ತಿರುವನಂತಪುರ: ಇಂದು ಕೇರಳದಲ್ಲಿ ಹೊಸದಾಗಿ ಕೊರೊನಾದ 40 ಪ್ರಕರಣಗಳು ದಾಖಲಾಗಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

ಇವುಗಳ ಪೈಕಿ ವಿದೇಶದಿಂದ ಬಂದ 9 ಮತ್ತು ಮಹಾರಾಷ್ಟ್ರದಿಂದ ಬಂದ 16, ತಮಿಳುನಾಡಿನಿಂದ ಬಂದ 5 ಮತ್ತು ದೆಹಲಿಯಿಂದ ಬಂದ 3 ಪ್ರಕರಣಗಳೂ ಸೇರಿವೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪಾಸಿಟಿವ ಸಂಖ್ಯೆ 1004, ಇವುಗಳಲ್ಲಿ 445 ಸಕ್ರಿಯ ಪ್ರಕರಣಗಳಿವೆ ಎಂದು ಅವರು ಹೇಳಿದರು.

ದೇಶಾದ್ಯಂತ ಇರುವ ಕೇರಳಿಗರ ಪೈಕಿ ನಿನ್ನೆವರೆಗೆ ಒಟ್ಟು 173 ಕೇರಳಿಗರು ಕೊರೊನಾದಿಂದ ಸಾವಿಗೀಡಾಗಿದ್ದಾರೆ ಎಂದ ಅವರು, ಕೇರಳ ವಿವಿಧ ರಾಜ್ಯಗಳಿಂದ ಆಗಮಿಸುತ್ತಿದ್ದಾರೆ. ಕೇರಳದಲ್ಲಿ ಕಂಟೈನ್ಮೆಂ ಟ್ ಹಂತ ಎರಡನೇ ಹಂತವನ್ನು ತಲುಪಿದೆ. ಕೇರಳದಲ್ಲಿ ಕೊರೊನಾ ಪ್ರಕರಣಗಳು ಕನಿಷ್ಠ ಮಟ್ಟಕ್ಕೆ ಇಳಿದಿವೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *

You May Also Like

ಆನ್ ಲೈನ್ ತರಗತಿ ಹಾಜರಿಗೆ ವೈಫಲ್ಯ: ಆತ್ಮಹತ್ಯೆ ದಾರಿ ಹಿಡಿದ ವಿದ್ಯಾರ್ಥಿನಿ

9ನೇ ತರಗತಿ ವಿದ್ಯಾರ್ಥಿನಿ ಮಲಪ್ಪುರಂ ಜಿಲ್ಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಕುಟುಂಬಸ್ಥರು, ಆನ್ ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗದೇ ಇರುವ ಕಾರಣಕ್ಕೆ ತೀವ್ರವಾಗಿ ತಳಮಳಕ್ಕೀಡಾಗಿ ಇಂತಹ ಕೃತ್ಯಕ್ಕೆ ಶರಣಾಗಿದ್ದಾಳೆ ಎಂದಿದ್ದಾರೆ. ಇವರು ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂದು ವರದಿಯಾಗಿದೆ.

ಪೇಶೆಂಟ್ ನಂ.419 ಸೃಷ್ಟಿಸಿದ ಅವಾಂತರಕ್ಕೆ ಇಡೀ ರಾಜ್ಯವೇ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ?

ಕ್ವಾರೆಂಟೈನ್ ಮುಗಿಸಿ ಬಂದ 419 ವ್ಯಕ್ತಿಯಿಂದಾಗಿ ಬೆಂಗಳೂರಿನಲ್ಲಿ ಆತಂಕ ಮನೆ ಮಾಡಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ ನಿನ್ನೆ ಈ ವ್ಯಕ್ತಿ ಐಸಿಯುನಲ್ಲಿಯೇ ಇದ್ದಾನೆ ಎಂದು ಹೇಳಲಾಗಿತ್ತು.

ದೇಶದಲ್ಲಿ 7 ಸಾವಿರದಷ್ಟು ರೂಪಾಂತರ ಕೊರೊನಾ ವೈರಸ್

ದೇಶದಲ್ಲಿ ಕೊರೊನಾ ವೈರಸ್‌ನ 7 ಸಾವಿರಕ್ಕೂ ಹೆಚ್ಚು ರೂಪಾಂತರಗಳು ಇರುವ ಸಾಧ್ಯತೆ ಇದ್ದು, ಈ ಪೈಕಿ ಕೆಲವು ಗಂಭೀರ ಅಪಾಯ ಉಂಟುಮಾಡಬಹುದು ಎಂದು ಹಿರಿಯ ವಿಜ್ಞಾನಿ ರಾಕೇಶ್ ಮಿಶ್ರಾ ಹೇಳಿದ್ದಾರೆ.