ಉತ್ತರಪ್ರಭ ಸುದ್ದಿ
ಗದಗ: ಜಿಲ್ಲೆ ಶಿರಹಟ್ಟಿ ಪಟ್ಟಣದಲ್ಲಿ ನಿನ್ನೆ ನಡೆದ ಅದ್ಧೂರಿ ಸಮಾವೇಶ ಕೇಸರಿ ಪಾಳೆಯದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಹೊಸ ಉತ್ಸಾಹದ ಜೊತೆಗೆ ಸಮಾವೇಶದ ನಂತರ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಶಾಸಕ ಕಳಕಪ್ಪ ಬಂಡಿ ಮಾತ್ನಾಡಿದ ಸುದ್ದಿ ಭಾರೀ ಚರ್ಚೆಯಲ್ಲಿದೆ..

ಶಿರಹಟ್ಟಿ ಸಮಾವೇಶ ಮುಗಿಸಿ ಹಾವೇರಿಗೆ ಹೊರಟಿದ್ದ ಯಡಿಯೂರಪ್ಪ, ಶಾಸಕ ಬಂಡಿಗೆ ಶಾಕ್ ನೀಡಿದರು. ಊಟ ಮಾಡಿ ಹೆಲಿಕಾಪ್ಟರ್ ಏರಿ ಕುಳಿತಿದ್ದ ಯಡಿಯೂರಪ್ಪ, ಶಾಸಕ ಬಂಡಿ ಅವರನ್ನ ನೋಡಿ ಕೈ ಕುಲುಕಿದರು. ನಂತರ ಮಾತ್ನಾಡಲು ಮುಂದಾಗಿದ್ದ ಯಡಿಯೂರಪ್ಪ, ನಿನಗೆ ಟಿಕೆಟ್ ಕೊಡ್ಬೇಕಾ ಅಂತಾ ಪ್ರಶ್ನಿಸಿದರು.. ಅನಿರೀಕ್ಷಿತ ಪ್ರಶ್ನೆ ಎದುರಾಗ್ತಿದ್ದಂತೆ ತಬ್ಬಿಬ್ಬಾಗಿದ್ದ ಶಾಸಕ ಬಂಡಿ, ನೀವು ಹೇಳಿದಂಗೆ. ನೀವು ನಿಲ್ಲು ಅಂದ್ರೆ ನಿಲ್ತೀನಿ ಅಂದ್ರು.. ತಕ್ಷಣ ಉತ್ತರಿಸಿದ ಯಡಿಯೂರಪ್ಪ, ಜನ ಬೇಡ ಅಂತಿದಾರೆ ಅಂದರು. ಮಧ್ಯ ಪ್ರವೇಶಿಸಿದ ಸಿಎಂ ಬೊಮ್ಮಾಯಿ, ಈ ಬಾರಿಯೊಮ್ಮೆ ಕೊಡೋಣ ಅಂದರು. ಸಿಎಂ ಜೊತೆಗೆ ಮಾತ್ನಾಡ್ತಿದ್ದ ಸಿಸಿ ಪಾಟೀಲ, ಯಡಿಯೂರಪ್ಪ ಅವರ ಕಡೆಗೆ ಬಂದರು. ಸಿಸಿ ಪಾಟೀಲರನ್ನ ನೋಡಿದ ಯಡಿಯೂರಪ್ಪ ಇವನಿಗೆ ಟಿಕೆಟ್ ಕೊಡ್ತೀರಾ ಅಂದರು. ಅವನೇ ನಿಲ್ಲಲ್ಲ ಅಂತಿದಾನೆ ಅಂದ ಸಿಸಿ ಪಾಟೀಲರಿಗೆ ಅವನು ನಿಂತ್ರೂ ನಾವ್ ಕೊಡಲ್ಲ ಅಂತಾ ಯಡಿಯೂರಪ್ಪ ಹೇಳಿದರು. ಕೊಡದಿದ್ರೆ ನನಗೂ ಕೊಡಿಸೋದಕ್ಕೆ ಬಿಡಲ್ಲ ಅಂತಾ ಕಾವು ಪಡೆಯುತ್ತಿದ್ದ ಚರ್ಚೆಗೆ, ಸಿಸಿ ಪಾಟೀಲ, ತಮಾಷೆಯ ಬಣ್ಣ ನೀಡಿದರು.
ಹಾವೇರಿಗೆ ಹೊರಡುವ ಮುನ್ನ ಹೆಲಿಕಾಪ್ಟರ್ ಕೂತು ಮಾಜಿ ಸಿಎಂ ಆಡಿದ ಈ ಮಾತು ಕ್ಷೇತ್ರದಲ್ಲಿ ಭಾರಿ ಸದ್ದು ಮಾಡಿದರೆ. ಕ್ಷೇತ್ರಕ್ಕೆ ಸೀಮಿತವಾಗಿದ್ದ ಚರ್ಚೆ ಹೈಕಮಾಂಡ್ ವರೆಗೂ ಹೋಗಿದೆ. ಜನ ಟಿಕೆಟ್ ಬೇಡ ಅಂತಾ ಯಡಿಯೂರಪ್ಪ ಅವರ ಬಾಯಲ್ಲಿ ಕೇಳಿದ ಕಾಂಗ್ರೆಸ್ ಫುಲ್ ಖುಷ್ ಆಗಿದೆ. ಇತ್ತ ಬಿಜೆಪಿ ಟಿಕೆಟ್ ಆಕಾಂಶಿಗಳಲ್ಲೂ ಹೊಸ ಹುರುಪು ಮೂಡುವಂತೆ ಮಾಡಿದೆ.