ಅಮೇರಿಕಾ: ಕೊರೊನಾ ಕಾಟ ಯಾರಿಗ್ ಆಗಿಲ್ಲ ಹೇಳ್ರಿ. ಕೊರೊನಾದಿಂದ ಬೇಸತ್ ಮಂದಿಗೆ ಕೊರೊನಾ ಲಸಿಕೆ ಸ್ವಲ್ಪ ಸಮಾಧಾನ ತಂದೈತೆ. ಆದ್ರೆ ಸದ್ಯಕ್ ವಯಸ್ಸಾದವ್ರಿಗಷ್ಟ ಕೊರೊನಾ ಲಸಿಕೆ ಹಾಕಾಕತ್ತಿದ್ದಕ್ ಹರೆದ ಹೆಣ್ಮಕ್ಳಿಬ್ರು ಮುದುಕಿ ವೇಷದಾಗ ಬಂದು ಸಿಕ್ ಬಿದ್ ಸುದ್ದೊಯಾಗ್ಯಾರ.

ಅಮೇರಿಕಾದ ಫ್ಲಾರಿಡಾದ ಒರ್ಲಾಂಡೋದಾಗಿನ್  ಆರೆಂಜ್‌ ಕೌಂಟಿಯ ಲಸಿಕಾ ಕೇಂದ್ರಕ್ ಬಂದಿದ್ದ್ ಇಬ್ರು ಹೆಣ್ಮಕ್ಳು ಗ್ಲೌವ್ಸ್‌ಗಳು, ಗ್ಲಾಸ್‌ಗಳು ಹಾಗೂ ಬಾನೆಟ್‌ಗಳನ್ನು ಹಾಕ್ಕೊಂಡಿದ್ರು. ಇಲ್ಲಿಗ್ ಬಂದ್ ಈ ಇಬ್ರ ಹೆಣ್ಮಕ್ಕಳಿಗೆ  34 ಹಾಗೂ 44 ವರ್ಷ ವಯಸ್ಸಾಗಿತ್ತು. ನಿಯಮದ್ ಪ್ರಕಾರ ಲಸಿಕೆ ತಗೊಳ್ಳಾಕ   ಇವ್ರಿಗೆ ಅರ್ಹತೆಯಿರಲಿಲ್ಲಂತ..!

ಇನ್ನೊಂದ್ ವಿಷಯ ಏನಂದ್ರ ಈಗಾಗ್ಲೆ ಇದಾ ವೇಷದಾಗ ಬಂದು ಒಂದು ಲಸಿಕೆ ಹಾಕ್ಕೊಂಡು ಹೋಗಿ ಎರಡನೇ ಲಸಿಕೆಗೆ ಸಿಕ್ ಬಿದ್ದಾರ ಅಂತ ಡಾ.ರೌಲ್ ಪಿನೋ ತಿಳಿಸಿದ್ದಾರೆ.

ಇಷ್ಟೆಲ್ಲಾ ಆದ್ರೂ ಇಬ್ರೂ ಮೊದಲ ಸಲ ಡೋಸ್ ತೆಗೆದುಕೊಳ್ಳಲು ಅದು ಹ್ಯಾಂಗ್ ಸಾಧ್ಯಾತು? ಅನ್ನೋದು ತಿಳಿದು ಬಂದಿಲ್ಲ.

ಏನಾರಾ ಆಗ್ಲಿ ಕೊರೊನಾ ಯಾರ್ಯಾರನ್ ಹ್ಯಾಂಗೆಲ್ಲಾ ಮಾಡುತ್ತ ಅನ್ನೋದಕ್ಕ್ ಇದು ಒಂದು ಒಳ್ಳೆ ಉದಾಹರಣೆ ನೋಡ್ರಿ.

Leave a Reply

Your email address will not be published. Required fields are marked *

You May Also Like

ಕಾಶ್ಮೀರದಲ್ಲಿ ಮುಂದುವರೆದ ಪಾಕ್ ದಾಳಿ: ಸರಣಿ ಕದನ ವಿರಾಮ ಉಲ್ಲಂಘನೆ

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನ ದಾಳಿಯನ್ನು ಮುಂದುವರೆಸಿದೆ. ನಿನ್ನೆ ಮುಂಜಾನೆ ರಾಜ್ಯದ ವಿವಿಧೆಡೆ ಆರಂಭವಾಗಿರುವ ಕದನವಿರಾಮ ಉಲ್ಲಂಘನೆ ಇಡೀ ರಾತ್ರಿ ಮುಂದುವರೆದಿತ್ತು.

ಜಿಟಿಟಿಸಿ ಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ವರ್ಲ್ಡ್ ಸ್ಕಿಲ್ ಕಾಂಪಿಟೆಶನ್ ಗೆ ಆಯ್ಕೆ

ಧಾರವಾಡ: ರಾಯಪುರ್ ಇಂಡಸ್ಟ್ರಿಯಲ್ ಎಸ್ಟೇಟ್ ನಲ್ಲಿರುವ ಜಿಟಿಟಿಸಿ ಸಂಸ್ಥೆ ಇಬ್ಬರು ವಿದ್ಯಾರ್ಥಿಗಳು ವರ್ಲ್ಡ್ ಸ್ಕಿಲ್ ಕಂಪೇಟೇಷನಲ್ಲಿ…

ಅಬ್ಬಾ…! ಮಹಾರಾಷ್ಟ್ರದಲ್ಲಿ ಎಷ್ಟು ಜನ ಪೊಲೀಸರಿಗೆ ಕೊರೊನಾ ಬಂದಿದೆ ಗೊತ್ತಾ?

ಮುಂಬಯಿ: ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ಹಾವಳಿ ಮಿತಿ ಮೀರುತ್ತಿದೆ. ಕೊರೊನಾ ವಾರಿಯರ್ಸ್ ನ್ನು ಅದು…

ಅಮೆರಿಕದ ಚುನಾವಣೆಯಲ್ಲಿ ನೆಕ್ ಟು ನೆಕ್ ಫೈಟ್ ನೀಡುತ್ತಿರುವ ಬಿಡೆನ್!

ವಾಷಿಂಗ್ಟನ್ : ಅಮೆರಿಕದ ಚುನಾವಣೆಯಲ್ಲಿ ನಿಕಟ ಪೈಪೋಟಿ ಕಂಡು ಬರುತ್ತಿದೆ. ಹೀಗಾಗಿ ಗೆಲುವು ಯಾರ ಪಾಲಿಗೆ ಧಕ್ಕಲಿದೆ ಎಂಬುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.