ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸ್ಥಳೀಯ ಮತ್ತು ಇನ್ನೂಳಿದ ವೃಂದಗಳ ಪೊಲೀಸ್  ಸಬ್‌ಇನ್ಸ್ಪೆಕ್ಟರ್ (ಸಿವಿಲ್) (ಪುರುಷ, ಮಹಿಳೆ ಮತ್ತು ಸೇವೆಯಲ್ಲಿರುವವರು) ಒಟ್ಟು 545 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಖಾಲಿ ಹುದ್ದೆಗಳ ವರ್ಗೀಕರಣ ಹಾಗೂ ಅರ್ಹತಾ ಷರತ್ತುಗಳಿಗೆ ಅಧಿಕೃತ ವೆಬ್‌ಸೈಟ್ www.recruitment.ksp.gov.in ನಲ್ಲಿನ ಅಧಿಸೂಚನೆ ಗಮನಿಸಬಹುದು.

ಫೆ.22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಅಧಿಕೃತ ಬ್ಯಾಂಕ್ ಶಾಖೆಗಳ, ಅಂಚೆ ಕಚೇರಿಯಲ್ಲಿ ಶುಲ್ಕವನ್ನು ಪಾವತಿಸಲು ಫೆ.24 ಕೊನೆಯ ದಿನವಾಗಿದೆ. ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ 500 ರೂ., ಪ.ಜಾ, ಪ.ಪಂ ಹಾಗೂ ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ 250 ರೂ. ಶುಲ್ಕ ಪಾವತಿಸಬೇಕಿದೆ.

Leave a Reply

Your email address will not be published. Required fields are marked *

You May Also Like

ಖಾಸಗಿ‌ ಶಾಲಾ ಶಿಕ್ಷಕರ ನೆರವಿಗೆ ಸರ್ಕಾರಿ ಶಿಕ್ಷಕರಿಗೆ ಮನವಿ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರು ತಮ್ಮ ಒಂದು ಅಥವಾ ಎರಡು ದಿನದ ಸಂಬಳವನ್ನು…

ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ ಆಯ್ಕೆ

ಮುಳಗುಂದ : ಇಲ್ಲಿನ ವೀರರಾಣಿ ಕಿತ್ತೂರ ಚನ್ನ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಣ್ಣ ಕಮಾಜಿ,…

ಸಸಿ ವಿತರಿಸಿದ ಅರಣ್ಯಾಧಿಕಾರಿ

ಈಗಾಗಲೇ ಮುಂಗಾರು ಹಂಗಾಮು ಆರಂಭವಾಗಿದ್ದು, ಸಸಿಗಳನ್ನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಕೊಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಸಿದ್ದರಾಮ ವಿಭೂತಿ ಹೇಳಿದರು.

ಉಸಿರಾಟ ತೊಂದರೆಯಿಂದ ನಟ ಚಿರಂಜೀವಿ ಸರ್ಜಾ ಸಾವು..!

ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆ ಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದರು.