ನವದೆಹಲಿ: 1983 ರಲ್ಲಿ ಭಾರತ ತಂಡ ವಿಶ್ವ ಕಪ್ ತನ್ನ ಮುಡಿಗೇರಿಸಿಕೊಂಡಿತ್ತು. ಇದು ಭಾರತದ ಕ್ರೀಕೆಟ್ ಇತಿಹಾಸದಲ್ಲಿ ಮಹತ್ವದ ವರ್ಷವಾಗಿತ್ತು. ಕ್ರೀಕೆಟ್ ಇತಿಹಾಸದಲ್ಲಿ ಭಾರತಕ್ಕೊಂದು ಮೈಲುಗಲ್ಲಾದ 1983 ರ ವಿಶ್ವಕಪ್ ಪಡೆದ ತಂಡದ ಸದಸ್ಯರೊಬ್ಬರು ನಿಧನ ಹೊಂದಿದ್ದಾರೆ. ಹೌದು, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಯಶ್ ಪಾಲ್ ಶರ್ಮಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

1983 ರಲ್ಲಿ ನಡೆದ ವಿಶ್ವಕಪ್ ಆಡಿದ ತಂಡದಲ್ಲಿ ಯಶ್ ಪಾಲ್ ಕೂಡ ಒಬ್ಬರಾಗಿದ್ದರು. ಇವರು 1979ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಕ್ರಿಕೆಟ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದರು.


ಭಾರತ ಕ್ರಿಕೇಟ್ ತಂಡಕ್ಕೆ ಯಶ್ ಪಾಲ್ ಕೊಡುಗೆ ಅಪಾರವಾಗಿದೆ. ಅಂದು ಭಾರತ ವಿಶ್ವ ಕಪ್ ಗೆಲ್ಲಲು ಯಶ್ ಪಾಲ್ ಅವರ ಪಾಲು ಕೂಡ ಮಹತ್ವದ್ದಾಗಿತ್ತು.


ಪಂಜಾಬ್ ನವರಾದ ಯಶ್ ಪಾಲ್, ಭಾರತ ಕ್ರಿಕೇಟ್ ತಂಡದಲ್ಲಿ ಮದ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಆಗಿದ್ದರು. ಭಾರತ ಪರ 37 ಒಂಡೇ ಹಾಗೂ 42 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ರಾಷ್ಟ್ರೀಯ ಕ್ರಿಕೆಟ್ ತಂಡದ ಸದಸ್ಯರಾಗಿಯೂ ಯಶ್ ಪಾಲ್ ಕಾರ್ಯ ನಿರ್ವಹಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

800 ಕಿ.ಮೀ ದೂರ ತೆರಳಿ ದೂರು ದಾಖಲಿಸಿದ ಅತ್ಯಾಚಾರ ಸಂತ್ರಸ್ತೆ!

ಅತ್ಯಾಚಾರಕ್ಕೆ ಒಳಗಾದ ಮಹಿಳೆಯೊಬ್ಬರು ಬರೋಬ್ಬರಿ 800 ಕಿ.ಮೀ ಪ್ರಯಾಣಿಸಿ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ.

ದೇಶ ಉದ್ಧೇಶಿಸಿ ಮಾತನಾಡಿದ ಪ್ರಧಾನಿ ಮೋದಿ! ಈ ಭಾಷಣದಲ್ಲಿ ಏನು ಹೇಳಿದರು?

ನವದೆಹಲಿ : ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾಗಿರುವ ಸಂತಸ ಹಂಚಿಕೊಂಡಿದ್ದಾರೆ.

ಯಮನೂರಪ್ಪನ ಉರಸು ಸಂಭ್ರಮ

ಮಸ್ಕಿ: ಇಲ್ಲಿನ ವಾಲ್ಮೀಕಿ ನಗರದಲ್ಲಿನ‌ ಯಮನೂರಪ್ಪನ ಉರಸು ಮೆರವಣಿಗೆ ನಡೆಸಿ ಸಂಭ್ರಮಿಸಲಾಯಿತು. 32ನೇ ವರ್ಷದ ಯಮನೂರಪ್ಪನ…

ಆಲಮಟ್ಟಿ: 75 ರ ಉತ್ಸವ ಚಿಣ್ಣರ ಸಂಭ್ರಮ..!

ಆಲಮಟ್ಟಿ: ಈಗ ದೇಶಭಕ್ತಿಯ ಪ್ರೇಮಾಂಕುರದಲ್ಲಿ ಪುಟಾಣಿ ಚಿಣ್ಣರು ಸಹ ಮಿಂದೆದ್ದು ಉಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. 75 ನೇ…