ಬೆಂಗಳೂರು: ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಶಾ ರವಿ ಬಂಧನವನ್ನು ಸಾಮಾಜಿಕ ಜಾಲತಾಣದ ಮೂಲಕ ನಟಿ ರಮ್ಯಾ ವಿರೋಧಿಸಿದ್ದಾರೆ. 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಜೈಲಿನಲ್ಲಿದ್ದಾರೆ. ಇದಕ್ಕೆ ನಾವೆಲ್ಲರು ಸಾಮೂಹಿಕವಾಗಿ ಜವಾಬ್ದಾರರಾಗುತ್ತೇವೆ. ಬಹಳ ದಿನಗಳಿಂದ ಇಂತಹ ಅನ್ಯಾಯವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಜವಾಬ್ದಾರಿಯುತ ನಾಗರಿಕರಾಗಿ ಇಂತಹ ಅನ್ಯಾಯಗಳ ಬಗ್ಗೆ ನಾವುಗಳು ಕೊನೆಯ ಬಾರಿ ಮಾತನಾಡಿದ್ದು ಯಾವಾಗ. ನಾವು ಜನರ ಶಕ್ತಿಯನ್ನು ಮರೆತಿದ್ದೇವೆಯೇ. ಈ ದೇಶ ನಮ್ಮದು ಎಂದು ನಾವು ಮರೆತಿದ್ದೇವೆಯೇ ಎಂದು ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರಶ್ನಿಸಿದ್ದಾರೆ.

ಅಭಿಪ್ರಾಯ ವ್ಯಕ್ತಪಡಿಸಿ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದವರನ್ನು ಜೈಲಿಗೆ ಹಾಕಲಾಗುತ್ತಿದೆ. ನಾವೆಲ್ಲರೂ ಒಂದುಗೂಡಿ ಅವರ ಪರ ನಿಂತು ಕಾಳಜಿವಹಿಸಿ, ನಾವು ನಿಮ್ಮ ಪರ ಇದ್ದೇವೆ ಎಂದು ತೋರಿಸುವ ಅಗತ್ಯವಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

You May Also Like

ಸರ್ಕಾರಿ ನೌಕರರು ಡಿ.31ರೊಳಗೆ ಆಸ್ತಿ ಹೊಣೆಗಾರಿಕೆ ಸಲ್ಲಿಸಲು ಸೂಚನೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆರ್ಥಿಕ ವರ್ಷದ ಬದಲಿಗೆ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಆಸ್ತಿ ಹೊಣೆಗಾರಿಕೆ ವಿವರಗಳನ್ನು ಸಲ್ಲಿಸುವಂತೆ ಆದೇಶ ಹೊರಡಿಸಿದೆ.

ಮೆಣಸಿನಕಾಯಿ ಬೆಳೆ ನಾಶಪಡಿಸಿದ ರೈತ

ಮೆಣಸಿನಕಾಯಿ ಬೆಳೆ ಬೆಳೆದು ನಿಂತ ಜಮೀನಿನಲ್ಲಿ ಕುರಿ ಹಾಗೂ ದನಕರುಗಳನ್ನು ಬಿಟ್ಟು ಬೆಳೆಯನ್ನು ನಾಶಪಡಿಸಲಾಗಿದೆ.

ಕೊರೊನಾ ಸೋಂಕಿತ ಇಬ್ಬರು ಗುಣಮುಖ : ಆಸ್ಪತ್ರೆಯಿಂದ ಬಿಡುಗಡೆ

ಕೊಪ್ಪಳ:ಕೋವಿಡ್-19 ಸೋಂಕಿನಿಂದ ಗುಣಮುಖರಾಗಿರುವ ಕೊಪ್ಪಳ ಜಿಲ್ಲೆಯ ಇಬ್ಬರನ್ನು ಇಂದು ಜಿಲ್ಲಾ ಆಸ್ಪತ್ರೆಯಿಂದ ಆರೋಗ್ಯ ಇಲಾಖೆಯ ತಂಡದಿಂದ…

ಪರಿಶಿಷ್ಟರ ಪಟ್ಟಿಗೆ ಸೇರಿದ ಪರಿವಾರ, ತಳವಾರ ಸಿದ್ದಿ ಸಮುದಾಯ: ಸರ್ಕಾರದಿಂದ ಗೆಜೆಟ್ ಆದೇಶ

ಬೆಂಗಳೂರು: ಪರಿವಾರ, ತಳವಾರ ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ರಾಜ್ಯ ಸರ್ಕಾರ ಗೆಜೆಟ್ ಆದೇಶ…