ಜೈಪುರ : ಕೃಷಿ ಮಸೂದೆಯನ್ನು ಪಂಜಾಬ್ ಸರ್ಕಾರ ವಿರೋಧಿಸಿದ ಬೆನ್ನಲ್ಲಿಯೇ ರಾಜಸ್ಥಾನ್ ಸರ್ಕಾರ ಕೂಡ ಅಪಸ್ವರ ಎತ್ತಿದೆ.

ರಾಜಸ್ಥಾನ್ ಸಿಎಂ ಅಶೋಕ್ ಗೆಹ್ಲೋಟ್ ಈ ಕುರಿತು ಟ್ವೀಟ್ ಮಾಡಿದ್ದು, ಹೊಸ ಮಸೂದೆ ತರುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಇದೆ ವಿಚಾರವಾಗಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಪಂಜಾಬ್ ಸರ್ಕಾರ ಕೃಷಿ ಮಸೂದೆ ತಡೆಗೆ  ಅಧಿವೇಶನದಲ್ಲಿ ನಾಲ್ಕು ಮಸೂದೆಗಳನ್ನು ಮತ್ತು ನಿರ್ಣಯಗಳನ್ನು ಅಂಗೀಕರಿಸಿತ್ತು. ಇದರ ಬೆನ್ನಲ್ಲಿಯೇ ರಾಜಸ್ಥಾನ ಸರ್ಕಾರ ಕೂಡ ಈ ಬೆಳವಣಿಗೆಯ ನಡುವೆಯೇ ರಾಜಸ್ಥಾನ ಸರ್ಕಾರ ಕೂಡ ಕೇಂದ್ರದ ವಿರುದ್ಧ ನಿಂತಿದೆ. 

ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾನೂನುಗಳ ವ್ಯಾಪ್ತಿಯಿಂದ ರಾಜ್ಯಗಳನ್ನು ಹೊರಗಿಡಲು ಸಾಧ್ಯವಾಗುವಂತೆ ರಾಜ್ಯಮಟ್ಟದಲ್ಲಿ ಕಾನೂನು ರಚಿಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸುವಂತೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳ ಸಿಎಂಗಳಿಗೆ ಸಲಹೆ ನೀಡಿದ್ದರು. ಇದರ ಬೆನ್ನಲ್ಲಿಯೇ ಪಂಜಾಬ್ ಹಾಗೂ ರಾಜಸ್ಥಾನ್ ಸರ್ಕಾರಗಳು ಕೇಂದ್ರದ ವಿರುದ್ಧ ನಿಂತಿವೆ.

Leave a Reply

Your email address will not be published. Required fields are marked *

You May Also Like

4 ಮಕ್ಕಳ ತಾಯಿಯೊಂದಿಗೆ ಲವ್ ನಲ್ಲಿ ಬಿದ್ದ ವೈದ್ಯ, ಮುಂದೇನಾಯ್ತು?

ಲಕ್ನೋ : ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ನಾಲ್ಕು ಮಕ್ಕಳ ತಾಯಿಯೊಂದಿಗೆ ಲವ್ ನಲ್ಲಿ ಬಿದ್ದ ವೈದ್ಯ, ಅವಳನ್ನೇ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಉದ್ಧವ್ ಠಾಕ್ರೆ ಮನದಲ್ಲಿ ಮೂಡಿದ ನಿರಾಳ!

ಕೇಂದ್ರ ಚುನಾವಣಾ ಆಯೋಗವು ಮೇ. 27ರ ಒಳಗೆ ಮಹಾರಾಷ್ಟ್ರದ ವಿಧಾನ ಪರಿಷತ್ತಿಗೆ ಚುನಾವಣೆ ನಡೆಸಲು ಅನುಮತಿ ನೀಡಿದ್ದು, ಸಿಎಂ ಉದ್ದವ್ ಠಾಕ್ರೆಗೆ ಸಂತಸ ತಂದಿದೆ.

ಶ್ರೀಶೈಲಂ ಪವರ್ ಸ್ಟೇಷನ್ ನಲ್ಲಿ ಅಗ್ನಿ ಅವಘಡ!

ಶ್ರೀಶೈಲಂ ಪವರ್‌ ಸ್ಟೇಷನ್‌ನಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, 10 ಜನರನ್ನು ರಕ್ಷಿಸಲಾಗಿದೆ. ಅಲ್ಲದೇ, ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ 6 ಜನ ಶ್ರೀಶೈಲಂನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 9 ಜನ ಒಳಗೆ ಸಿಲುಕಿ ಹಾಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ತೆಲಂಗಾಣದ ನಾಗರ ಕರ್ನೂಲ್ ಜಿಲ್ಲೆಯಲ್ಲಿರುವ ಶ್ರೀಶೈಲಂ ಡ್ಯಾಂ ಕೆನೆಲ್ ನಲ್ಲಿ ಬೆಳಿಗ್ಗೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.

ರೈತರ ಬೆಂಬಲ ; ಫೆ.18 ರಂದು ರಾಜ್ಯಾದ್ಯಂತ ರೈಲು ತಡೆ ಚಳವಳಿ

ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ದೇಶಾದ್ಯಂತ ರೈಲು ತಡೆಗೆ ಕರೆ ನೀಡಿದ್ದು, ಈ ಕರೆಗೆ ಓಗೊಟ್ಟು ರಾಜ್ಯ ರೈತ ಸಂಘಟನೆಗಳು ರಾಜ್ಯದಾದ್ಯಂತ ರೈಲು ತಡೆ ಚಳವಳ ನಡೆಸಲಿದ್ದಾ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ ಹಾಗೂ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.