ವಾಷಿಂಗ್ಟನ್: ಬಿಗ್ ಬಾಸ್ ಸೀಸನ್ 3 ಸ್ಪರ್ಧಿ ನೇಹಾ ಗೌಡ ತಾಯಿಯಾದ ಸಂಭ್ರಮದಲ್ಲಿದ್ದು, ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಕುರಿತು ನೇಹಗೌಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿಕೊಳ್ಳುವ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ನೇಹಾ ಗೌಡ ಪತಿಯೊಂದಿಗೆ ಅಮೆರಿಕಾದ ನಾರ್ತ್ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಪತಿ ಸೇರಿದಂತೆ ಕುಟುಂಬದವರು ತಮ್ಮ ಮನೆಗೆ ಹೊಸ ಸದಸ್ಯೆಯನ್ನು ಬರಮಾಡಿಕೊಂಡಿದ್ದಾರೆ.
ನೇಹಾ ಗೌಡ ವೃತ್ತಿಯಲ್ಲಿ ಗಗನಸಖಿಯಾಗಿದ್ದು, ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಲ್ಲದೇ ರಿಯಾಲಿಟಿ ಶೋ ಬಿಗ್ಬಾಗಸ್ ಸೀಸನ್ 3ರಲ್ಲಿ ಭಾಗವಹಿಸಿದ್ದರು. ಬಿಗ್ಬಾಗಸ್ ಮನೆಯಲ್ಲಿ ಉತ್ತಮವಾಗಿ ಆಟವಾಡಿದ್ದರು. ಆದರೆ ಬಿಗ್ಬಾ ಸ್ ಮನೆಯಿಂದ 5ನೇ ಸ್ಪರ್ಧಿ ಆಗಿ ನೇಹಾ ಗೌಡ ಹೊರ ಬಂದಿದ್ದರು.