ಲಾಕ್​ಡೌನ್​ನಿಂದಾಗಿ ಯಶ್​ ಮನೆಯಲ್ಲಿಯೇ ಉಳಿಯುವಂತಾಗಿದ್ದು, ಮಕ್ಕಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ರಾಧಿಕಾ ಪಂಡಿತ್‌ ಒಬ್ಬರೇ ಇಬ್ಬರು ಮಕ್ಕಳನ್ನು ಸಂತೈಸುವ ಶ್ರಮ ಕಡಿಮೆಯಾಗಿದ್ದು, ಅವರಿಗೂ ಸ್ವಲ್ಪ ರಿಲೀಫ್‌ ಸಿಕ್ಕಿದೆ. ಇದರಿಂದಾಗಿ ಜೂನಿಯರ್‌ ರಾಧಿಕಾ (ಆರ್ಯಾ) ಕೂಡ ಖುಷಿಯಾಗಿದ್ದಾಳೆ.

ಸ್ಯಾಂಡಲ್‌ವುಡ್‌ ನಟ​ ಯಶ್​ ಮತ್ತು ನಟಿ ರಾಧಿಕಾ ಪಂಡಿತ್​ ತಮ್ಮ 2ನೇ ಮಗುವಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಮ್ಮ ಎರಡನೇ ಮಗು ಹುಟ್ಟಿದ ಆರು ತಿಂಗಳ ಬಳಿಕ ರಾಧಿಕಾ​ ದಂಪತಿ ತಮ್ಮ ಮಗನ ಜೊತೆಗಿರುವ ಫೋಟೋವನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

ಜ್ಯೂನಿಯರ್​ ಯಶ್​ ಹುಟ್ಟಿದ ಸಂದರ್ಭದಲ್ಲಿ ರಾಕಿಂಗ್​ ಸ್ಟಾರ್​ ಮತ್ತು ರಾಧಿಕಾ ಯಾವ ಮಾಹಿತಿಯನ್ನೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಜ್ಯೂನೀಯರ್ ಯಶ್ ಬಗ್ಗೆ ಸಿನೀಯರ್ ಯಶ್, ನನ್ನ ಮಗ ತುಂಬ ಡಿಮ್ಯಾಂಡ್ ಮಾಡುತ್ತಾನೆ. ನಾನು ಮಲಗುವವರೆಗೆ ಅವನು ಮಲಗುವುದಿಲ್ಲ. ನಾನು ಮತ್ತು ರಾಧಿಕಾ ಅವನ ಜೊತೆಗೆ ಮಲಗಬೇಕು. ನಾವು ಬೆಡ್‌ ಹತ್ತಿರ ಹೋಗುವವರೆಗೂ ಅವನು ಎಚ್ಚರವಾಗಿರುತ್ತಾನೆ. ಆಮೇಲೆ ರಾತ್ರಿ ಪುನಃ ಎಚ್ಚರಗೊಳ್ಳುತ್ತಾನೆ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You May Also Like

ರಾಜ್ಯದಲ್ಲಿಂದು 317 ಕೊರೊನಾ ಪಾಸಿಟಿವ್: ಯಾವ ಜಿಲ್ಲೆಯಲ್ಲಿ ಎಷ್ಟು..?

ಬೆಂಗಳೂರು: ರಾಜ್ಯದಲ್ಲಿಂದು 317 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7530…

ಗದಗ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯ ಅಂಧಾ ದರ್ಬಾರ್…!

ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರೆ ಮರಳು ಗಣಿಗಾರಿಕೆಗೆ ಸಿಲುಕಿ ನರಳುವಂತಾಗಿದೆ. ನಿತ್ಯ ಲೆಕ್ಕವಿಲ್ಲದಷ್ಟು ತುಂಗಭದ್ರೆಯ ಒಡಲು ಬಗೆಯುತ್ತಿದ್ದರೂ ತುಂಗವ್ವಾ ಮರಳು ಗಣಿಗಳ್ಳರ ದಾಯಕ್ಕೆ ಅಸಹಾಯಕಳಾಗಿ ಮೈಯೊಡ್ಡಿದ್ದಾಳೆ.

ದಿಗ್ವಿಜಯ್ ಸಿಂಗ್ ನಕಲಿ ಟ್ವೀಟರ್ ರಚನೆ: ದೂರು ನೀಡಿದ ಕೈ ನಾಯಕ

ಭೋಪಾಲ್: ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ದಿಗ್ವಿಜಯ್ ಸಿಂಗ್ ಹೆಸರಿನಲ್ಲಿ ನಕಲಿ ಟ್ವೀಟರ್…

ರಾಜ್ಯದಲ್ಲಿಂದು ಮತ್ತೆ 69 ಕೊರೋನಾ ಕೇಸ್..!

ಇಂದು ಸಂಜೆ ಬಿಡುಗಡೆ ಮಾಡಿದ ಹೆಲ್ಥ್ ಬುಲಿಟಿನ್ ನಲ್ಲಿ ರಾಜ್ಯದಲ್ಲಿ ಇಂದು ಮತ್ತೆ 69 ಕೇಸ್ ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ 1056ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.