ಪೆರು: ವಿಲಕ್ಷಣ ಘಟನೆಯೊಂದರಲ್ಲಿ, ಪೆರುವಿನಲ್ಲಿ ದಂಡ ವಿಧಿಸುವ ಬದಲು ಪೊಲೀಸ್ ಅಧಿಕಾರಿ ಮಹಿಳೆಯೊಬ್ಬಳನ್ನು ಚುಂಬಿಸಿದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ.

ಈಗ ವೈರಲ್ ಆಗಿರುವ ಸಿಸಿಟಿವಿ ವಿಡಿಯೋ ತುಣುಕಿನಲ್ಲಿ, ಲಿಮಾದಲ್ಲಿ ಕೋವಿಡ್ ಕರ್ಫ್ಯೂ ಉಲ್ಲಂಘಿಸಿದ್ದಕ್ಕಾಗಿ ಅಧಿಕಾರಿ ಮಹಿಳೆಗೆ ದಂಡ ವಿಧಿಸುವುದಕ್ಕೆ ನಿಲ್ಲಿಸಿರುವುದನ್ನು ಕಾಣಬಹುದು. ದಂಡ ಕೊಡದೆ ಚುಂಬನ ಕೊಡುವಂತೆ ಅಧಿಕಾರಿ ಆಕೆಯ ಮನವೊಲಿಸಿದ್ದು ವೀಡಿಯೋದಲ್ಲಿ ಕಾಣುತ್ತದೆ.

ಮಿರಾಫ್ಲೋರ್ಸ್ ಬೋರ್ಡ್ವಾಕ್ ಎಂದು ಕರೆಯಲ್ಪಡುವ ಮಾಲೆಕಾನ್ ಡೆಲಾ ಮರೀನಾದಲ್ಲಿ ಪೊಲೀಸ್ ಅಧಿಕಾರಿ ಮಹಿಳೆಯನ್ನು ತಡೆದಿದ್ದರು. ದಂಡದ ಶುಲ್ಕ ವಿಧಿಸಲು ಪ್ರಾರಂಭಿಸಿದಾಗ ಮಹಿಳೆ ಅಧಿಕಾರಿಗೆ ಹತ್ತಿರವಾಗುವುದನ್ನು ಕಾಣಬಹುದು. ಆದರೆ, ಕೆಲವು ಸೆಕೆಂಡುಗಳ ಹಿಂಜರಿಕೆಯ ನಂತರ, ಅಧಿಕಾರಿ ಅವಳನ್ನು ಚುಂಬಿಸಲು ಮುಂದಾಗುತ್ತಾನೆ. ಇವಿಷ್ಟೂ ಸಿಸಿಟಿವಿಯಲ್ಲಿ ದಾಖಲಾಗಿದ್ದು ತನಿಖೆಯ ನಂತರ ಪೋಲಿಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.

Leave a Reply

Your email address will not be published. Required fields are marked *

You May Also Like

ಸರ್ಕಾರಿ ನೌಕರರಿಗೆ ಎಲೆಕ್ಟ್ರಿಕ್ ವಾಹನ ಕಡ್ಡಾಯಕ್ಕೆ ಸಚಿವ ನಿತಿನ್ ಗಡ್ಕರಿ ಸಲಹೆ

ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಸಚಿವ ನಿತಿನ್ ಗಡ್ಕರಿ ಸಲಹೆ ನೀಡಿದ್ದಾರೆ.

ಬ್ಯಾಂಕಿನಲ್ಲಿಟ್ಟ ಠೇವಣಿಯ ಬಡ್ಡಿದರ ಇಳಿಕೆ..!

ತಾವು ಇಟ್ಟ ಹಣಕ್ಕೆ ಬಡ್ಡಿಯಾದರೂ ಸಿಗುತ್ತೆ ಎನ್ನುವ ಕಾರಣಕ್ಕೆ ಬಹುತೇಕರು ಬ್ಯಾಂಕಿನಲ್ಲಿ ಹಣ ಠೇವಣಿ ಇಡುವುದು ಸಹಜ. ಆದರೆ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಡೆಪಾಸಿಟ್ ಮೇಲಿನ ಬಡ್ಡಿ ಹಣವನ್ನೇ ಇಳಿಕೆ ಮಾಡಿದೆ.

ವಾಟ್ಸಾಪ್ ಬಳಕೆದಾರರಿಗೆ ಇನ್ಮೂಂದೆ ಹೆಚ್ಚಿನ ಬದ್ರತೆ

ವಾಟ್ಸ್ ಆಪ್ ವೆಬ್ ಮತ್ತು ಡೆಸ್ಕ್ ಟಾಪ್ ಹೊಸ ಮತ್ತು ಉತ್ತಮ ಭದ್ರತಾ ವೈಶಿಷ್ಟö್ಯಗಳೊಂದಿಗೆ ಅಪ್ ಡೇಟ್ ಆಗಲಿದೆ. ಹೊಸ ಅಪ್ ಡೇಟ್ ಪ್ರಕಾರ, ಬಳಕೆದಾರರು ಲಾಗಿನ್ ಆಗುವ ಮುನ್ನ ಡೆಸ್ಕ್ ಟಾಪ್ ಆಪ್‌ನಲ್ಲಿ ಫಿಂಗರ್ ಪ್ರಿಂಟ್ ಅಥವಾ ಫೇಸ್ ಐಡಿಯನ್ನು ದೃಢೀಕರಿಸಬೇಕಾಗುತ್ತದೆ. ಹೊಸದಾಗಿ ಪರಿಚಯಿಸಲಾದ ಈ ವೈಶಿಷ್ಟö್ಯವು ಖಾತೆಗೆ ಹೆಚ್ಚುವರಿ ರಕ್ಷಣೆ ಒದಗಿಸುತ್ತದೆ.