ಉತ್ತರಪ್ರಭ ಸುದ್ದಿ

ಗದಗ: ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಗದಗ ವತಿಯಿಂದ ನವಂಬರ್ 28ರಂದು ರವಿವಾರ ಸಾಯಂಕಾಲ 5:30ಘಂಟೆಗೆ ಬಣ್ಣದ ಮನೆ ಆರ್ಟ್ ಅಡ್ಡಾದ ಸಾಂಸ್ಕೃತಿಕ ಭವನ, .ಎಸ್. ಎಸ್ ಕಾಮರ್ಸ್ ಕಾಲೇಜ್ ಹತ್ತಿರ ಗದಗದಲ್ಲಿ “,ಜಾನಪದ ಸಂಭ್ರಮ ಹಾಗೂ ಕಲಾವಿದರಿಗೆ ಪುರಸ್ಕಾರಸಮಾರಂಭ ಏರ್ಪಡಿಸಲಾಗಿದೆ ಕಾರ್ಯಕ್ರಮವನ್ನು ಡಾ. ಎಸ್.ಬಾಲಾಜಿ, ರಾಜ್ಯಾಧ್ಯಕ್ಷರು ಕನ್ನಡ ಜಾನಪದ ಪರಿಷತ್ ಬೆಂಗಳೂರು ಉದ್ಘಾಟಿಸುವರು. ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ. ಶಾಂತಕುಮಾರ್ ಬಿ ಭಜಂತ್ರಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರವಿಕಾಂತ್ ಅಂಗಡಿ ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಗದಗ, ಡಾ. ಬಿ ಹಿತ್ತಲಮನಿ, ಪ್ರಾಚಾರ್ಯರು ಪಿ ಪಿ ಜಿ ಶಿಕ್ಷಣ ಮಹಾವಿದ್ಯಾಲಯ ಗದಗ, ವಿಜಯ ಕಿರೇಸೂರ ಜಿಲ್ಲಾಧ್ಯಕ್ಷರು, ಚಿತ್ರ ಕಲಾ ಶಿಕ್ಷಕರ ಸಂಘ, ಗದಗ, ಪ್ರೊ. ರೇಖಾ ನೀರಲಗಿ, ಪ್ರೊ. ಶಕುಂತಲಾ..ಸಿಂಧೂರ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಬಸವರಾಜ ಈರಣ್ಣವರ, ಗೌಡಪ್ಪ.ಬಮ್ಮಪ್ಪಣ್ಣವರ, ಶರಣಪ್ಪ ಕುಬಸದ, ಸಂಗಮೇಶ ಹಾದಿಮನಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಜಿಲ್ಲಾ ಘಟಕದ ವತಿಯಿಂದ ಸುರೇಶ್ ಬಣಗಾರ ಜನಪದ ಕಲಾವಿದರು ಮುಂಡರಗಿ, ಮಲ್ಲಪ್ಪ ಬಸಪ್ಪ ಹೊನಗಣ್ಣವರ, ಗೀ ಗೀ ಪದ ಕಲಾವಿದರು ಜಂತ್ಲಿಶಿರೂರ, ಕಲ್ಲಪ್ಪ ಬಣವಿ ಜನಪದ ಕಲಾವಿದರು ಲಕ್ಕುಂಡಿ ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು. ಸಣ್ಣಪ್ಪ ಧರಣಿ ಹಾಗೂ ತಂಡದವರು ಜಂತ್ಲಿಶಿರೂರ, ಕರ್ನಾಟಕ ಜಾನಪದ ಕಲಾತಂಡ ಮುಂಡರಗಿ, ರಮೇಶ್ ಹಕ್ಕಿ ಹಾಗೂ ಶರಣಪ್ಪ ಜಗ್ಗಲ್ ತಂಡ ಕೋಟುಮಚಗಿ, ಜ್ಞಾನ ಪರಂಪರೆ ಜನಪದ ಕಲಾತಂಡ ಲಕ್ಕುಂಡಿ, ಶ್ರೀ ಪುಟ್ಟರಾಜ ಕ್ರೀಡಾ ಮತ್ತು ಸಾಂಸ್ಕೃತಿಕ ತಂಡ ಅಸುಂಡಿಯವರಿಂದ ಹಾಗೂ ಜಾನಪದ ಕಲಾವಿದರಾದ ಶ್ರೀಮತಿ ಸಾವಿತ್ರಿ ಲಮಾಣಿ ಹಾಗೂ ಶಿಕ್ಷಕ ಕಲಾವಿದರಾದ ಡಿ.ಸಿ.ನದಾಫ ಅವರಿಂದ ಜನಪದ ಸಂಭ್ರಮ ಕಾರ್ಯಕ್ರಮಗಳು ಜರುಗಲಿವೆ ಎಂದು ಜಿಲ್ಲಾ ಕಜಾಪ ಕಾರ್ಯದರ್ಶಿ ಪ್ರೊ.ಎನ್.ಎನ್.ಕಿಂದ್ರಿ ಮತ್ತು ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಪ್ರೊ.ನಿಂಗಪ್ಪ.ಟಿ.ಪೂಜಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಸರ್ಕಾರದ ಸೌಲಭ್ಯಗಳಲ್ಲಿ ಬ್ರಹ್ಮಾಂಡ ಬ್ರಷ್ಟಾಚಾರ ನಡೆದಿದೆ

ಪಟ್ಟಣದ ಜನತೆ ವಸತಿ ಸೇರಿ ಹತ್ತು ಹಲವಾರು ಸಮಸ್ಯೆಗಳಿಂದ ಸಂಕಷ್ಟದಲ್ಲಿದ್ದಾರೆ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಸ್ವಾರ್ಥಪರ ಚಿಂತನೆ ನಡೆಸುವ ಮೂಲಕ ಸಾರ್ವಜನಿಕರನ್ನು ಕಡೆಗಣಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಸಿಪಿಐಎಂ ಮುಖಂಡ ಎಂ.ಎಸ್.ಹಡಪದ ಆರೋಪಿಸಿದರು.

ಅಬ್ಬಿಗೇರಿ: ಕಠಿಣ ಲಾಕ್ಡೌನ್ ಮನೆ ಮನೆಗೆ ಪಡಿತರ

ನರೇಗಲ್: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಜಿಲ್ಲಾಡಳಿತ 5 ದಿನದವರೆಗೂ ಕಠಿಣ ಲಾಕ್ಡೌನ್ ವಿಧಿಸಿದ ಪರಿಣಾಮ, ಸಮೀಪದ ಅಬ್ಬಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಡಿತರನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡರು. ಗ್ರಾಮದಲ್ಲಿನ ಸಂಘದ ಪಡಿತರ ಚೀಟಿ ಇರುವ ಮನೆಮನೆಗೆ ತೆರಳಿ ಗ್ರಾಹಕರ ಪಡಿತರವನ್ನು ಸ್ಥಳದಲ್ಲಿಯೇ ತೂಕ ಮಾಡಿ ಹಂಚಿಕೆ ಮಾಡಲಾಗುತ್ತಿದೆ,ಕಠಿಣ ಲಾಕ್ಡೌನ್ ನಿಂದ ಜನರು ಹೊರಗಡೆ ಬರಲು ಆಗದ ಕಾರಣ ಗ್ರಾಮ ಪಂಚಾಯತಿ ಯವರು ಪಡಿತರವನ್ನು ಮನೆ ಮನೆಗೆ ಹಂಚುತ್ತಿರುವುದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಮೋದಿ ಸರ್ಕಾರ ಜನರಿಗೆ ಬೆಲೆ ಏರಿಕೆ ಬರೆ ನೀಡುತ್ತಿದೆ: ತಾಹೀರ್ ಹುಸೇನ್

ಕೇಂದ್ರ ಸರ್ಕಾರ ಅಗತ್ಯ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿದ್ದನ್ನು ತೀರ್ವವಾಗಿ ಖಂಡಿಸುತ್ತದೆ ಎಂದು ವೆಲ್ವೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ಹೇಳಿದರು.

ಮಾನಸಿಕ ಒತ್ತಡದ ನಿವಾರಣೆಗೆ ದೈಹಿಕ ಚಟುವಟಿಕೆ ಅಗತ್ಯ

ಆರೋಗ್ಯ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ. ಆರೋಗ್ಯವೇ ಭಾಗ್ಯ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಥಿತಿಯಲ್ಲಿದ್ದರೆ ಜೀವನದಲ್ಲಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಬಿ. ಸಂಕನೂರ ತಿಳಿಸಿದರು.