ಲಕ್ಷ್ಮೇಶ್ವರ: ಜನರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದ್ದು, ಜನೌಷಧಿ ಮೂಲಕ ಜನರಿಗೆ ಶೇ.10 ರಿಂದ ಶೇ.90ರವರೆಗೆ ರಿಯಾಯತಿ ದರದಲ್ಲಿ ಔಷಧಿ ವಿತರಿಸಲಾಗುತ್ತಿದೆ ಎಂದು ಕೆಸಿಸಿ ಬ್ಯಾಂಕ ನಿರ್ದೇಶಕ ಸುನೀಲ ಮಹಾಂತಶೆಟ್ಟರ ಹೇಳಿದರು.
ಅವರು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನೌಷಧಿಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪರುಶುರಾಮ್ ಇಮ್ಮಡಿ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಪಿ. ಬಳಿಗಾರ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್.ಪಾಟೀಲ್, ಚಂಬಣ್ಣ ಬಾಳಿಕಾಯಿ, ನೀಲಪ್ಪ ಕರ್ಜೆಕಣ್ಣವರ, ಬಸವರಾಜ ಬೆಂಡಿಗೇರಿ, ಸೋಮಣ್ಣ ಮುಳಗುಂದ, ಎಪಿಎಂಸಿ ಅಧ್ಯಕ್ಷ ನೀಲಪ್ಪ ಹತ್ತಿ, ಲಕ್ಷ್ಮೇಶ್ವರ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಗಿರೀಶ ಮರಡ್ಡಿ, ಆರೋಗ್ಯ ರಕ್ಷಾ ಸಲಹಾ ಸಮಿತಿಯ ಸದಸ್ಯ ಡಿ.ವೈ.ಹುನಗುಂದ, ಗಂಗಾಧರ ಮೆಣಸಿನಕಾಯಿ, ದುಂಡೇಶ್ ಕೊಟಗಿ, ವಿಜಯ ಕುಂಬಾರ, ಪ್ರಕಾಶ ಮಾದ್ನೂರ, ಅರುಣ್ ಪಾಟೀಲ್, ಬಸವರಾಜ ಚಕ್ರಸಾಲಿ, ಪ್ರವೀಣ್ ಬೊಮಲೆ, ರುದ್ರಪ್ಪ ಉಮಚಗಿ, ರಮೇಶ್ ಹಾಳತೋಟದ, ವಿರೇಶ್ ಸಾಸಲ್ವಾಡ, ಸಂತೋಷ್ ಜಾವೂರ್, ಶಿವಣ್ಣ ಅಂಕಲಕೋಟಿ, ಅಡರಕಟ್ಟಿ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಪ್ಯಾಟಿ ಸೇರಿಂತೆ ಅನೇಕರು ಉಪಸ್ಥಿತರಿದ್ದರು.