ಬೆಂಗಳೂರು: ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ, ಈ ರಾಜ್ಯಗಳಿಂದ ಬರುವ ಜನರು ನೆಗೆಟಿವ್ ಆರ್ಟಿ-ಪಿಸಿಆರ್ ಪ್ರಮಾಣಪತ್ರವನ್ನು ಕರ್ನಾಟಕ ಕಡ್ಡಾಯಗೊಳಿಸಿದೆ.
ಈ ಆರ್ಟಿ-ಪಿಸಿಆರ್ ಪ್ರಮಾಣಪತ್ರವು 72 ಗಂಟೆಗಳಿಗಿಂತ ಹೆಚ್ಚು ಹಳೆಯದಾಗಿರಬಾರದು. ವಿಮಾನಗಳು, ರೈಲುಗಳು, ಬಸ್ ಅಥವಾ ಯಾವುದೇ ವೈಯಕ್ತಿಕ ವಾಹನಗಳ ಮೂಲಕ ರಾಜ್ಯಕ್ಕೆ ಪ್ರವೇಶಿಸುವವರಿಗೂ ಈ ನಿಯಮ ಅನ್ವಯಿಸಲಿದೆ. ಋಣಾತ್ಮಕ ಕೋವಿಡ್ -19 ವರದಿಯಿಲ್ಲದೆ ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರಿಗೆ ರಾಜ್ಯ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಕರ್ನಾಟಕ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೊನಾ ಎರಡನೇ ಅಲೆ
ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿರುವ ಕರೋನಾ ಪ್ರಕರಣಗಳ ಹಿನ್ನೆಲೆ ಕರ್ನಾಟಕ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ರೀತಿ, ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಎರಡನೇ ಅಲೆ ಆರಂಭವಾಗಿದೆ ಎಂಬುದು ಸ್ಪಷ್ಟಪಡಿಸುತ್ತಿದೆ.

ಕರ್ನಾಟಕದಲ್ಲಿ ರೂಪಾಂತರಿ ವೈರಸ್ ಇಲ್ಲ
ರಾಜ್ಯ ಆರೋಗ್ಯ ಸಚಿವರು, ಕೇರಳದಲ್ಲಿ(Kerala) ಪ್ರತಿ ದಿನ ಸರಾಸರಿ 4 ರಿಂದ 5 ಸಾವಿರ ಹಾಗೂ ಮಹಾರಾಷ್ಟ್ರದಲ್ಲಿ 5 ರಿಂದ 6 ಸಾವಿರ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಹಾಗೂ ಈ ರಾಜ್ಯಗಳ ಗಡಿಗಳು ಕರ್ನಾಟಕಕ್ಕೇ ಹೊಂದಿಕೊಂಡಿವೆ. ಹೀಗಾಗಿ ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಎಷ್ಟು ಜನರಿಗೆ ಸಿಗಲಿದೆ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ..?

ಆಂದ್ರಪ್ರದೇಶ: ಲಾಕ್ ಡೌನ್ ಹಿನ್ನೆಲೆ ಎಲ್ಲ ದೇವಸ್ಥಾನಗಳು ಬಂದ್ ಆಗಿದ್ದವು. ಇದರಿಂದ ಭಕ್ತರಿಗೆ ಒಂದು ಚಿಂತೆಯಾದರೆ,…

ಒಂದು ಫೇರ್ & ಲವ್ಲಿ ಜಗಳ : ಗ್ಲೋ & ಹ್ಯಾಂಡ್ಸಮ್ Vs ಫೇರ್ & ಹ್ಯಾಂಡ್ಸಮ್

ಫೇಸ್ ಕ್ರೀಮ್ ಹೆಸರುಗಳಿಗಾಗಿ ಈಗ ಇಮಾಮಿ ಮ಻ತ್ತು ಹಿಂದೂಸ್ತಾನ್ ಯುನಿಲಿವರ್ ಕಂಪನಿಗಳು ಕೋರ್ಟಿನ ಅಂಗಳದಲ್ಲಿ ಕಾದಾಡುತ್ತಿವೆ.…

ಭಾರತ ಸೈನಿಕರ ಮೇಲೆ ನಿಗಾ: ಪಾಕ್ ಕುತಂತ್ರ ಬುದ್ದಿ

ಭಾರತದ ಸೈನಿಕರ ಮೇಲೆ ನಿಗಾ ಇಡುವ ನಿಟ್ಟಿನಲ್ಲಿ ಪಾಕ್ ಕುತಂತ್ರ ಬುದ್ಧಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.