ಶಿರಹಟ್ಟಿ: ತಾಲೂಕಿನ ಸೇವಾ ನಗರ (ಕೆರಳ್ಳಿತಾಂಡೆ), ತಾರಿಕೊಪ್ಪ, ಬನ್ನಿಕೊಪ್ಪ ಗ್ರಾಮಗಳಲ್ಲಿ ಶಾಸಕ ರಾಮಣ್ಣ ಲಮಾಣಿ ಎಸ್ಸಿ, ಎಸ್ಟಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಇದೇ ವೇಳೆ ಮಾತನಾಡಿದ ಅವರು, ಮತಕ್ಷೇತ್ರದಲ್ಲಿನ ಪ್ರತಿಯೊಂದು ಗ್ರಾಮಕ್ಕೆ ಸಿಸಿ ರಸ್ತೆ, ಶುದ್ಧ ನೀರು, ಸಮರ್ಕಕ ವಿದ್ಯುತ್ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಅಲ್ಲದೆ ಗ್ರಾಮದಲ್ಲಿ ಪ್ರತಿಯೊಂದು ವಾರ್ಡಿಗೆ ಸಂಬAಧಿಸಿದAತೆ ಸುಗಮ ಸಂಚಾರಕ್ಕೆ ಸಿಸಿ ರಸ್ತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಚರಂಡಿ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಹೇಳಿದರು.

ಇಷ್ಟು ದಿನ ಕೊರೊನಾ ಕಾರಣದಿಂದ ಅಭಿವೃದ್ಧಿ ಕಾಮಗರಿಗಳು ಆಮೆ ಗತಿಯಲ್ಲಿ ಸಾಗಿದ್ದವು, ಸದ್ಯ ಅಂತಹ ಯಾವುದೇ ಅಡೆತಡಗಳಿಲ್ಲದ ಕಾರಣ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಸರಕಾರ ಎಸ್ಸಿ, ಎಸ್ಟಿ ಜನಾಂಗದ ಏಳಿಗೆಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳನ್ನು ಗುಣಮಟ್ಟತೆಯಿಂದ ಮಾಡಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ತಾರಿಕೊಪ್ಪ ಗ್ರಾಪಂ ಅಧ್ಯಕ್ಷ ಭೀಮಪ್ಪ ಲಮಾಣಿ, ಶಾಸಕರ ಆಪ್ತ ಸಹಾಯಕ ಲಕ್ಣ್ಮಣ ಲಮಾಣಿ, ಪುರಪ್ಪ ಲಮಾಣಿ, ವಿಜಯ ಲಮಾಣಿ, ಕವಿತಾ ಲಮಾಣಿ, ಶಾರದಾ ಲಮಾಣಿ, ಚಂದ್ರು ಕಾರಬಾರಿ, ಅಣ್ಣಪ್ಪ ರಣತೂರ, ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ ಹೊಂಬಾಳಿಮಠ, ಪರಪ್ಪ ಹೊನಗಣ್ಣವರ, ವಿನಾಯಕ ಇಟಿ, ಗುಡಿದಿರಪ್ಪ ಹಂಸಿ, ಮಂಜಪ್ಪ ಕಮತರ, ಮೈಲಾರಪ್ಪ ಹೊಸಮನಿ, ಪ್ರಸಾದ ಕಲಾಲ, ರಮೇಶ ಕರಾಟೆ, ಶಿವಾನಂದ ಗೌಡನಾಯ್ಕರ ಸೇರಿದಂತೆ ಮುಂತಾದವರಿದ್ದರು.

Leave a Reply

Your email address will not be published. Required fields are marked *

You May Also Like

ಬ್ಯಾಂಕ್ ಗೆ ನುಗ್ಗಿ ಮ್ಯಾನೇಜರ್ ಮೇಲೆ ಹಲ್ಲೆ : ಆರೋಪಿ ಬಂಧನ

ಹಣ ಡ್ರಾ ಮಾಡಿಕೊಡುವಂತೆ ಬ್ಯಾಂಕ್ ಮ್ಯಾನೇಜರ್ ಒಬ್ಬರ ಮನೆಗೆ ನುಗ್ಗಿದ ಇಬ್ಬರು ಮ್ಯಾನೇಜರ್ ಮೇಲೆ ದರ್ಪ ತೋರಿದ ಘಟನೆ ಬಾಲೆಹೊಸೂರು ಗ್ರಾಮದಲ್ಲಿ ನಡೆದಿತ್ತು.

ಈರುಳ್ಳಿ ಬೆಳೆದ ರೈತನ ಬದುಕು ಬೀದಿಗೆ…ಈರುಳ್ಳಿ ಕಂಡರೆ ಓಡುತ್ತಿರುವ ಗ್ರಾಹಕ!

ಬೆಂಗಳೂರು : ಈರುಳ್ಳಿ ಬೆಲೆ ಗಗನಕ್ಕೆ ಹೋಗಿದೆ. ಹೀಗಾಗಿ ಈರುಳ್ಳಿಯನ್ನು ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ.

1 ರಿಂದ 5ನೇ ತರಗತಿ ಶಾಲಾ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ

ಕೊರೋನಾ ಸೋಂಕಿನ ಭೀತಿ, ಕೊರೋನಾ ಎರಡನೇ ಅಲೆಯ ನಡುವೆಯೂ ರಾಜ್ಯದಲ್ಲಿ ಈಗಾಗಲೇ ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದ ತರಗತಿ ಕೂಡ 9, 10, ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಗೊಂಡಿವೆ.

ಜಾನಪದ ಸಂಭ್ರಮ ಹಾಗೂ ಕಲಾವಿದರಿಗೆ ಪುರಸ್ಕಾರ ಸಮಾರಂಭ

ಉತ್ತರಪ್ರಭ ಸುದ್ದಿ ಗದಗ: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಗದಗ ವತಿಯಿಂದ ನವಂಬರ್…