ಬೆಂಗಳೂರು: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆರ್ಥಿಕ ವರ್ಷದ ಬದಲಿಗೆ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಆಸ್ತಿ ಹೊಣೆಗಾರಿಕೆ ವಿವರಗಳನ್ನು ಸಲ್ಲಿಸುವಂತೆ ಆದೇಶ ಹೊರಡಿಸಿದೆ.

ಸರ್ಕಾರಿ ನೌಕರರು  ಪ್ರತಿ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಮಾರ್ಚ್ 31 ರೊಳಗೆ ಆಸ್ತಿಗಳ ಹೊಣೆಗಾರಿಕೆ ಪಟ್ಟಿ ಸಲ್ಲಿಸಬೇಕಿತ್ತು. ಆದರೆ, ಆರ್ಥಿಕ ವರ್ಷದ ಬದಲಿಗೆ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 31 ರೊಳಗೆ ಮಾಹಿತಿ ನೀಡಲು ತಿಳಿಸಲಾಗಿದೆ.

ಆದೇಶದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಆಸ್ತಿ ಹೊಣೆಗಾರಿಕೆ ವಿವರಗಳನ್ನು ಡಿಸೆಂಬರ್ 31 ರೊಳಗೆ ಸಲ್ಲಿಸಬೇಕು ಹಾಗು ಸರ್ಕಾರಿ ನೌಕರರು ಯಾವುದೇ ಸೇವೆ ಅಥವಾ ಹುದ್ದೆಗೆ ನೇಮಕವಾದ 3 ತಿಂಗಳೊಳಗೆ ತಮ್ಮ ಹೆಸರಿನಲ್ಲಿರುವ ಮತ್ತು ಕುಟುಂಬ ಸದಸ್ಯರಿಂದ ಬಂದ ಸ್ಥಿರಾಸ್ತಿ ಕುರಿತಾಗಿ ಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ.

Leave a Reply

Your email address will not be published. Required fields are marked *

You May Also Like

ಹಸಿರು ವಲಯಕ್ಕೂ ವಕ್ಕರಿಸಿದ ಕೊರೊನಾ!

ಕರ್ನಾಟಕಕ್ಕೆ ಕೊರೊನಾ ಎಂಟ್ರಿ ಕೊಟ್ಟರೂ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಅದರ ಆಟ ನಡೆದಿರಲಿಲ್ಲ. ಆದರೆ, ಒಂದೇ ದಿನ 8 ಪ್ರಕರಣಗಳು ದಾಖಲಾಗಿದ್ದು, ಜನರು ಆತಂಕದಲ್ಲಿ ಇದ್ದಾರೆ.

22ನೆ ಸ್ಥಾನದಲ್ಲಿ ಗದಗ ಜಿಲ್ಲೆ : ಕಲಾ ವಿಭಾಗದಲ್ಲಿ ಕಳಪೆ, ಪಿಯುಸಿ-2 ಫಲಿತಾಂಶ ವಿವರ

ಕಳೆದ ಬಾರಿ ಶೇ. 57ರಷ್ಟು ಫಲಿತಾಂಶ ಪಡೆದಿದ್ದ ಜಿಲ್ಲೆ ಈ ಬಾರಿ ಶೇ.63 ಸಾಧನೆ ಮಾಡಿದೆ. ಒಟ್ಟಾರೆ ಜಿಲ್ಲಾವಾರು ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ್ದು, 22 ನೆ ಸ್ಥಾನದಲ್ಲಿದೆ.

ರಾಜ್ಯದಲ್ಲಿಂದು 161 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ರಾಜ್ಯದಲ್ಲಿಂದು 161 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 5921 ಕ್ಕೆ ಏರಿಕೆಯಾದಂತಾಗಿದೆ. ಇದರಲ್ಲಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರ ಸಂಖ್ಯೆ 164. ಈ ಮೂಲಕ ಒಟ್ಟು ಈವರೆಗೆ ಬಿಡುಗಡೆ ಹೊಂದಿದವರ ಸಂಖ್ಯೆ 2605 ಕೇಸ್ ಗಳು. ಈ ಮೂಲಕ ರಾಜ್ಯದಲ್ಲಿ ಈವರೆಗೆ 3248 ಸಕ್ರೀಯ ಪ್ರಕರಣಗಳಿವೆ.

ಮಗುವಿಗಾಗಿ ಆಹಾರ ಅರಸಿದ ತಾಯಿ..! ಇದು ಮಂಗಗಳ ಮಂಕಿಬಾತ್!

ದೇಶದೊಳಗ ಲಾಕ್ ಡೌನ್ ಶುರುವಾಗಿ 42 ದಿನದ ಹೊತ್ತಾಯಿತು. ಇಂಥಾದ್ರಾಗ, ಬಾಯಿದ್ದ ಮನುಷಾರಾ ಅನ್ನಕ್ಕಾಗಿ ಬಾಯಿ ಬಿಡುವಂಗಾಗೈತಿ. ಪಾಪ ಆ ತಾಯಿ ಹೃದಯ ತನ್ನ ಮಗಿವಿನ ಅನ್ನಕ್ಕಾಗಿ ಎಷ್ಟು ಪರದಾಡ್ತು ಅಂತಿರಿ. ಈ ದೃಷ್ಯ ಎಂಥವರ ಕರಳು ಹಿಂಡುತ್ತೆ..!