ವರದಿ : ಗುಲಾಬಚಂದ ಜಾಧವ
ಆಲಮಟ್ಟಿ : ಹಿಂದು ಸಂಪ್ರದಾಯದ ಅತ್ಯಂತ ಪವಿತ್ರ ಹಬ್ಬ ಮಹಾ ಶಿವರಾತ್ರಿ ನಿಮಿತ್ಯ ಇಲ್ಲಿನ ರಾಮಲಿಂಗೇಶ್ನರ ದೇಗುಲದಲ್ಲಿ ಪೂಜಾ ಕೈಂಕರ್ಯಗಳು ಭಕ್ತಿಪೂರ್ವಕವಾಗಿ ಶನಿವಾರ ನಡೆದವು. ಹಾಗೂ ಸಮೀಪದ ದೇವಲಾಪುರ ಬಳಿ ಕೃಷ್ಣಾ ಭಾಗ್ಯ ಜಲ ನಿಗಮ ಅರಣ್ಯ ಇಲಾಖೆ ವತಿಯಿಂದ ನಿಮಿ೯ಸಿರುವ ಸತ್ಯಂ ಶಿವಂ ಸುಂದರಂ ಬಸವ ಉದ್ಯಾನಕ್ಕೆ (ನಿಡಗುಂದಿ ಪೋಲೀಸ್ ಠಾಣೆ ಎದುರು) ಜನ ಬೆಳಿಗ್ಗೆಯಿಂದಲೇ ಲಗ್ಗೆಯಿರಿಸಿ ಗಾರ್ಡನ್ ದಲ್ಲಿನ ಬ್ರಹತ್ ಶಿವನ ಮೂತಿ೯ಯ ದರ್ಶನ ಪಡೆದರು. ಉದ್ಯಾನದಲ್ಲಿನ ಶಿವನ ಮೂತಿ೯ವೀಕ್ಷಿಸಲು ವಿವಿಧೆಡೆಯಿಂದ ಸಾವಿರಾರು ಜನ ಆಗಮಿಸಿದ್ದರು. ಶಿವನ ಮೂತಿ೯ಗೆ ಕೈಮುಗಿದು ನಮಿಸಿ ಧನ್ಯತೆ ಮೆರೆದರು.

ಅಪಾರ ಭಕ್ತರು ಈ ಉದ್ಯಾನಕ್ಕೆ ಭೇಟಿ ನೀಡಿ ಮಹಾದೇವನ ಕೃಪೆಗೆ ಪಾತ್ರರಾದರು. ಸುತ್ತಮುತ್ತಲಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿವನ ಮೂತಿ೯ಯ ಸನ್ನಿಧಿಯಲ್ಲಿ ಸೇರಿದ್ದರು. ಸಂಜೆ ವೇಳೆ ಭಕ್ತರ ಆಗಮನ ಹೆಚ್ಚಳವಾಯಿತು. ಶಿವನ ಸ್ಮರಣೆಯಲ್ಲಿ ಭಕ್ತಗಣ ಮಿಂದೆದ್ದಿತ್ತು.ವಿಶೇಷ ಪೂಜೆ,ಪುರಸ್ಕಾರದಲ್ಲಿ ತನ್ಮಯರಾಗಿದ್ದರು. ಮಹಾ ಶಿವರಾತ್ರಿ ಸಡಗರ ಇಲ್ಲಿ ಮನೆ ಮಾಡಿತ್ತು. ಹಲವಾರು ಜನ ದಿನವಿಡಿ ಆಹಾರ ಸೇವಿಸದೇ ಉಪವಾಸ ವೃತ ಆಚರಿಸಿದರು. ಶಿವ ಧ್ಯಾನದಲ್ಲಿಂದು ಹೆಚ್ಚು ಕಡಿಮೆ ಜನತೆ ಮೊಳಗಿದ್ದರು. ಪವಿತ್ರ ಭಾವದಿಂದ ಈಶ್ವರನನ್ನು ಆರಾಧಿಸಿ ಪೂನೀತಭಾವ ತಾಳಿದರು.

ಆತ್ಮ ಪರಿಶುದ್ಧಿಗಾಗಿ, ಮನಸ್ಸಿನ ಕೊಳೆ ತೊಲಗಿಸಿಕೊಳ್ಳುವ ನಿಟ್ಟಿನಲ್ಲಿ ಶಿವರಾತ್ರಿ ಸಮಯದಲ್ಲಿ ಶಿವನನ್ನು ಆರಾಧಿಸಿ ಆ ಮೂಲಕ ಭಗವಂತನ ಅನುಗ್ರಹ ಪಡೆಯುತ್ತಾರೆ ಹಾಗೂ ಇಷ್ಟಾರ್ಥಗಳು ಈಡೇರುತ್ತವೆ ಎಂಬ ಐತಿಹ್ಯವುಳ್ಳ ಪ್ರತೀತ ಹಿನ್ನೆಲೆಯಲ್ಲಿ ಶಿವನ ಸ್ಮರಣೆಯಲ್ಲಿ ಅಸಂಖ್ಯ ಜನತೆ ತನ್ಮಯರಾಗಿ ಏಕಾಗ್ರತೆಯಿಂದ ನೀಲಕಂಠನನ್ನು ಪೂಜಿಸುತ್ತಾರೆ.ಆ ನಿಟ್ಟಿನಲ್ಲಿ ಶಾಂತ ಮನಸ್ಸನ್ನು ಇರಿಸಿಕೊಳ್ಳಲು ಜನಸ್ತೋಮ ಬಯಸುತ್ತಾರೆ ಎಂದು ಯೋಗಪಟು ಗಂಗಾಧರ ಹಿರೇಮಠ ನುಡಿದರು.