ನವದೆಹಲಿ: ಕೇಂದ್ರಾಡಳಿತ ಪ್ರದೇಶ ಕಾಶ್ಮೀರಕ್ಕೆ ವಿದೇಶಿ ಪ್ರತಿನಿಧಿಗಳ ನಿಯೋಗದ ಭೇಟಿಯ ಬೆನ್ನಲ್ಲೆ ಕಣಿವೆಯಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿ ಆತಂಕ ಹುಟ್ಟಿಸಿದೆ.

ರಜೌರಿ ಜಿಲ್ಲೆಯ ಮಂಜಾಕೋಟ್‍ ಹೆದ್ದಾರಿಯಲ್ಲಿ ಈ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಹೆದ್ದಾರಿಗುಂಟ ಹೈ ಅಲರ್ಟ್ ಘೋಸಿಸಲಾಗಿದೆ. ಕಟ್ಟಿಗೆಯ ಬಾಕ್ಸ್‍ ನಲ್ಲಿ ಅಡುಗೆಗೆ ಬಳಸುವ ಕುಕ್ಕರ್ ರೀತಿಯ ಪಾತ್ರೆ ಇಡಲಾಗಿದೆ. ಬುಧವಾರ ಬೆಳಗ್ಗೆ ಈ ಘಟನೆ ವರದಿಯಾಗಿದ್ದು, ಸ್ಥಳದಲ್ಲಿ ಬಾಂಬ್‍ ನಿಷ್ಕ್ರಿಯ ದಳ ಹಾಗೂ ಭದ್ರತಾ ಪಡೆಗಳು ಜಮಾಯಿಸಿವೆ.

ವಸ್ತು ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ಹೆದ್ದಾರಿ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ನಾಕಾಬಂಧಿ ಹಾಕಲಾಗಿದೆ. ಸಧ್ಯ ತನಿಖೆ ಮುಂದುವರಿದಿದ್ದು, ಇದೊಂದು ಭಯೋತ್ಪಾದಕರ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.

2019 ರ ಫೆಬ್ರವರಿಯಲ್ಲಿ ಪುಲ್ವಾಮಾ ಬಳಿಯ ಹೆದ್ದಾರಿಯಲ್ಲಿ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಿ ಮಾರಣಹೋಮ ನಡೆಸಿದ್ದರು. ಹೀಗಾಗಿ ಕಣಿವೆಯ ರಸ್ತೆಗಳಲ್ಲಿ ಸಣ್ಣ ವಸ್ತು ಪತ್ತೆಯಾದರೂ ಭೀತಿಗೊಳಗಾಗುವಂತೆ ಮಾಡಿದೆ.

ಇಂದು ಬೆಳಗ್ಗೆ ಶ್ರೀನಗರಕ್ಕೆ 24 ರಾಷ್ಟ್ರಗಳ ವಿದೇಶಿ ಪ್ರತಿನಿಧಿಗಳ ನಿಯೋಗ ಭೇಟಿ ನೀಡಿದ್ದು, ಸ್ಥಳೀಯರೊಂದಿಗೆ ಸಂವಾದ ನಡೆಸಿದೆ. ನಿಯೋಗ ಬುದ್ಗಾಂ ಜಿಲ್ಲೆಯ ಮಾಗಮ್‍ ಬ್ಲಾಕ್ ನಲ್ಲಿ ಸ್ಥಳೀಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿತು. ಪಂಜಾಯತ್‍ ರಾಜ್ ವ್ಯವಸ್ಥೆ ಹಾಗೂ ಕುಂದುಕೊರತೆಗಳನ್ನು ಅಧಿಕಾರಿಗಳಿಗೆ ತಿಳಿಸುವ ವ್ಯವಸ್ಥೆ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡಲಾಯಿತು.  

Leave a Reply

Your email address will not be published. Required fields are marked *

You May Also Like

ಗರಿಷ್ಠ ಮಟ್ಟದ ಇಂಧನ ತೆರಿಗೆ ಪಡೆಯುವ ರಾಷ್ಟ್ರ ಯಾವುದು ಗೊತ್ತಾ?

ಭಾರತ ಸದ್ಯ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಗರಿಷ್ಠ ಮಟ್ಟದ ತೆರಿಗೆ ವಿಧಿಸಿದ ರಾಷ್ಟ್ರವಾಗಿದೆ. ಭಾರತ ಮೊದಲನೇ ಸ್ಥಾನದಲ್ಲಿದ್ದರೇ ಇಟಲಿ ಎರಡನೇ ಸ್ಥಾನದಲ್ಲಿದೆ.

ಕೊರೊನಾ ನಂತರ 16 ಸಾಂಕ್ರಾಮಿಕ ಕಾಯಿಲೆ ಭಯ..!

ಈಗಾಗಲೇ ಕೊರೊನಾದಿಂದಾಗಿ ಇಡೀ ಜಗತ್ತೆ ತಲ್ಲಣಗೊಂಡಿತ್ತು. ಇನ್ನೇನು ಕೊರೊನಾ ನಿಯಂತ್ರಣಕ್ಕೆ ಬಂ ತು ಎನ್ನುವಷ್ಟರಲ್ಲಿ ಈಗ ಮತ್ತೆ ಕೊರೊನಾ ಎರಡನೇ ಅಲೆ ಆರಂಭವಾಗಿ ಜನರನ್ನು ಆತಂಕಕ್ಕೀಡು ಮಾಡಿದೆ. ಈ ಆತಂಕದ ಮದ್ಯೆ ಕರೋನಾ ವೈರಸ್ ನಂತರ 16 ಕಾಯಿಲೆಗಳು ವರದಿಯಾಗಿವೆ.

ಒಂದೇ ಜೈಲಿನ 60 ಕೈದಿಗಳ ಬೆನ್ನು ಬಿದ್ದ ಮಹಾಮಾರಿ!

ಸೊಲ್ಲಾಪುರ ಜೈಲಿನಲ್ಲಿನ ಸುಮಾರು 60 ಜನ ಸಿಬ್ಬಂದಿಯಲ್ಲಿ ಕೊರೊನಾ ಕಂಡು ಬಂದಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಮಿಲಿಂದ್ ಶಂಭಾರ್ಕರ್, ಜೈಲಿನಲ್ಲಿ ಒಟ್ಟು 300 ಕೈದಿಗಳಿದ್ದಾರೆ. ಆದರೆ, 60 ಜನರಿಗೆ ಸೋಂಕು ತಗುಲಿದೆ.