ಗದಗ: ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಂಸ್ಥೆಯಾದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ  ಕೇಂದ್ರ ( ಸಿಡಾಕ) ಧಾರವಾಡ ಹಾಗೂ ಸಿಡಾಕ್ ಜಿಲ್ಲಾ ಕಚೇರಿ ಗದಗ ಇವರ ಸಹಯೋಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವ ಅಬ್ಯರ್ಥಿಗಳಿಗೆ 30 ದಿನಗಳ ಉಚಿತ ಬ್ಯೂಟಿಷಿಯನ್ ಹಾಗೂ ಕಾಸ್ಮೆಟಾಲಜಿ ಕೌಶಲ್ಯಾಧಾರಿತ ಉದ್ಯಮಶೀಲತಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿಯನ್ನು ಮಾರ್ಚ ತಿಂಗಳಲ್ಲಿ ನಡೆಸಲಾಗುವುದು.   ತರಬೇತಿಯಲ್ಲಿ ಬ್ಯೂಟಿಷಿಯನ್ ಹಾಗೂ ಕಾಸ್ಮಟಾಲಜಿ , ಸ್ವಂತ ಉದ್ಯಮ ಸ್ಥಾಪನೆಗೆ ಸಹಾಯ ಮಾಡುವ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ  , ಹಣಕಾಸಿನ ಸಾಕ್ಷರತೆ, ಸಂಭವನೀಯ ವ್ಯವಹಾರದ ಕಲ್ಪನೆಗಳು ಮತ್ತು ಮೌಲ್ಯಮಾಪನ , ಸ್ಥಳೀಯ ಸಂಪನ್ಮೂಲಗಳ ಬಳಕೆ , ಯೋಜನಾ ವರದಿ ತಯಾರಿಕೆ , ಜಾಹೀರಾತು ಮತ್ತು ಮಾರುಕಟ್ಟೆ ಬಗಗೆ ಮಾಹಿತಿ, ಯಶಸ್ವಿ ಉದ್ಯಮಿಗಳ ಜೊತ ಸಂವಾದ, ವ್ಯವಹಾರದ ನೊಂದಣಿ  ಮಾಡುವ ವಿಧಾನಗಳು , ಬ್ಯಾಂಕ್ ವ್ಯವಹಾರದ ಮಾಹಿತಿ  ಉದ್ಯಮದ ಆಯ್ಕೆ ಬಗ್ಗೆ ಮಾಹಿತಿ  ಹೀಗೆ ಹಲವು ವಿಷಯಗಳ ಕುರಿತು ಮಾಹಿತಿ ಹಾಗೂ ತರಬೇತಿಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.   ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ 7795855847, 8722759959  ಸಂಪರ್ಕಿಸಬಹುದಾಗಿದೆ ಎಂದು ಸಿಡಾಕ್ ದ ಜಂಟಿ ನಿರ್ದೇಶಕ ಸಿ.ಎಚ್. ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕನ್ನಡ ರಾಜ್ಯೋತ್ಸವ ದಿನದಂದ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟಿಸಲು ಮುಂದಾದ ಮಹಾರಾಷ್ಟ್ರ ಸಚಿವರು!

ಬೆಳಗಾವಿ : ರಾಜ್ಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ತಯಾರಿ ನಡೆದಿದೆ. ಆದರೆ, ಮಹಾರಾಷ್ಟ್ರ ಸರ್ಕಾರ, ಇದನ್ನು ವಿರೋಧಿಸುವ ಪ್ರಯತ್ನ ನಡೆಸುತ್ತಿದೆ.

ಪಟ್ಟಣದ ಅಭಿವೃದ್ಧಿಗೆ ಸದಾ ಸಿದ್ಧ : ಮಿಥುನ್ ಜಿ ಪಾಟೀಲ

ರೋಣ: ಪುರಸಭೆ ಅಧ್ಯಕ್ಷೆ ವಿದ್ಯಾಶ್ರೀ ದೊಡ್ಡಮನಿ ಹಾಗೂ ಉಪಾಧ್ಯಕ್ಷ ಮಿಥುನ್ ಜಿ ಪಾಟೀಲ ಒಂದು ಮತ್ತು…