ಬೆಂಗಳೂರು: ವಾಟ್ಸಾಪ್ ಬಳಕೆದಾರರಿಗೆ ಹೊಸ ಮಾಹಿತಿಯೊಂದು ಇಲ್ಲಿದೆ. ವಾಟ್ಸಾಪ್ ಬಳಕೆದಾರರು ಸ್ಮಾರ್ಟ ಫೋನ್ ಗಳಲ್ಲಿ ವಾಟ್ಸಾಪ್ ಲಾಗೌಟ್ ಮಾಡಬಹುದಾಗಿದೆ. ಈ ಮೂಲಕ ಫೇಸ್ಬುಕ್ ಒಡೆತನದ ವಾಟ್ಸಾಪ್ ಸಂಸ್ಥೆ ವಾಟ್ಸಾಪ್ ಖಾತೆ ಡಿಲೀಟ್ ಆಯ್ಕೆಯನ್ನು ತೆಗೆದು ಹಾಕಿದ್ದು, ಇನ್ಮುಂದೆ ಫೇಸ್ಬುಕ್, ಇನ್ಸ್ಟಾಗ್ರಾಂನಂತೆಯೇ ವಾಟ್ಸಾಪ್ ನಿಂದಲೂ ಲಾಗೌಟ್ ಮಾಡಬಹುದಾಗಿದೆ.
ಶೀಘ್ರದಲ್ಲಿಯೇ ಡಿಲೀಟ್ ಅಕೌಂಟ್ ಎಂಬ ಆಯ್ಕೆಯನ್ನ ತೆಗೆದು ಲಾಗೌಟ್ ಆಯ್ಕೆಯನ್ನ ನೀಡಲಿದ್ದೇವೆ ಎಂದು ವಾಟ್ಸಾಪ್ ಸಂಸ್ಥೆ ತಿಳಿಸಿದೆ. ಐಓಎಸ್ ಹಾಗೂ ಆಂಡ್ರಾಯ್ಡ್ ಗಳೆರಡಲ್ಲಿ ಈ ಆಯ್ಕೆ ಸಿಗಲಿದೆ ಎಂದು ತಿಳಿದೆ. ಇದರ ಜೊತೆಯಲ್ಲಿ ವಾಟ್ಸಾಪ್ ಮಲ್ಟಿ ಡಿವೈಸ್ ಸಪೋರ್ಟ್ ಎಂಬ ಇನ್ನೊಂದು ಆಯ್ಕೆಯನ್ನ ತರೋಕೆ ಸಿದ್ಧತೆ ನಡೆಸುತ್ತಿದೆ. ಈ ಹೊಸ ಆಯ್ಕೆಯಿಂದಾಗಿ ಬಳಕೆದಾರರು ಒಂದೇ ವಾಟ್ಸಾಪ್ ಖಾತೆಯನ್ನ ಎರಡ್ಮೂರು ಕಡೆ ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಸಮಸ್ಯೆಗಳ ಕುರಿತು ಪ್ರತ್ಯೇಕ ಸಾರಿಗೆ ಇಲಾಖೆಯ ಸಹಾಯವಾಣಿ : ಲಕ್ಷ್ಮಣ ಸವದಿ

ಬೆಂಗಳೂರು: ಕೋವಿಡ್ ತಡೆಯುವ ಉದ್ದೇಶದಿಂದ ಸಾರಿಗೆ ಸೇವೆ, ಆಂಬ್ಯುಲೆನ್ಸ್ ಸೇವೆ ಮತ್ತು ಚಾಲಕರಿಗೆ ಸರಕಾರ ಘೋಷಿಸಿರುವ ಪರಿಹಾರ ಇತ್ಯಾದಿಗಳ ಕುರಿತಂತೆ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸಲು ಸಾರಿಗೆ ಇಲಾಖೆ ಪ್ರತ್ಯೇಕ ಸಹಾಯವಾಣಿಯನ್ನು ಆರಂಭಿಸಿದೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ರದ್ದು

ಮೀಸಲು ಕಲ್ಪಿಸುವ ವೇಳೆ ರೊಟೇಷನ್ ನಿಯಮ ಪಾಲನೆಯಾಗಿಲ್ಲ. ಆದ್ದರಿಂದ, ನಾಲ್ಕು ವಾರಗಳ ಒಳಗೆ ರೊಟೇಷನ್ ಪದ್ಧತಿ ಅನುಸಾರ ಮೀಸಲಾತಿ ಕಲ್ಪಿಸಿ ಮರು ಅಧಿಸೂಚನೆ ಹೊರಡಿಸಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಿರುವ ಹೈಕೋರ್ಟ್, ಇತ್ತೀಚೆಗಷ್ಟೇ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆಯಾಗಿದ್ದವರಿಗೆ ಬಿಗ್ ಶಾಕ್ ನೀಡಿದೆ.

ಫೆ. 24ರಿಂದ ಮುಳಗುಂದ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ

ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ 162 ನೇ ಸ್ಮರಣೋತ್ಸವದಂಗವಾಗಿ ಇದೇ ಫೆ 24 ರಿಂದ 26 ವರೆಗೆ ಗವಿಮಠಾಧ್ಯಕ್ಷರಾದ ಮಲ್ಲಿಕಾರ್ಜುನ ಶ್ರೀಗಳ ನೇತ್ರತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ, ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸಂಜಯ ನೀಲಗುಂದ ಹೇಳಿದರು.

ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡಿ

ಮೈಸೂರು: ರಾಜ್ಯದ ಎಸ್.ಟಿ ಕಾರ್ಯಕಾರಿ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂದು ಎಸ್.ಟಿ ಸಮುದಾಯ ಒತ್ತಾಯಿಸಿದರು.