ಬೆಂಗಳೂರು: ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಶಾ ರವಿ ಬಂಧನವನ್ನು ಸಾಮಾಜಿಕ ಜಾಲತಾಣದ ಮೂಲಕ ನಟಿ ರಮ್ಯಾ ವಿರೋಧಿಸಿದ್ದಾರೆ. 21 ವರ್ಷದ ಪರಿಸರ ಕಾರ್ಯಕರ್ತೆ ದಿಶಾ ರವಿ ಜೈಲಿನಲ್ಲಿದ್ದಾರೆ. ಇದಕ್ಕೆ ನಾವೆಲ್ಲರು ಸಾಮೂಹಿಕವಾಗಿ ಜವಾಬ್ದಾರರಾಗುತ್ತೇವೆ. ಬಹಳ ದಿನಗಳಿಂದ ಇಂತಹ ಅನ್ಯಾಯವನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿಯುತ ನಾಗರಿಕರಾಗಿ ಇಂತಹ ಅನ್ಯಾಯಗಳ ಬಗ್ಗೆ ನಾವುಗಳು ಕೊನೆಯ ಬಾರಿ ಮಾತನಾಡಿದ್ದು ಯಾವಾಗ. ನಾವು ಜನರ ಶಕ್ತಿಯನ್ನು ಮರೆತಿದ್ದೇವೆಯೇ. ಈ ದೇಶ ನಮ್ಮದು ಎಂದು ನಾವು ಮರೆತಿದ್ದೇವೆಯೇ ಎಂದು ಫೇಸ್‌ಬುಕ್ ಪೋಸ್ಟ್ ಮೂಲಕ ಪ್ರಶ್ನಿಸಿದ್ದಾರೆ.
ಅಭಿಪ್ರಾಯ ವ್ಯಕ್ತಪಡಿಸಿ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ್ದವರನ್ನು ಜೈಲಿಗೆ ಹಾಕಲಾಗುತ್ತಿದೆ. ನಾವೆಲ್ಲರೂ ಒಂದುಗೂಡಿ ಅವರ ಪರ ನಿಂತು ಕಾಳಜಿವಹಿಸಿ, ನಾವು ನಿಮ್ಮ ಪರ ಇದ್ದೇವೆ ಎಂದು ತೋರಿಸುವ ಅಗತ್ಯವಿದೆ ಎಂದಿದ್ದಾರೆ.
