ಬೆಂಗಳೂರು: ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಎಪ್‌ಡಿಎ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ನಿವಾಸಿ ವೆಂಕಟೇಶ್ ಬಂಧಿತ ಆರೋಪಿ. ಈತ ಈಗಾಗಲೇ ಬಂಧಿತನಾಗಿರುವ ಆರೋಪಿ ರಾಚಪ್ಪನ ಚಿಕ್ಕಪ್ಪನ ಮಗನಾಗಿದ್ದಾನೆ.

ಆರೋಪಿ ವೆಂಕಟೇಶ್ ಸಹ ಎಪ್‌ಡಿಎ ಪರೀಕ್ಷೆ ತೆಗೆದುಕೊಂಡಿದ್ದನು. ಈತನ ಬಂಧನದಿಂದಾಗಿ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿದೆ. ಈ ಪ್ರಕರಣದಲ್ಲಿ ಇನ್ನೂ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಬಂಧಿತನಾಗಿರುವ ಆರೋಪಿ ವೆಂಕಟೇಶ್ನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published. Required fields are marked *

You May Also Like

ಸಿದ್ದರಾಮಯ್ಯ ಸ್ವಾರ್ಥ ರಾಜಕಾರಣವೇ ಪಕ್ಷ ಬಿಡಲು ಕಾರಣ: ಸಚಿವ ಬಿ.ಸಿ ಪಾಟೀಲ್…!

ಕೊಪ್ಪಳ: ಕಾಂಗ್ರೆಸ್ ನವರು ಶಾಸಕರನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದೆ ಅವರಿಗೆ ಮೋಸ ಮಾಡಿದರು. ಇದಲ್ಲದೆ ಮುಖ್ಯಮಂತ್ರಿಯಾಗಿ…

ಡಿಎಸ್ಎಸ್ ಭೀಮವಾದ ಜಿಲ್ಲಾಧ್ಯಕ್ಷರಾಗಿ ದೇವರಾಜ ಉಳೇನೂರು ಆಯ್ಕೆ

ಉತ್ತರಪ್ರಭ ಕಾರಟಗಿ: ರಾಜ್ಯ ಅಧ್ಯಕ್ಷರಾದ ಆರ್.ಮೋಹನ್ ರಾಜ್, ರಾಜು.ಎಮ್.ತಳವಾರ ಅವರ ಆದೇಶದ ಮೇರೆಗೆ ಕರ್ನಾಟಕ ದಲಿತ…

ಶಿರಹಟ್ಟಿ ಮಾಬುಸುಬಾನಿ ಉರುಸು ರದ್ದು

ಮಾಬುಸುಬಾನಿ ಉರುಸು ರದ್ದು ಪಟ್ಟಣದಲ್ಲಿ ಭಾವೈಕ್ಯತೆ ಸಂಕೇತವಾಗಿದ್ದ ಹಜರತ್ ಮೆಹಬೂಬ ಸುಬ್ಹಾನಿ(ರಹ) ದರ್ಗಾದ ಉರುಸು ಈ ಬಾರಿ ಕೊರೊನಾದಿಂದ ರದ್ದುಗೊಳಿಸಲಾಗಿದೆ. ಉರುಸು ನಿಮಿತ್ಯ ನವೆಂಬರ್ 25 ರಿಂದ 27ರವರೆಗೆ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರದ ನಿಯಮದಂತೆ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ ಆದೇಶದ ಪ್ರಕಾರ ರದ್ದುಗೊಳಿಸಲಾಗಿದೆ.

ಕರ್ಪ್ಯು: ಜಿಲ್ಲಾಧಿಕಾರಿ ವಿವಿಧ ಸ್ಥಳಗಳಿಗೆ ಭೇಟಿ

ಗದಗ : ಜಿಲ್ಲಾದ್ಯಂತ ಜಾರಿಗೊಳಿಸಲಾದ ವಾರಾಂತ್ಯದ ಕರ್ಪ್ಯು ಹಿನ್ನೆಲಯಲ್ಲಿ ನಗರದ ವಿವಿಧ ಸ್ಥಳಗಳಿಗೆ ಜಿಲ್ಲಾಧಿಕಾರಿ ಎಂ.ಸುಂದರೇಶ್…