ಪಶ್ಚಿಮ ಬಂಗಾಳ: ದೇಶದೆಲ್ಲೆಡೆ ಟೂಲ್‌ಕಿಟ್, ರೈತರ ಪ್ರತಿಭಟನೆ, ಪೆಟ್ರೋಲ್ ದರ ಏರಿಕೆ ಸುದ್ದಿಯಾಗುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಘೋಷಣೆಗಳ ರಾಜಕೀಯ ನಡೆಯುತ್ತಿದೆ. ಚುನಾವಣೆ ಎದುರು ನೋಡುತ್ತಿರುವ ಪಶ್ಚಿಮ ಬಂಗಾಳದಲ್ಲಿ ಈಗಲೇ ಬಿಜೆಪಿ ಮತ್ತು ಆಡಳಿತರೂಢ ಟಿಎಂಸಿ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ಸೆಳೆಯಲು ಘೋಷಣೆಗಳ ಮೊರೆ ಹೋಗಿದ್ದಾರೆ.

ಜೈಕಾಳಿಮಾ ಗೆ ಬದಲಾದ ಬಿಜೆಪಿ ಘೋಷಣೆ

ಬಿಜೆಪಿಯು ಬೇರೆ ರಾಜ್ಯಗಳಲ್ಲಿ ಹೇಳಿದಂತೆ ಡಬಲ್ ಇಂಜಿನ್ ಸರ್ಕಾರ ಘೋಷಣೆಯನ್ನು ಪಶ್ಚಿಮ ಬಂಗಾಳದಲ್ಲಿಯೂ ಪ್ರಯೋಗಿಸಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿದ್ದರೆ ಅಭಿವೃದ್ದಿ ವೇಗವಾಗಿ ಸಾಗುತ್ತದೆ ಎಂಬ ಪ್ರಯೋಗವನ್ನು ಬಿಜೆಪಿ ಪಶ್ಚಿಮ ಬಂಗಾಳದಲ್ಲಿಯೂ ನಡೆಸಲು ಪ್ರಯತ್ನಿಸುತ್ತಿದೆ.

ಇದಕ್ಕೂ ಮೊದಲು ಜೈಶ್ರೀರಾಮ್ ಎಂಬ ಘೋಷಣೆ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಚುನಾವಣೆಯ ನಂತರ ಮಮತಾ ಬ್ಯಾನರ್ಜಿಯ ಬಾಯಿಂದ ಜೈಶ್ರೀರಾಮ್ ಎಂದು ಹೇಳಿಸಿಯೇ ತೀರುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸವಾಲು ಹಾಕಿದ್ದರು. ಈಗ ಟಿಎಂಸಿ ನಾಯಕರು ಬಿಜೆಪಿಯ ಘೋಷಣೆಗಳಿಗೆ ಉತ್ತರ ನೀಡಲು ಮುಂದಾಗಿದ್ದಾರೆ.

ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಮಾತನಾಡಿ, ಮಮತಾ ಬ್ಯಾನರ್ಜಿ ಎಂಬ 5 ಅಡಿ 2 ಇಂಚು ಎತ್ತರದ ಸಿಂಗಲ್ ಇಂಜಿನ್ ಅನ್ನು ಸೋಲಿಸಲು, ದೆಹಲಿ, ಗುಜರಾತ್ ಮಧ್ಯಪ್ರದೇಶದಿಂದ 500 ಇಂಜಿನ್‌ಗಳನ್ನು ತರಿಸಬೇಕಾದ ಅಗತ್ಯತೆ ಬಿಜೆಪಿಗೆ ಇದೆ. ಇನ್ನು ಯಾವ ಡಬಲ್ ಇಂಜಿನ್ ಬಗ್ಗೆ ಮಾತನಾಡುತ್ತಿದ್ದೀರಾ? ಎಂದು ವ್ಯಂಗ್ಯವಾಡಿದ್ದಾರೆ.

ಪ.ಬಂಗಾಳ ; ಶ್ರೀರಾಮನಿಗೂ ತೋರಿದ ಅಗೌರವ

ಇನ್ನು ಜೈ ಶ್ರೀರಾಮ್ ಘೋಷಣೆಗೆ ಉತ್ತರ ನೀಡಿರುವ ಅಭಿಷೇಕ್ ಅವರು, ಗುಜರಾತ್‌ನಿಂದ ಬಂದವರು, ಬಂಗಾಳದ ಮಗಳನ್ನು ಅವಮಾನಿಸುವರೇ. ಮಮತಾ ಬ್ಯಾನರ್ಜಿ ಬಾಯಿಂದ ಜೈ ಶ್ರೀರಾಮ್ ಹೇಳಿಸುವ ಸವಾಲು ಹಾಕಿರುವ ಅಮಿತ್ ಶಾ ಅವರೇ, ನಿಮ್ಮ ಬಾಯಿಂದ ನಾವು ಜೈ ಸಿಯಾ ರಾಮ್ ಘೋಷಣೆಯನ್ನು ಹೇಳಿಸುತ್ತೇವೆ. ಜೈ ಸಿಯಾ ರಾಮ್ ಎಂದರೆ, ಸೀತಾ ಮಾತೆಗೂ, ಶ್ರೀರಾಮನಿಗೂ ಜಯಘೋಷ ಹಾಕಿದಂತೆ, ಎಂದಿದ್ದಾರೆ.

ಬಿಜೆಪಿಯ ಜೈ ಶ್ರೀರಾಮ್ ಘೋಷಣೆಗೆ  ಜೈ ಸಿಯಾ ರಾಮ್ ಎಂದು ಉತ್ತರಿಸಿದ ಟಿಎಂಸಿ. ಪಶ್ಚಿಮ ಬಂಗಾಳ ಚುನಾವಣೆಗೆ ಐದು ರಥ ಯಾತ್ರೆಗಳನ್ನು ನಡೆಸಲಿರುವ ಬಿಜೆಪಿ ಜೈ ಸಿಯಾ ರಾಮ್ ಎಂಬ ಘೋಷಣೆಯೇ ಮೂಲ ಘೋಷಣೆಯಾಗಿತ್ತು. ಇದನ್ನು ಪುರುಷ ಪ್ರಧಾನವಾಗಿಸಲು ಜೈ ಶ್ರೀರಾಮ್ ಎಂದು ಬದಲಾಯಿಸಲಾಯಿತು. ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ನಾವು ಕಲಿಸಿಕೊಡುತ್ತೇವೆ. ಇಲ್ಲಿ ಮಹಿಳೆಯರನ್ನು ದುರ್ಗೆಯಂತೆ ಕಾಣುತ್ತಾರೆ. ಇದು ಪಶ್ಚಿಮ ಬಂಗಾಳದ ಸಂಸ್ಕೃತಿ. ನಿಮಗೆ ಇದನ್ನು ಕಲಿಸದೇ ತೀರುವುದಿಲ್ಲ ಎಂದು ಅಭಿಷೇಕ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ಅಂದು ವಿಶ್ವ ಕಪ್ ತಂದು ಕೊಟ್ಟ ತಂಡದಲ್ಲಿ ಕ್ರಿಕೆಟಿಗ ಯಶ್ ಪಾಲ್ ಇನ್ನಿಲ್ಲ!

ನವದೆಹಲಿ: 1983 ರಲ್ಲಿ ಭಾರತ ತಂಡ ವಿಶ್ವ ಕಪ್ ತನ್ನ ಮುಡಿಗೇರಿಸಿಕೊಂಡಿತ್ತು. ಇದು ಭಾರತದ ಕ್ರೀಕೆಟ್ ಇತಿಹಾಸದಲ್ಲಿ ಮಹತ್ವದ ವರ್ಷವಾಗಿತ್ತು. ಕ್ರೀಕೆಟ್ ಇತಿಹಾಸದಲ್ಲಿ ಭಾರತಕ್ಕೊಂದು ಮೈಲುಗಲ್ಲಾದ 1983 ರ ವಿಶ್ವಕಪ್ ಪಡೆದ ತಂಡದ ಸದಸ್ಯರೊಬ್ಬರು ನಿಧನ ಹೊಂದಿದ್ದಾರೆ. ಹೌದು, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯಶ್ ಪಾಲ್ ಶರ್ಮಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಪಂಜಾಬ್ ಹಾದಿ ಹಿಡಿದು ಕೇಂದ್ರದ ವಿರುದ್ಧ ನಿಂತ ರಾಜಸ್ಥಾನ್ ಸರ್ಕಾರ!

ಜೈಪುರ : ಕೃಷಿ ಮಸೂದೆಯನ್ನು ಪಂಜಾಬ್ ಸರ್ಕಾರ ವಿರೋಧಿಸಿದ ಬೆನ್ನಲ್ಲಿಯೇ ರಾಜಸ್ಥಾನ್ ಸರ್ಕಾರ ಕೂಡ ಅಪಸ್ವರ ಎತ್ತಿದೆ.

ದೇಶದಲ್ಲಿ 25 ಗಂಟೆಗಳಲ್ಲಿ 73,272 ಪಾಸಿಟಿವ್ ಪ್ರಕರಣಗಳು ಪತ್ತೆ!

ದೇಶದಲ್ಲಿ ಕೊರೊನಾ ಅಟ್ಟಹಾಸ ಎಗ್ಗಿಲ್ಲದೆ ಸಾಗುತ್ತಿದೆ. ಕಳೆದ 25 ಗಂಟೆಗಳಲ್ಲಿ 73,272 ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 69,79,424ಕ್ಕೆ ಏರಿಕೆ ಕಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ರಾಯಚೂರು ಜಿಲ್ಲಾ ನ್ಯಾಯಾದೀಶನ ಅಮಾನತ್ತಿಗೆ ಒತ್ತಾಯ

ವರದಿ: ವಿಠಲ ಕೆಳೂತ್ ಮಸ್ಕಿ: ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.‌ಬಿ. ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ…