ಬಿಜೆಪಿಯಿಂದ ಬಿ.ಎಂ.ಟಿ.ಸಿ, ಕೆ.ಎಸ್.ಆರ್.ಟಿ.ಸಿ ಖಾಸಗೀಕರಣದ ಹುನ್ನಾರ: ಎಸ್.ಆರ್.ಪಾಟೀಲ

ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳನ್ನು ಒಂದೊಂದಾಗಿ ಖಾಸಗೀಕರಣಗೊಳಿಸುತ್ತಿದ್ದು, ಇದೀಗ ಕರ್ನಾಟಕದ @BJP4Karnataka ಸರ್ಕರವೂ ಕೂಡ ಇದೇ ಹಾದಿ ತುಳಿಯುತ್ತಿದೆ. ಬಿಎಂಟಿಸಿ ಸಂಸ್ಥೆಯ ಖಾಸಗೀಕರಣಕ್ಕೆ @BSYBJP @LaxmanSavadi ಮುಂದಾಗಿರುವುದನ್ನು ನಾನು ಖಂಡಿಸುತ್ತೇನೆ ಎಂದು ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ್ ಹೇಳಿದ್ದಾರೆ.

ಹೀರೋ ಚಿತ್ರದ ಮತ್ತೊಂದು ಹಾಡು ಪ್ರೇಕ್ಷಕರೆದರು

ರಿಷಬ್ ಶೆಟ್ಟಿ ನಟನೆಯ ಹೀರೋ ಚಿತ್ರದ ಹೀರೋ ಚಿತ್ರದ ಎದೆಯಿಂದ ದೂರವಾಗಿ ವಿಡಿಯೋ ಸಾಂಗ್ ರಿಷಬ್ ಶೆಟ್ಟಿ ಫಿಲ್ಮ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದ್ದು, ಈ ಹಾಡು ಕಡಿಮೆ ಸಮಯದಲ್ಲಿ ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ.

ಕರ‍್ಣಿಕೋತ್ಸವದಲ್ಲಿ ಗೊರವಯ್ಯ ನುಡಿದ ಭವಿಷ್ಯವೇನು.?

ಹಾವನೂರ ಗ್ರಾಮದಲ್ಲಿ ಭಾನುವಾರ ಮೈಲಾರಲಿಂಗೇಶ್ವರ ಕರ‍್ಣಿಕೋತ್ಸವದಲ್ಲಿ ಸವನಿಧಿ ಆಯಿತಲೇ ಪರಾಕ್ ಎಂದು ಗೊರವಯ್ಯ ಕರ‍್ಣಿಕ ನುಡಿದನು.

ತರಬೇತಿಗೆ ಅರ್ಜಿ ಆಹ್ವಾನ

ಕೌಶಲ್ಯಾಭಿವೃದ್ಧಿ , ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಂಸ್ಥೆಯಾದ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ ( ಸಿಡಾಕ) ಧಾರವಾಡ ಹಾಗೂ ಸಿಡಾಕ್ ಜಿಲ್ಲಾ ಕಚೇರಿ ಗದಗ ಇವರ ಸಹಯೋಗದಲ್ಲಿ ಉದ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವ ಅಬ್ಯರ್ಥಿಗಳಿಗೆ 30 ದಿನಗಳ ಉಚಿತ ಬ್ಯೂಟಿಷಿಯನ್ ಹಾಗೂ ಕಾಸ್ಮೆಟಾಲಜಿ ಕೌಶಲ್ಯಾಧಾರಿತ ಉದ್ಯಮಶೀಲತಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಫೆ.24ರಿಂದ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ

ಶರಣ ಸಂಸ್ಕೃತಿಯ ಪಾವನ ತಾಣ ಮುಳಗುಂದದ ಕಾರಣಿಕ ಶಿಶು ಬಾಲಲೀಲಾ ಮಹಾಂತ ಶಿವಯೋಗಿಗಳ 162 ನೇ ಸ್ಮರಣೋತ್ಸವದಂಗವಾಗಿ ಫೆ.24 ರಿಂದ 26 ವರೆಗೆ ಗವಿಮಠದ ಅಧ್ಯಕ್ಷ ಮಲ್ಲಿಕಾರ್ಜುನ ಶ್ರೀಗಳ ನೇತ್ರತ್ವದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಸಂಜಯ ನೀಲಗುಂದ ಹೇಳಿದರು.

ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದಲ್ಲಿ ಮತ್ತೊಬ್ಬ ಸೆರೆ

ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸುವ ಎಪ್‌ಡಿಎ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ನಿವಾಸಿ ವೆಂಕಟೇಶ್ ಬಂಧಿತ ಆರೋಪಿ. ಈತ ಈಗಾಗಲೇ ಬಂಧಿತನಾಗಿರುವ ಆರೋಪಿ ರಾಚಪ್ಪನ ಚಿಕ್ಕಪ್ಪನ ಮಗನಾಗಿದ್ದಾನೆ.