ಆಲಮಟ್ಟಿ : ಸಮೀಪದ ಸುಕ್ಷೇತ್ರ ಯಲಗುರ ಗ್ರಾಮದ ಜಾಗೃತದೇವ ಹನುಮ ಯಲಗುರೇಶನ ಕಾರ್ತಿಕೋತ್ಸವ ಶನಿವಾರ ಜರುಗಲಿದೆ. ಆ ನಿಮಿತ್ಯ ಧಾರ್ಮಿಕ ಕೈಂಕರ್ಯ,ಸAಗೀತ,ಗಾನ ಸುಧೆ ಸೇರಿದಂತೆ ನಾನಾ ರಂಜನೀಯ ಕಾರ್ಯಕ್ರಮಗಳು ನಾಲ್ಕು ದಿನಗಳ ಕಾಲ ನಿತ್ಯ ನಡೆಯಲಿವೆ.
ಅಪಾರ ಭಕ್ತಗಣದ ಆರಾಧ್ಯ ದೇವ ಯಲಗುರೇಶ ಈ ಭಾಗದ ಸಪ್ತಗ್ರಾಮಗಳಿಗೆ ಅಧಿಪತಿಯಾಗಿ ಅಸಂಖ್ಯ ಭಕ್ತರ ಮನೆ,ಮನಗಳಲ್ಲಿ ನೆಲೆಗೊಂಡಿದ್ದಾನೆ. ಯಲಗೂರ ಹನುಮನ ಲೀಲಾ ಮಹಿಮೆ ಸಪ್ತ ಸಾಗರದಾಚೆಯು ಹರಡಿರುವುದು ವಿಶೇಷ !


ಈ ಮಹಿಮಾ ಹನುಮನ ಕಾರ್ತಿಕೋತ್ಸವ ಪ್ರಯುಕ್ತ ಪ್ರತಿ ಬಾರಿಯೂ ಇಲ್ಲಿ ವೈವಿಧ್ಯಮಯವಾಗಿ ವಿವಿಧ ಕಾರ್ಯಕ್ರಮಗಳು ಸಂಯೋಜಿಸಲ್ಪಡುತ್ತವೆ. ಖ್ಯಾತಿ ನಾಮಾಂಕಿತದ ಯಲಗುರೇಶನ ಅನುಗ್ರಹಕ್ಕಾಗಿ ರಾಜ್ಯದಾಚೆಯಿಂದಲೂ ಜನಮನ ಇಲ್ಲಿಗೆ ಧಾವಿಸಿ ಬರುತ್ತದೆ. ಕಾರ್ತಿಕೋತ್ಸವ ಸಂಭ್ರಮ ಕಣ್ತುಂಬಿಸಿಕೊAಡು ಪುನೀತ್ ಭಾವ ಮನದೊಂದಿಗೆ ಆರಾಧಿಸಿ ನೆಮ್ಮದಿಯ ತುಡಿತದಲ್ಲಿ ಮೈ ಮರೆಯುತ್ತಾರೆ. ಭಕ್ತಿರಸದ ಖುಷಿ ಲಹರಿ ಸವಿದು ಅನಂತ ಅಮೃತ ಧನ್ಯತೆ ತೋರುತ್ತಾರೆ.
ಕಾರ್ತಿಕೋತ್ಸವ ನಡೆಯುವ ಶನಿವಾರ ಬೆಳಿಗ್ಗೆ ಹನುಮ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಹೋಮ, ಮಹಾಪೂಜೆ ಅರ್ಪಿತವಾಗುತ್ತದೆ.ಬಳಿಕ 10 ಗಂಟೆಗೆ ದಿಂಡಿನ ಸ್ಪರ್ಧೆ, ಉಡುಪಿ ಚಂಡಿ ವಾದ್ಯ, ತೀರ್ಥ ಪ್ರಸಾದ, ಹರಿದಾಸರ ಕೀರ್ತನೆ ನಡೆಯುತ್ತವೆ. ರಾತ್ರಿ ಚೆಂಬೆಳಕಿನಲ್ಲಿ ಕಾರ್ತಿಕೋತ್ಸವದ ಹೊಂಬೆಳಕು ಮಿನುಗಿ ರಾರಾಜಿಸಲಿದೆ. ವೇದಘೋಷ, ಹರಿವಾಯು ಸ್ತುತಿ,ಸುಂದರಕಾAಡ,ಸುಮಧ್ವಜಯ ಪಾರಾಯಣ ಮೊಳಗಲಿದೆ. ಯಲಗೂರ ವಿಪ್ರ ಮಂಡಳಿ ಪ್ರಸನ್ನಾಚಾರ್ಯ ಕಟ್ಟಿ ಹಾಗು ಶಿಷ್ಯಬಳಗದಿಂದ ಭವ್ಯ ಶೋಭಾಯಾತ್ರೆ ಗ್ರಾಮದಲ್ಲಿ ಸಂಚರಿಸಲಿದೆ.
ವಿಜಯಪುರ, ಬಾಗಲಕೋಟೆ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತೆಲಗಿ, ಹುಬ್ಬಳ್ಳಿ, ಬೆಳಗಾವಿ, ಆಲಮಟ್ಟಿ , ಯಲಗೂರ ಸೇರಿದಂತೆ ವಿವಿಧ ಭಜನಾ ಮಂಡಳಿಗಳಿAದ ಎರಡು ದಿನಗಳಕಾಲ ನಿರಂತರ ಭಜನಾ ನಿನಾದ ಸದ್ದು ಝೇಂಕರಿಸಲ್ಲಿದೆ. ಇದೇ ವೇಳೆ ದಾಸವಾಣಿ ರಾಗ ಲಹರಿಗೆ ವಿದ್ಯುಕ್ತ ಚಾಲನೆ ಲಭಿಸಿದ ಬಳಿಕ ಸಮೂಹ ದಾಸವಾಣಿ ಆರಂಭಗೊಳ್ಳಲ್ಲಿದೆ.
ಶ್ರೀಮತಿ ಸಂಗೀತಾ ಕಾಖಂಡಕಿ(ಬೆAಗಳೂರು), ಪದ್ಮಶ್ರೀ ಜೋಷಿ,ರಥೋತ್ತಮ ಜೋಷಿ(ಬೀದರ), ಕುಮಾರಿ ಲಾವಣ್ಯ ಮತ್ತು ಅನನ್ಯ ರಿಂದ ಗಾಯನ ಸುಧೆ ಕೇಳಿ ಬರಲಿದೆ. ಪ್ರಸನ್ನಾಚಾರ್ಯ ಕಟ್ಟಿ, ಶ್ರೀಕಾಂತಾಚಾರ್ಯ ಇನ್ನಿತರ ಪಂಡಿತಗಳಿAದ ಪ್ರವಚನ ಸಾರ ಮೂಡಿಬರಲಿದೆ. ವರ್ಷಿಷ್ಟು ಕಲಾವಿದರಿಂದ ದಾಸವಾಣಿ ಪದರಾಗ ಕೇಳುಗರ ಶ್ರವಣಗಳಿಗೆ ತಾಗಲಿವೆ. ತೆಂಗಿನ ತೋಟದ ಮೈದಾನದಲ್ಲಿ ಮಹಾಪ್ರಸಾದ ನಡೆಯಲಿವೆ. ಸಂಜೆ 6 ರಿಂದ ಬೆಳಗಿನ 5 ಗಂಟೆವರೆಗೆ ಗಾಯನ ಮತ್ತು ದಾಸವಾಣಿ ಕಂಪು ಸೂಸಿ ಬರಲಿದೆ. ಸ್ನೇಹಾ ಮತ್ತು ಪ್ರೇಮಾ ಕಡಿವಾಲ, ಬಿ.ಬಿ.ಕುಲಕರ್ಣಿ, ಜ್ಯೋತಿ, ನಾಗೇಶ, ವರ್ಷ ಕುಲಕರ್ಣಿ, ವರ್ಷ ಹಾಗು ವೃಂದಾ, ನಟರಾಜ ಸಂಗೀತ ನೃತ್ಯ ನಿಕೇತನ ಬಾಗಲಕೋಟದ ವಿದ್ಯಾರ್ಥಿಗಳಿಂದ ಶ್ರೀಮತಿ ಶುಭದಾ ದೇಶಪಾಂಡೆ ಅವರ ನಿರ್ದೇಶನದಲ್ಲಿ ನೃತ್ಯ ಪ್ರದರ್ಶನ ಪ್ರಸ್ತುತವಾಗಲಿವೆ.
ಸೌಜನ್ಯ ಮೋಹರೆ,ರಜತ ಕುಲಕರ್ಣಿ, ಬಾಬಯ್ಯ ಚೆನ್ನಯ್ಯ ದೇಗಾಂವಿಮಠ ತಬಲಾ ಸೋಲೊ, ವೀಣಾ ಬಡಿಗೇರ, ಓಂಕಾರ ಕರಕಂಬಿ, ನೇತ್ರಾ ಜೋಶಿ, ಸ್ವಾತಿ ಉತ್ತರೇಶ್ವರ, ನಟರಾಜ ಮಹಾಜನ, ಸಂತೋಷ ಗದ್ದನಕೇರಿ, ಕುಮಾರ ಜಯತೀರ್ಥ,ರಾಘವೇಂದ್ರ ಕಟ್ಟಿ, ರಾಜೇಂದ್ರ ದೇಶಪಾಂಡೆ, ವಿದೂಷಿ ಸಂಗೀತಾ ಕಟ್ಟಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಬೆಳಗು ಮುಂಜಾವು ಪಲ್ಲಕ್ಕಿ ಸೇವೆ, ಕಕ್ಕಡದಾರತಿ, ದೀಪೋತ್ಸವ ಕಾರ್ತಿಕ ಇಳಿಸುವ ಇತರೆ ಕಾರ್ಯಕ್ರಮಗಳು ನೆರವೇರಲಿವೆ.
ದಿ, 20 ರಂದು ಭಾನುವಾರ ಮುಂಜಾನೆ ಮೂಕಿಹಾಳ ಕುದರೆ ಕುಣಿತ,ಗೊಂಬೆಗಳ ಕುಣಿತ ನಡೆಯಲಿದೆ. ಬೆಳಿಗ್ಗೆ 11ರಿಂದ ನಾರಾಯಣ ತಾಸಗಾಂವ, ಬಸವರಾಜ ಭಂಟನೂರ ಅವರಿಂದ ದಾಸವಾಣಿ ಗಾಯನಕ್ಕೆ ಹಲ ವಾದ್ಯ ಸಹಕಾರ ವೃಂದದ ನೆರವು ಸಿಗಲಿದೆ. ಸಂಜೆ 4ಗಂಟೆಗೆ ಪ್ರಸಾದ ವಿತರಣೆ ನಂತರ ಸಾಯಂಕಾಲ ರಥೋತ್ಸವ ಹಾಗು ರಾತ್ರಿ 8 ಗಂಟೆಗೆ ಹೊಂಡಪೂಜೆ,ಪಲ್ಲಕ್ಕಿ ಸೇವೆ ನಡೆಯಲಿವೆ. ರಾತ್ರಿ 10 ಗಂಟೆಗೆ ” ಹುತ್ತದಲ್ಲಿ ಕೈ ಇಟ್ಟ ಮುತ್ತೆöÊದೆ ” ನಾಟಕ ಪ್ರದರ್ಶನ ನಡೆಯಲಿದೆ.
ದಿ:21 ರಂದು ಸಂಜೆ 4 ಗಂಟೆಗೆ ಕುಸ್ತಿಪಟುಗಳಿಂದ ಜಂಗೀ ಕುಸ್ತು ನಡೆಯಲಿದೆ. ಈ ಕುಸ್ತಿ ಪಂದ್ಯದಲ್ಲಿ ಮಹಿಳೆಯರು ಭಾಗವಹಿಸಿ ತಮ್ಮ ವಿಶೇಷ ಕಸರತ್ತು ಕರಾಮತ್ತಿನ ಕುಸ್ತಿ ಗಮ್ಮತ್ತು ತೋರ್ಪಡಿಸಿ ರಂಗ ಏರಿಸಲ್ಲಿದ್ದಾರೆ. ಅದೇ ದಿನ ರಾತ್ರಿ ಶ್ರೀ ಕೃಷ್ಣ ಪಾರಿಜಾತ ಜರುಗಲಿದೆ.
ದಿ:22 ರಂದು ಸಂಜೆ 4 ಗಂಟೆಗೆ ಹಾಲು ಹಲ್ಲಿನ ಹಾಗು ಎರಡು ಹಲ್ಲಿನ ಮತ್ತು ಓಪನ್ ಹಲ್ಲಿನ ಟಗರಿನ ಕಾಳಗ ಸ್ಪರ್ಧೆ ಸಂಘಟಿಸಲಾಗಿದೆ
ಟಗರ ಕಾಳಗ ಜನಾಕರ್ಷಣೆ ಬಿಂದುವಾಗಿದೆ. ಯಲಗೂರ ಹನುಮನ ಕಾರ್ತಿಕೋತ್ಸವ ಕಳೆ ಆರಂಭವಾಗಿದೆ. ನಾಲ್ಕು ದಿನಗಳವರೆಗೆ ಗ್ರಾಮದಲ್ಲಿ ಜನಜಂಗುಳಿಯ ಹೆಜ್ಜೆ ಸಪ್ಪಳ ಜೋರಾಗಿ ಕೇಳಿ ಬರಲಿದೆ. ಭಕ್ತಾದಿಗಳು ಆಗಮಿಸಿ ಯಲಗುರೇಶನ ಕೃಪೆಗೆ ಪಾತ್ರರಾಗಿ ಕಾರ್ತಿಕೋತ್ಸವ ಸಡಗರದ ಉತ್ಸಾಹಕ್ಕೆ ಇಂಬು ಕೊಟ್ಟು ಸರಳತೆಯಿಂದ ಸಹಕರಿಸಬೇಕು ಎಂದು ದೇವಸ್ಥಾನ ಕಮೀಟಿ ಅಧ್ಯಕ್ಷ ಅನಂತ ಓಂಕಾರ ಕೋರಿದ್ದಾರೆ

Leave a Reply

Your email address will not be published. Required fields are marked *

You May Also Like

ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಿ: ನೆಲಗುಡ್ಡದ

ಉತ್ತರಪ್ರಭ ಸುದ್ದಿಶಿರಹಟ್ಟಿ : ರೈತರ ಉತ್ಪನ್ನುಗಳಿಗೆ ಲಾಭದಾಯಕ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ…

ಮಕ್ಕಳಿಗೆ ಸನ್ಮಾರ್ಗದ ದಾರಿ ತೋರಿ- ತೋಂಟದ ಶ್ರೀ

ಶಿಕ್ಷಕರು ತಮ್ಮಲ್ಲಿನ ಅನುಭವದ ಪಾಠ ಕೌಶಲ್ಯ ಹದಗೊಳಿಸಿಕೊಂಡು ವಿದ್ಯಾರ್ಥಿಗಳಿಗೆ ಸನ್ಮಾರ್ಗದ ದಾರಿಯಲ್ಲಿ ಮುನ್ನಡೆಸಬೇಕು ಎಂದು ಗದುಗಿನ ತೋಂಟದ ಡಾ. ಸಿದ್ದರಾಮ ಸ್ವಾಮೀಜಿಯವರ ಹೇಳಿದರು.

ಲಾಕ್ ಡೌನ್ ಅವಧಿ ವಿಸ್ತರಣೆ: ಜೂ.7ರವರೆಗೆ ಗದಗ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆ

ಜೂನ್ ಒಂದರವರೆಗೂ ಇದ್ದ ಲಾಕ್ ಡೌನ್ 7 ನೇ ತಾರೀಖಿನವರೆಗೂ ಮುಂದುವರಿಸಲಾಗುವುದು. ಕೆಲ ಸಡಿಲಿಕೆಯೊಂದಿಗೆ ಗದಗ ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರಿಕೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು.

ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು: ಪರಬ

ಕಾಡು ಬೆಳೆಸಿ ನಾಡು ಉಳಿಸಿ ಎಂಬ ವಾಖ್ಯೆದಂತೆ ಪ್ರತಿಯೊಬ್ಬರು ಗಿಡಗಳನ್ನು ಬೆಳೆಸಿ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಪಪಂ ಅಧ್ಯಕ್ಷ ಪರಮೇಶ ಪರಬ ಹೇಳಿದರು.