿಟ್ ಇಂಡಿಯಾ,ಖೇಲೋ ಇಂಡಿಯಾ ಸೇರಿದಂತೆ ಇತರೆ ಕ್ರೀಡಾ ಚಟುವಟಿಕೆಗಳು ಕಾಣುವುದು ಅಪರೂಪವಾಗಿವೆ. ಇವೆಲ್ಲ ಅಂಶಗಳ ಸಾಧಕ, ಬಾಧಕ ಮನಗಂಡು, ಗಂಭೀರತೆಯುಳ್ಳ ಈ ತೀಕ್ಷ್ಣತೆ ಪರಿಗಣಿಸಿ ಸಕಾ೯ರ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಶಿಕ್ಷಕರ ಬೇಡಿಕೆಗಳನ್ನು ಪೂರೈಸಲು ಮನಸ್ಸು ಮಾಡಬೇಕು ಎಂದು ಒತ್ತಾಯಿಸಿದರು.

15 ವರ್ಷಗಳ ಹಿಂದೆ ಸಕಾ೯ರದ ಆದೇಶದಂತೆ ರಾಜ್ಯ ಪತ್ರದಲ್ಲಿ ಆದೇಶವಾಗಿದ್ದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ವಿಳಂಬ ನೀತಿ ಧೋರಣೆ ಅನುಸರಿಸಿ ಅನ್ಯಾಯ ಎಸೆಯಲಾಗಿದೆ. ಇದರಿಂದ ಅದೆಷ್ಟೋ ಜನ ಸೌಲಭ್ಯ ಕಾಣದೇ ತಾಪತ್ರಯ ಅನುಭವಿಸಿ ಹಿಡಿಶಾಪ ಹಾಕುತ್ತಲ್ಲಿದ್ದಾರೆ. ಸಕಾ೯ರ ಹಾಗು ಇಲಾಖೆ ಶೀಘ್ರವಾಗಿ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶ ಹೊರಡಿಸಬೇಕು. ಈ ಶಿಕ್ಷಕರ ನೇಮಕಾತಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಆಗ್ರಹಿಸಿರುವ ಮನವಿಯಲ್ಲಿ ಹಲವು ವರ್ಷಗಳಿಂದ ಸಂಘದ ಬೇಡಿಕೆಗೆ ಸಕಾ೯ರ, ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಕಾ೯ರಗಳ ಮೇಲೆ ಇರಿಸಿರುವ ನಿರೀಕ್ಷಿತ ಭರವಸೆಗಳೆಲ್ಲ ಹುಸಿಯಾಗುತ್ತಾ ಹೊರಟಿವೆ ಎಂದು ಬೇಸರಿಸಲಾಗಿದೆ.

ದೈಹಿಕ ಶಿಕ್ಷಣದ ಅಭಿವೃದ್ಧಿಗಾಗಿ ಅಂದಿನ ಸಕಾ೯ರ 2006 ರಲ್ಲಿ ಪ್ರೋ.ಎಲ್.ಆರ್.ವೈದ್ಯನಾಥನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ವರದಿ ಪರಿಶೀಲಿಸಲು ಡಾ.ಆನಂದ್ ನಾಡಗೀರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆವಾಗಿತ್ತು. ಈ ಸಮಿತಿ ಕೂಲಂಕಷವಾಗಿ ಪರಿಶೀಲಿಸಿ 14 ಅಂಶಗಳನ್ನು ಶಿಫಾರಸ್ಸು ಮಾಡಿದೆ. ಆದರೆ ಕೊನೆಯ ಅಂಶ ಇನ್ನೂವರೆಗೂ ಪರಿಗಣಿಸಿಲ್ಲ ಎಂದು ಮನವಿಯಲ್ಲಿ ದೂರಲಾಗಿದ್ದು ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಮಕ್ಕಳ ಸಂಖ್ಯೆಯ ಮಾನದಂಡ ನಿಗದಿಪಡಿಸಿರುವ ಕಾರಣ ಬಹುತೇಕ ಪ್ರಾಥಮಿಕ ಶಾಲೆಗಳಲ್ಲಿ ಈ ಶಿಕ್ಷಕರ ಹುದ್ದೆ ಸೃಜನೆಯಾಗಿಲ್ಲ. ಈ ನಿಯಮ ಸಡಿಲಿಸಿ ಹುದ್ದೆ ಸೃಜನೆ ಮಾಡಬೇಕು ಎಂದು ವಿವಿಧ ಬೇಡಿಕೆಯುಳ್ಳ ಮನವಿಯಲ್ಲಿ ಆಗ್ರಹಿಸಿದ್ದಾರೆ.

ತಹಶೀಲ್ದಾರ ಅನಿಲಕುಮಾರ ಢವಳಗಿ ಮನವಿ ಸ್ವೀಕರಿಸಿ ಸಕಾ೯ರಕ್ಕೆ ಕಳುಹಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ದೈ.ಶಿ.ಶಿ.ಸಂಘದ ವಿಭಾಗೀಯ ಕಾರ್ಯದರ್ಶಿ ಶಂಕರ ಚವ್ಹಾಣ, ಕ್ರೀಡಾ ಕಾರ್ಯದರ್ಶಿ ಎಂ.ಆರ್.ಮಕಾನದಾರ, ಯೋಗ ಪಟು ಗಂಗಾಧರ ಹಿರೇಮಠ ಇತರರಿದ್ದರು.

Leave a Reply

Your email address will not be published. Required fields are marked *

You May Also Like

ಇಟಗಿ ಭೀಮಾಂಬಿಕಾ ಜಾತ್ರೆ ನಿಮಿತ್ಯ ಸಭೆ : ನೂರಕ್ಕಿಂತ ಹೆಚ್ಚು ಜನ ಸೇರಕೂಡದು-ತಹಶೀಲ್ದಾರ್ ಸೂಚನೆ

ತಾಲೂಕಿನ ಇಟಗಿಯ ಧರ್ಮ ದೇವತೆ ಭೀಮಾಂಬಿಕಾ ಜಾತ್ರೆಯ ನಿಮಿತ್ಯ ತಹಸೀಲ್ದಾರ ಕಚೇರಿಯಲ್ಲಿಂದು ತಹಸೀಲ್ದಾರ್ ಜೆ.ಬಿ.ಜಕ್ಕನಗೌಡರ್ ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆ ಜರುಗಿತು.

ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆ

ಗದಗ: ನಗರದ ತೋಂಟದಾರ್ಯ ಇಂಜಿನೀಯರಿಂಗ್ ಕಾಲೇಜಿನ 07 ವಿದ್ಯಾರ್ಥಿಗಳು ಟಿಸಿಎಸ್ ಕಂಪನಿಗೆ ಆಯ್ಕೆಯಾಗಿದ್ದು. ಪ್ರತಿಷ್ಠಿತ ಬಹುರಾಷ್ಟಿಯ…

ಕೋವಿಡ್ ನಿಂದ ಅನಾಥರಾದ ಮಕ್ಕಳಿಗೆ ಮಾಸಿಕ 3500 ಸಹಾಯಧನ

ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಮಾಸಿಕ ಮೂರುವರೆ ಸಾವಿರ ಸಹಾಯ ಧನ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಹಾವೇರಿಯಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್

ಸವಣೂರಿಗೆ ಬಂದಿದ್ದ ಮೂವರು ಮೂವರಲ್ಲಿ ಇಬ್ಬರಿಗೆ ಕೊರೋನಾ ಸೊಂಕು ಧೃಡವಾದಂತಾಗಿದೆ. ಇನ್ನೊಂದು ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ