ನರೇಗಲ್: ಸಮೀಪದ ಕೂತಬಾಳ ಗ್ರಾಮದ ಬಸವ ಬಳಗ ಜಾನಪದ ಸಾಂಸ್ಕೃತಿಕ ಕಲಾತಂಡ ಅಧ್ಯಕ್ಷ ಹಾಗೂ ಸಗರ ಕಲಾ ಚಕ್ರವರ್ತಿ ಪ್ರಶಸ್ತಿ ಪುರಸ್ಕೃತ ಬಸವರಾಜ ಪಾಗದ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು.

ಜನಪದ ಸಾಹಿತ್ಯದಲ್ಲಿ ತಮ್ಮದೇಯಾದ ವಿನೂತ ಶೈಲಿಯ ಹಾಸ್ಯದ ಮೂಲಕ ಪಾಗದ ಮನೆಮಾತಾಗಿದ್ದರು. ಮಿಮಿಕ್ರಿಯೆ, ವಿವಿಧ ಜನಾಂಗದ ವೇಷ ಭೂಷಣಗಳೂಂದಿಗೆ ಅಭಿನಯಿಸಿ ಜನಪದ ಸಾರವನ್ನು ಜನರಿಗೆ ತಲುಪಿಸಿದ ಕೀರ್ತಿ ಬಸವರಾಜ ಪಾಗದ ಅವರಿಗೆ ಸಲ್ಲುತ್ತದೆ‌.
ಪ್ರಸ್ತುತ ದಿನಮಾನದಲ್ಲಿ ಜಾನಪದ ಕಲೆಗೆ ತನ್ನದೇಯಾದ ಕೊಡುಗೆ ನೀಡುತ್ತಿರುವ ಕೊತಬಾಳ ಗ್ರಾಮದಲ್ಲಿ ಹಿರಿಯ ಜಾನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ್ ಅವರೊಂದಿಗೆ ಇಪ್ಟಾ, ಅರುಣೋದಯ ಕಲಾ ತಂಡಗಳ ಮೂಲಕ ಜಾನಪದ ಕ್ಷೇತ್ರಕ್ಕೆ ತಮ್ಮನ್ನು ಪರಿಚಯಿಸಿಕೊಂಡ ಪಾಗದ ನಿಧನ ಜಾನಪದ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಪತ್ನಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You May Also Like

ಆಕ್ಸಿಜನ್ ಬಗ್ಗೆ ಯಾರು ಭಯಪಡಬೇಡಿ: ಸಚಿವ ಪ್ರಹ್ಲಾದ್ ಜೋಷಿ

ಕೊವಿಡ್ ರೋಗಿಗಳಿಗಾಗಿ ವಿಶೇಷ ಹೆಚ್ಚುವರಿ 10 ಆ್ಯಂಬ್ಯುಲೇನ್ಸ್ ಸಿದ್ಧಪಡಿಸಲಾಗಿದೆ. ಜನರು ಜಾಗೃತರಾಗಿರಬೇಕು. ಆದರೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಸಾರಿಗೆ ನೌಕರರಿಗೆ ಅಭದ್ರತೆ: ಉದ್ಯೋಗ ಕಡಿತಕ್ಕೆ ಸ್ವಯಂ ನಿವೃತ್ತಿಯ ಮಾಸ್ಟರ್ ಪ್ಲ್ಯಾನ್..!

ಬೆಂಗಳೂರು: ಈಗಾಗಲೇ ಸಾರಿಗೆ ಇಲಾಖೆಯ 2000 ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸುತ್ತಿದೆ. ಇದರಿಂದ ಖಾಯಂ ನೌಕರರಿಗೂ…

ತಿರುಪತಿಗೆ ಕೋಟಿಕೋಟಿ: ಮಾಜಿ ಸಿಎಂ ಎಚ್.ಡಿ.ಕೆ. ವಿರೋಧ

ನಾನು ಸಿಎಂ ಆಗಿದ್ದಾಗ ಕೇವಲ ₹26 ಕೋಟಿ ಆಗಿದ್ದ ತಿರುಪತಿ ವಸತಿ ಸಮುಚ್ಚಯ ಯೋಜನೆ, @BSYBJP ಸರ್ಕಾರದಲ್ಲಿ, ಒಂದೇ ವರ್ಷದಲ್ಲಿ 200 ಕೋಟಿಗೆ ಏರಿಕೆಯಾಗಿದೆ.