ಮುಂಬಯಿ : ಶೂಟಿಂಗ್ ಮುಗಿಸಿ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ನಟ ಅಲ್ಲು ಅರ್ಜುನ್ ಅವರ ಕ್ಯಾರವಾನ್ ಗೆ ಹಿಂದಿನಿಂದ ಲಾರಿ ಗುದ್ದಿದ ಘಟನೆ ನಡೆದಿದೆ.

ಅಲ್ಲು ಅರ್ಜುನ್ ಅವರು ಪುಷ್ಫ ಸಿನಿಮಾದಲ್ಲಿ ಸದ್ಯ ಬ್ಯೂಸಿಯಾಗಿದ್ದಾರೆ. ಆದರೆ, ಕ್ಯಾರವಾನ್ ನಲ್ಲಿ ಅಲ್ಲು ಇರಲಿಲ್ಲ. ಅವರ ಮೇಕಪ್ ಟೀಂ ಮಾತ್ರ ಇತ್ತು. ವಾಹನವು ರಂಪಚೋದವರಂನಿಂದ ಹೈದರಾಬಾದ್ ಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿಯೇ ಈ ಘಟನೆ ನಡೆದಿದೆ.

ಕ್ಯಾರವಾನ್ ನ ಚಾಲಕ ಏಕಾಏಕಿ ಬ್ರೇಕ್ ಹಾಕುತ್ತಿದ್ದಂತೆ ಹಿಂದೆ ಬರುತ್ತಿದ್ದ ಲಾರಿ ಗುದ್ದಿದೆ. ಆದರೆ, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಕುರಿತು ಖಮ್ಮಂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ನಟ ಅಲ್ಲು ಅರ್ಜುನ್ ಅವರ ಕ್ಯಾರವಾನ್ ನ್ನು ವಿಶೇಷವಾಗಿ ವಿನ್ಯಾಸಗೊಳಸಲಾಗಿತ್ತು. ಇದರ ಮೌಲ್ಯ ಸುಮಾರು ರೂ. 7 ಕೋಟಿ. ರೆಡ್ಡಿ ಕಸ್ಟಮ್ಸ್ ಎಂಬ ಕಂಪನಿ ಈ ವಾಹವನ್ನು ಡಿಸೈನ್ ಮಾಡಿದೆ.

Leave a Reply

Your email address will not be published. Required fields are marked *

You May Also Like

ಬಿಗ್ ಬಾಸ್ ಸ್ಪರ್ಧಿ ನೇಹಾಗೆ ತಾಯಿಯಾದ ಸಂಭ್ರಮ!

ವಾಷಿಂಗ್ಟನ್: ಬಿಗ್ ಬಾಸ್ ಸೀಸನ್ 3 ಸ್ಪರ್ಧಿ ನೇಹಾ ಗೌಡ ತಾಯಿಯಾದ ಸಂಭ್ರಮದಲ್ಲಿದ್ದು, ಇತ್ತೀಚೆಗಷ್ಟೇ ಹೆಣ್ಣು…

ಹ್ಯಾಪಿ ಬರ್ತಡೇ ಮೆಘಾಸ್ಟಾರ್

ಮೆಗಾಸ್ಟಾರ್ ಚಿರಂಜೀವಿ ಅವರ ಹುಟ್ಟು ಹಬ್ಬವಿಂದು. ಹೀಗಾಗಿ ಸೆಲೆಬ್ರಿಟಿಗಳು ಹಾಗೂ ನಾಯಕರು, ಅಭಿಮಾನಿಗಳು ಖುಷಿಯಿಂದ ಶುಭಾಶಯ ತಿಳಿಸುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಅಂಗವಾಗಿ ಚಿರು ಅವರು ಕಾಮನ್ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಟೀಸರ್ ಶೇರ್ ಮಾಡಿರುವ ಕನ್ನಡ ನಟ ಕಿಚ್ಚ ಸುದೀಪ್ ಮತ್ತು ಸಂಸದೆ ಸುಮಲತಾ ಅವರು ತೆಲುಗು ಚಿರಂಜೀವಿಗೆ ವಿಶ್ ಮಾಡಿದ್ದಾರೆ.

ಜೊತೆ ಜೊತೆಯಲಿ ನಿರ್ದೇಶಕ ಆಸ್ಪತ್ರೆಗೆ ದಾಖಲು

ಜನಪ್ರಿಯ ಟಿವಿ ಧಾರಾವಾಹಿ ಜೊತೆ ಜೊತೆಯಲಿ ನಿರ್ದೇಶಕ ಆರೂರು ಜಗದೀಶ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಅವರನ್ನು ಕಳೆದ ಒಂದು ವಾರದಿಂದ ಜಗದೀಶ್ ಮಣಿಪಾಲದ

ಮನೆಯಲ್ಲಿಯೇ ಯಶ್ : ಜ್ಯೂನೀಯರ್ ರಾಧಿಕಾ ಫುಲ್ ಖುಷ್..!

ಲಾಕ್​ಡೌನ್​ನಿಂದಾಗಿ ಯಶ್​ ಮನೆಯಲ್ಲಿಯೇ ಉಳಿಯುವಂತಾಗಿದ್ದು, ಮಕ್ಕಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಜೂನಿಯರ್‌ ರಾಧಿಕಾ ಫುಲ್ ಖುಷಿಯಾಗಿದ್ದಾರೆ.