ಉತ್ತರಪ್ರಭ
ಕಾರಟಗಿ: ರಾಜ್ಯ ಅಧ್ಯಕ್ಷರಾದ ಆರ್.ಮೋಹನ್ ರಾಜ್, ರಾಜು.ಎಮ್.ತಳವಾರ ಅವರ ಆದೇಶದ ಮೇರೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ತಾಲೂಕಿನ ಹುಳ್ಕಿಹಾಳ ಗ್ರಾಮದ ದೇವರಾಜ ಉಳೇನೂರನ್ನು ಆಯ್ಕೆ ಮಾಡಲಾಗಿದೆ.
ಪಟ್ಟಣದ ಹೊರವಲಯದ ಪರಿವೀಕ್ಷಣಾ ಮಂದಿರದಲ್ಲಿ ಡಿಎಸ್ಎಸ್ ಸಂಘಟನೆಯ ಬಲವರ್ಧನೆಗೆ ಕರೆಯಲಾಗಿದ್ದ ಪದಾಧಿಕಾರಿಗಳ ಸಭೆಯಲ್ಲಿ ಕೊಪ್ಪಳ ಜಿಲ್ಲಾ ಸಂಘಟನಾ ಉಪಾಧ್ಯಕ್ಷ ಮಂಜುನಾಥ ಆರತಿ ಮಾತನಾಡಿ ಡಿಎಸ್ಎಸ್ ಭೀಮವಾದ ಸಂಘಟನೆಯ ಜಿಲ್ಲಾ ಸಂಚಾಲಕರನ್ನಾಗಿ ದೇವರಾಜ ಹುಳ್ಕಿಹಾಳ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಪದಾಧಿಕಾರಿಗಳ ಪಟ್ಟಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾಗಿ ಮಂಜುನಾಥ ಆರತಿ, ದೇವಪ್ಪ ಕರಡಿ, ಶಾಂತಪ್ಪ ಕನಕಗಿರಿರನ್ನು ಆಯ್ಕೆ ಮಾಡಲಾಗಿದ್ದು ಜಿಲ್ಲಾ ಸಲಹಾ ಸಮಿತಿ ಸದಸ್ಯರನ್ನಾಗಿ ಯಮನೂರಪ್ಪ ಪೂಜಾರಿ, ಕೆಂಚಪ್ಪ ವೀರಪುರರನ್ನು ಆಯ್ಕೆ ಮಾಡಲಾಗಿದೆ.
ಹಾಗೂ ಕಾರಟಗಿ ತಾಲೂಕ ಪದಾಧಿಕಾರಿಗಳ ಆಯ್ಕೆ ಪಟ್ಟಿಯಲ್ಲಿ ತಾಲೂಕ ಅಧ್ಯಕ್ಷರಾಗಿ ಹನುಮಂತಪ್ಪ ನಾಗನಕಲ್, ತಾಲೂಕ ಸಂಘಟನಾ ಸಂಚಾಲಕರಾಗಿ ಶಿವರಾಜ ಉಳೆನೂರು, ರಾಜು ಸಂತೋಷರನ್ನು ಆಯ್ಕೆ ಮಾಡಲಾಗಿದ್ದು, ಖಜಾಂಚಿಯಾಗಿ ಬಸವರಾಜ ಕಾರಟಗಿ ಹಾಗೂ ಬಸವರಾಜ ಈಳಿಗನೂರುರನ್ನು ಆಯ್ಕೆ ಮಾಡಿದ್ದಾರೆಂದು ತಿಳಿಸಿದರು.
ನಂತರ ಕೊಪ್ಪಳ ಜಿಲ್ಲೆಯ ನೂತನ ಸಂಘಟನಾ ಸಂಚಾಲಕ ದೇವರಾಜ ಉಳೇನೂರು ಮಾತನಾಡಿ ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯನ್ನು ಅಧ್ಯಕ್ಷರನ್ನಾಗಿ ವಹಿಸಿದ್ದಾರೆ. ಜಿಲ್ಲೆಯ ದಲಿತ ಸಮುದಾಯದ ಪರವಾಗಿ ಅವರ ಮೇಲೆ ನಡೆಯುವ ಅನ್ಯಾಯ ಶೋಷಣೆಯ ವಿರುದ್ಧ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನನ್ನ ಸ್ಥಾನ ದೊರೆಯುವಂತೆ ಮಾಡಿದ ರಾಜ್ಯ ಜಿಲ್ಲಾ ತಾಲ್ಲೂಕು ಎಲ್ಲಾ ಪದಾಧಿಕಾರಿಗಳು ಧನ್ಯವಾದಗಳನ್ನು ಸಲ್ಲಿಸುತ್ತೆನೆ ಎಂದರು. ಈ ಸಂದರ್ಭದಲ್ಲಿ ದಲಿತ ಸಂಘಟನೆಯ ಮುಖಂಡರಾದ ಅಂಜಿನಪ್ಪ ಕಾರಟಗಿ, ಹುಲಿರಾಜ ತೊಂಡಿಹಾಳ ಇದ್ದರು.